ಕರ್ನಾಟಕ

karnataka

ETV Bharat / bharat

ರೈತರ ಪ್ರತಿಭಟನೆಗೆ ಎಎಪಿ ಸದಾ ಬೆನ್ನಿಗೆ ನಿಂತಿರುತ್ತೆ: ಸಂಜಯ್​ ಸಿಂಗ್​ - ಯೋಗಿ ಆದಿತ್ಯಾನಾಥ್​ ವಿರುದ್ಧ ಸಂಜಯ್​ ಸಿಂಗ್​

ನೂತನ ಕೃಷಿ ಕಾನೂನುಗಳ ವಿರುದ್ಧ ಕೈಗೊಂಡಿರುವ ರೈತರ ಪ್ರತಿಭಟನೆಗೆ ಆಮ್​ ಆದ್ಮಿ ಪಕ್ಷ ಸದಾ ನಿಂತಿದೆ ಎಂದು ಎಎಪಿ ನಾಯಕ ಹೇಳಿದ್ದಾರೆ.

Sanjay Singh attacks BJP  Sanjay Singh attacks Yogi Adityanath  Sanjay Singh supports Farmer protest  ಬಿಜೆಪಿ ವಿರುದ್ಧ ಸಂಜಯ್​ ಸಿಂಗ್​ ವಾಗ್ದಾಳಿ  ಯೋಗಿ ಆದಿತ್ಯಾನಾಥ್​ ವಿರುದ್ಧ ಸಂಜಯ್​ ಸಿಂಗ್​ ರೈತರ ಪ್ರತಿಭಟನೆಗೆ ಬೆಂಬಲಿಸಿದ ಸಂಜಯ್​ ಸಿಂಗ್​ ವಾಗ್ದಾಳಿ
ಸಂಜಯ್​ ಸಿಂಗ್​

By

Published : Jan 29, 2021, 1:49 PM IST

ನವದೆಹಲಿ: ಕೇಂದ್ರದ ವಿವಾದಾತ್ಮಕ ಕೃಷಿ ಕಾನೂನುಗಳ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ರೈತರೊಂದಿಗೆ ನಮ್ಮ ಪಕ್ಷ ನಿಂತಿದೆ ಎಂದು ಎಎಪಿ ನಾಯಕ ಸಂಜಯ್ ಸಿಂಗ್ ಹೇಳಿದ್ದಾರೆ.

ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾರತೀಯ ಕಿಸಾನ್ ಯೂನಿಯನ್‌ನ (ಬಿಕೆಯು) ರಾಷ್ಟ್ರೀಯ ವಕ್ತಾರ ರಾಕೇಶ್ ಟಿಕೈಟ್ ಅವರೊಂದಿಗೆ ಮಾತನಾಡಿದ್ದಾರೆ. ಗಾಜಿಯಾಬಾದ್‌ನ ಯುಪಿ ಗೇಟ್ ಪ್ರತಿಭಟನಾ ಸ್ಥಳಕ್ಕೆ ನೀರು ಸರಬರಾಜು ಕಡಿತಗೊಳಿಸಲಾಗಿದೆ. ಸಂಸತ್ತಿನಲ್ಲಿ ನಮ್ಮ ಪಕ್ಷವು ಈ ವಿಷಯದ ಬಗ್ಗೆ ಚರ್ಚಿಸಲಿದೆ ಎಂದು ರಾಜ್ಯಸಭಾ ಸಂಸದರು ಹೇಳಿದರು.

ಟಿಕಾಯತ್​ ಅವರು ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಆದರೆ ಪ್ರತಿಭಟನೆಯನ್ನು ಕೊನೆಗೊಳಿಸುವುದಿಲ್ಲ ಎಂದು ಅವರು ಹೇಳಿದರು. ಗಣರಾಜ್ಯೋತ್ಸವದಂದು ದೆಹಲಿಯಲ್ಲಿ ನಡೆದ ಹಿಂಸಾಚಾರ ನಡೆದ ಬಳಿಕ ಕೇಂದ್ರದ ಕೃಷಿ ಕಾನೂನುಗಳ ವಿರುದ್ಧ ಮೂರು ರೈತ ಸಂಘಗಳು ತಮ್ಮ ಪ್ರತಿಭಟನೆ ಹಿಂತೆಗೆದುಕೊಂಡಿವೆ. ಎಎಪಿ ಪ್ರತಿಭಟನಾ ನಿರತ ರೈತರೊಂದಿಗೆ ಇದೆ ಎಂದು ಸಿಂಗ್ ಹೇಳಿದರು.

ರೈತರ ವಿರುದ್ಧ ಹಿಂಸಾಚಾರ ನಡೆದರೆ ಮತ್ತು ಪೊಲೀಸರು ಪ್ರತಿಭಟನಾ ಸ್ಥಳಗಳನ್ನು ಬಲವಂತವಾಗಿ ಖಾಲಿ ಮಾಡಲು ಪ್ರಯತ್ನಿಸಿದರೆ ಎಎಪಿ ಪ್ರತಿಭಟನೆಯನ್ನು ತೀವ್ರಗೊಳಿಸುತ್ತದೆ ಮತ್ತು ಎಎಪಿ ನಾಯಕರು ಸ್ವಯಂ ಪ್ರೇರಣೆಯಿಂದ ನ್ಯಾಯಾಲಯದ ಬಂಧನವೂ ಸಹ ಆಗ್ತಾರೆ ಎಂದು ಅವರು ಹೇಳಿದರು.

ಪ್ರತಿಭಟನಾ ಸ್ಥಳಗಳಿಗೆ ನೀರು ಸರಬರಾಜು ಕಡಿತಗೊಳಿಸಲಾಗಿದೆ. ಶೌಚಾಲಯಗಳನ್ನು ತೆಗೆದು ಹಾಕಲಾಗಿದೆ ಎಂದು ಟಿಕಾಯತ್​ ಕೇಜ್ರಿವಾಲ್​ಗೆ ತಿಳಿಸಿದ್ದಾರೆ ಎಂದು ಎಎಪಿ ಹಿರಿಯ ಮುಖಂಡರು ಹೇಳಿದರು. ಸಂಸತ್ತಿನಲ್ಲಿ ಎಎಪಿ ಈ ವಿಷಯದ ಬಗ್ಗೆ ಚರ್ಚಿಸಲಿದೆ ಎಂದು ಸಿಂಗ್ ಹೇಳಿದರು.

For All Latest Updates

ABOUT THE AUTHOR

...view details