ಕರ್ನಾಟಕ

karnataka

By

Published : May 9, 2022, 5:44 PM IST

ETV Bharat / bharat

ತೆರವು ಕಾರ್ಯಾಚರಣೆಯಿಂದ ಶಾಂತಿ ಕದಡುವ ಯತ್ನ: ಎಎಪಿ ಶಾಸಕ ಖಾನ್​ ಆರೋಪ!

ದೆಹಲಿಯ ಶಾಹೀನ್ ಬಾಗ್ ಪ್ರದೇಶದಲ್ಲಿ ನಡೆಯುತ್ತಿದ್ದ ತೆರವು ಕಾರ್ಯಾಚರಣೆಕ್ಕೆ ಸ್ಥಳೀಯರು ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ಕೈಗೊಂಡಿದ್ದರು. ಈ ಪ್ರತಿಭಟನೆಗೆ ಸ್ಥಳೀಯ ಶಾಸಕ ಸಾಥ್​ ನೀಡಿದ್ದು, ಎಂಸಿಡಿ ಕ್ರಮ ಪ್ರಶ್ನಿಸಿದ್ದಾರೆ.

Amanatullah Khan claims MCD disturbing peace  MCD anti encroachment drive  Amanatullah Khan joined locals in protest  Shaheen Bagh protests  ನವದೆಹಲಿಯಲ್ಲಿ ತೆರುವು ಕಾರ್ಯಾಚರಣೆಗೆ ವಿರೋಧ  ಶಾಹೀನ್​ ಬಾಗ್​ನಲ್ಲಿ ತೆರವು ಕಾರ್ಯಾಚರಣಗೆ ವಿರೋಧಿಸಿ ಪ್ರತಿಭಟನೆ  ತೆರುವು ಕಾರ್ಯಾಚರಣೆ ವಿರೋಧಿ ಪ್ರತಿಭಟನೆಗೆ ಶಾಸಕ ಖಾನ್​ ಸಾಥ್​ ನವದೆಹಲಿ ಎಂಸಿಡಿ ಸುದ್ದಿ
ಶಾಂತಿ ಕದಡಿಸುವ ಯತ್ನ

ನವದೆಹಲಿ:ನಗರದ ಶಾಹೀನ್ ಬಾಗ್ ಪ್ರದೇಶದಲ್ಲಿ ಕೆಲ ದಿನಗಳಿಂದ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ತೆರವು ಕಾರ್ಯಾಚರಣೆ ಕೈಗೊಂಡಿದೆ. ಈ ದಿನವೂ ದೆಹಲಿ ಪೊಲೀಸ್​ ನೇತೃತ್ವದಲ್ಲಿ ಎಂಸಿಡಿ ತೆರವು ಕಾರ್ಯಾಚರಣೆ ಕೈಗೊಂಡಿತ್ತು. ಆದರೆ ಸ್ಥಳೀಯ ಜನ ತೆರವು ಕಾರ್ಯಾಚರಣೆ ವಿರೋಧಿಸಿ ಪ್ರತಿಭಟನೆ ಕೈಗೊಂಡಿತ್ತು. ಈ ಪ್ರತಿಭಟನೆಗೆ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಭಾಗಿಯಾಗಿ ಸ್ಥಳೀಯರಿಗೆ ಸಾಥ್​ ನೀಡಿದರು.

ಎಎಪಿ ಪಕ್ಷದ ಶಾಸಕ ಖಾನ್​ ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಂಸಿಡಿ) ಕ್ರಮವನ್ನು ವಿರೋಧಿಸಿ ಸ್ಥಳೀಯರೊಂದಿಗೆ ಸೇರಿ ಪ್ರತಿಭಟನೆ ಮುನ್ನಡೆಸಿದರು. ಇದಕ್ಕೂ ಮುನ್ನ ತೆರುವು ಕಾರ್ಯಾಚರಣೆಗೆ ತಂದಿದ್ದ ಬುಲ್ಡೋಜರ್‌ಗಳನ್ನು ತಡೆಯಲು ಸ್ಥಳೀಯರು ರಸ್ತೆಯಲ್ಲೇ ಕುಳಿತು ಪ್ರತಿಭಟನೆ ಕೈಗೊಂಡಿದ್ದರು.

ಈ ವೇಳೆ ಮಾತನಾಡಿದ ಶಾಸಕ ಖಾನ್​, ಇಲ್ಲಿನ ಮಸೀದಿಯ ಹೊರಗಿರುವ ವಾಜು ಖಾನಾ ಮತ್ತು ಶೌಚಾಲಯಗಳನ್ನು ಈ ಹಿಂದೆ ಪೊಲೀಸರ ಸಮ್ಮುಖದಲ್ಲಿ ತೆರವು ಮಾಡಲಾಗಿತ್ತು. ಯಾವುದೇ ಅತಿಕ್ರಮಣ ಇಲ್ಲದಿರುವಾಗ ಅವರು ಇಲ್ಲಿಗೆ ಏಕೆ ಬಂದಿದ್ದಾರೆ? ಕೇವಲ ರಾಜಕೀಯ ಮಾಡುವುದ್ದಕ್ಕಾಗಿಯಾ? ಎಂದು ಪ್ರಶ್ನಿಸಿದರು.

ಓದಿ:ಬುಲ್ಡೋಜರ್‌ಗಳು ಅನ್ಸಾರ್‌, ಅಹಮದ್‌ ಮೇಲೆ ಕೆಲಸ ಮಾಡ್ತವೆ; ಅರ್ಜುನ್‌, ಅಜಯ್‌ ಮೇಲಲ್ಲ: ಓವೈಸಿ

ಎಂಸಿಡಿ ಶಾಂತ ವಾತಾವರಣವನ್ನು ಹದಗೆಡೆಸಲು ಪ್ರಯತ್ನಿಸುತ್ತಿದೆ. ಈ ಪ್ರದೇಶದಲ್ಲಿ ಎಲ್ಲ ಒತ್ತುವರಿ ತೆರುವುಗೊಳಿಸಿದಾಗಿದೆ. ಆದರೆ ಎಂಸಿಡಿ ಮತ್ತೆ ಬಂದಿದೆ. ನನ್ನ ಕ್ಷೇತ್ರದಲ್ಲಿ ಒತ್ತುವರಿ ಆಗಿದ್ದರೆ ಹೇಳಿ. ನಾನೇ ಮುಂದೆ ನಿಂತು ತೆರುವುಗೊಳಿಸುತ್ತೇನೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇಂದು ಮುಂಜಾನೆ ದೆಹಲಿ ಪೊಲೀಸ್ ಸಿಬ್ಬಂದಿ ಸಹಾಯದಿಂದ ಈ ಪ್ರದೇಶದಲ್ಲಿ ಎಂಸಿಡಿ ಅತಿಕ್ರಮಣಗೊಂಡ ಪ್ರದೇಶವನ್ನು ತೆರವುಗೊಳಿಸುವ ಕಾರ್ಯಾಚರಣೆ ಕೈಗೊಂಡಿತ್ತು. ಇದನ್ನು ವಿರೋಧಿಸಿ ಇಲ್ಲಿನ ಜನ ಪ್ರತಿಭಟನೆ ಕೈಗೊಂಡಿದ್ದರು.

ABOUT THE AUTHOR

...view details