ಕರ್ನಾಟಕ

karnataka

ETV Bharat / bharat

ಅತಿಕ್ರಮಣ ತೆರವಿಗೆ ಅಡ್ಡಿ: ದೆಹಲಿ ಆಪ್​ ಶಾಸಕನ ಬಂಧನ

ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ ವ್ಯಾಪ್ತಿಯಲ್ಲಿ ಅತಿಕ್ರಮಣ ತೆರವು ವಿರೋಧಿಸಿ, ಹಿಂಸಾಚಾರಕ್ಕೆ ಕಾರಣವಾಗಿದ್ದ ಆರೋಪದಲ್ಲಿ ಆಮ್​ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ಪೊಲೀಸರು ಬಂಧಿಸಿದ್ದಾರೆ.

AAP MLA Amanatullah Khan arrested for 'rioting', 'blocking' demolition drive
ಅತಿಕ್ರಮಣ ತೆರವು ಕಾರ್ಯಾಚರಣೆಗೆ ಅಡ್ಡಿ ಆರೋಪ: ಆಪ್​ ಶಾಸಕನ ಬಂಧನ

By

Published : May 13, 2022, 7:15 AM IST

ನವದೆಹಲಿ:ಅಕ್ರಮವಾಗಿ ಅತಿಕ್ರಮಣ ಮಾಡಲ್ಪಟ್ಟಿದ್ದ ಸ್ಥಳವನ್ನು ಸರ್ಕಾರ ತೆರವುಗೊಳಿಸುವ ವೇಳೆ ಅಡ್ಡಿಪಡಿಸಿ, ಗಲಭೆ ಸೃಷ್ಟಿಸಿದ ಆರೋಪದಲ್ಲಿ ಆಮ್ ಆದ್ಮಿ ಪಕ್ಷದ ಶಾಸಕ ಅಮಾನತುಲ್ಲಾ ಖಾನ್ ಅವರನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ದಕ್ಷಿಣ ದೆಹಲಿ ಮುನ್ಸಿಪಲ್ ಕಾರ್ಪೊರೇಷನ್ (ಎಸ್‌ಡಿಎಂಸಿ) ಮದನ್‌ಪುರ ಖಾದರ್ ಪ್ರದೇಶದಲ್ಲಿ ಅತಿಕ್ರಮಣ ತೆರವು ಕಾರ್ಯದಲ್ಲಿ ತೊಡಗಿತ್ತು.

ಭಾರತೀಯ ದಂಡ ಸಂಹಿತೆಯ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಅಮಾನತುಲ್ಲಾ ಖಾನ್ ಮತ್ತು ಅವರ ಐವರು ಬೆಂಬಲಿಗರ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಗುರುವಾರ ಬೆಳಗ್ಗೆ ಅತಿಕ್ರಮಣ ತೆರವು ವಿರೋಧಿಸಿ, ಪಾಲಿಕೆ ಅಧಿಕಾರಿಗಳ ವಿರುದ್ಧ ಜನರು ಪ್ರತಿಭಟನೆ ನಡೆಸುತ್ತಿದ್ದರು. ಈ ವೇಳೆ ಸ್ಥಳಕ್ಕೆ ಅಮಾನತುಲ್ಲಾ ಖಾನ್ ಆಗಮಿಸಿ, ಪಾಲಿಕೆ ಬಡವರ ಮನೆಗಳನ್ನು ಕೆಡವುತ್ತಿದೆ ಎಂದು ಆರೋಪಿಸಿದ್ದರು.

ನೀವು ಅತಿಕ್ರಮ ತೆರವುಗೊಳಿಸುವುದಾಗಿ ಹೇಳಿದ್ದೀರಿ. ಈ ವಿಷಯದಲ್ಲಿ ನಾನು ನಿಮ್ಮೊಂದಿಗಿದ್ದೇನೆ. ಆದರೆ ನೀವು ಬಡವರ ಮನೆಗಳನ್ನು ಏಕೆ ನೆಲಸಮ ಮಾಡುತ್ತಿದ್ದೀರಿ?. ಈ ಪ್ರದೇಶದಲ್ಲಿ ಒಂದೇ ಒಂದು ಜಾಗ ಅತಿಕ್ರಮವಾಗಿಲ್ಲ ಎಂದು ಅವರು ಹೇಳಿದ್ದಾರೆ.

ಆಪ್ ಶಾಸಕ ಸ್ಥಳಕ್ಕೆ ತಲುಪಿದ ಸುಮಾರು ಒಂದು ಗಂಟೆಯ ನಂತರ ಸ್ಥಳದಲ್ಲಿ ಕಲ್ಲು ತೂರಾಟ ನಡೆದಿದ್ದು, ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದೆ. ಗುಂಪು ಚದುರಿಸಲು ಪೊಲೀಸರು ಬಲಪ್ರಯೋಗ ಮಾಡಬೇಕಾಯಿತು. ಗದ್ದಲದ ನಡುವೆ, ಹಲವಾರು ಜನರನ್ನು ಬಂಧಿಸಲಾಗಿತ್ತು. ಮೂಲಗಳ ಪ್ರಕಾರ, ಖಾನ್ ಅವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಇದನ್ನೂ ಓದಿ:ತಾಜ್​ಮಹಲ್​ನ 22 ಬಾಗಿಲು ತೆರೆಸಲು ಕೋರಿ ಸಲ್ಲಿಸಿದ ಅರ್ಜಿ ವಜಾಗೊಳಿಸಿದ ಅಲಹಾಬಾದ್​ ಕೋರ್ಟ್​

ABOUT THE AUTHOR

...view details