ಕರ್ನಾಟಕ

karnataka

ETV Bharat / bharat

ಪಂಜಾಬ್ ವಿಧಾನಸಭೆ ಚುನಾವಣೆ: ಸಿಎಂ ಅಭ್ಯರ್ಥಿ ಆಯ್ಕೆಯನ್ನು ಜನತೆಗೆ ಬಿಟ್ಟ ಕೇಜ್ರಿವಾಲ್ - ಪಂಜಾಬ್ ಸಿಎಂ ಅಭ್ಯರ್ಥಿ

ಪಂಜಾಬ್ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಆಮ್​ ಆದ್ಮಿ ಪಕ್ಷ (ಆಪ್‌) ರಾಜ್ಯದ ಜನತೆಗೆ ಬಿಟ್ಟಿದೆ. ಯಾರು ಸಿಎಂ ಅಭ್ಯರ್ಥಿ ಆಗಬೇಕು ಎಂಬ ಕುರಿತು 7074870748 ಸಂಖ್ಯೆಗೆ ಸಂದೇಶ ರವಾನಿಸಿ ಎಂದು ಅರವಿಂದ್ ಕೇಜ್ರಿವಾಲ್ ತಿಳಿಸಿದರು.

cm Arvind Kejriwal
ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್

By

Published : Jan 13, 2022, 4:23 PM IST

ಪಂಜಾಬ್: ಪಂಜಾಬ್ ವಿಧಾನಸಭೆಗೆ ಚುನಾವಣೆ ಘೋಷಣೆಯಾಗಿದ್ದು, ಅಧಿಕಾರದ ಚುಕ್ಕಾಣಿ ಹಿಡಿಯುವ ತವಕದಲ್ಲಿರುವ ಆಮ್​ ಆದ್ಮಿ ಪಕ್ಷ ರಾಜ್ಯದ ಜನರಿಗೆ ಭರಪೂರ ಕೊಡುಗೆಗಳನ್ನು ಘೋಷಣೆ ಮಾಡಿದೆ. ಇದೀಗ ಮುಖ್ಯಮಂತ್ರಿ ಅಭ್ಯರ್ಥಿ ಆಯ್ಕೆಯನ್ನು ಪಕ್ಷವು ಪಂಜಾಬ್​​ ಜನತೆಗೆ ಬಿಟ್ಟಿದೆ.

ಈಗಾಗಲೇ ತಮ್ಮ 'ಮಾದರಿ ಪಂಜಾಬ್'​ ಅನ್ನು ಜನತೆಯ ಮುಂದಿಟ್ಟಿರುವ ಆಮ್​ ಆದ್ಮಿ ಪಕ್ಷದಿಂದ ಸಿಎಂ ಅಭ್ಯರ್ಥಿ ಯಾರಾಗಲಿದ್ದಾರೆ ಎಂಬ ಕುತೂಹಲ ಜನರಲ್ಲಿ ಮೂಡಿದೆ. ಈ ಬಗ್ಗೆ ಪ್ರತಿಕ್ರಿಯಿಸಿರುವ ಅರವಿಂದ್ ಕೇಜ್ರಿವಾಲ್‌, "ತಮ್ಮ ಪಕ್ಷದ ಸಿಎಂ ಅಭ್ಯರ್ಥಿ ಯಾರಾಗಬೇಕು ಎಂಬುದನ್ನು ಜನರೇ ನಿರ್ಧರಿಸುತ್ತಾರೆ. ಜನರು ಆಯ್ಕೆ ಮಾಡಿದ ಅಭ್ಯರ್ಥಿಯೇ ಎಎಪಿ ಸಿಎಂ ಅಭ್ಯರ್ಥಿ ಆಗಲಿದ್ದಾರೆ'' ಎಂದರು.

ಇದೇ ವೇಳೆ, ಕೇಜ್ರಿವಾಲ್​ ಅವರು ಸಿಎಂ ಅಭ್ಯರ್ಥಿ ಆಯ್ಕೆಗೆ ವಿನೂತನ ಕ್ರಮ ಪರಿಚಯಿಸಿದ್ದಾರೆ. ಜನರು ಆಪ್‌ ಪಕ್ಷದಿಂದ ಯಾರು ಸಿಎಂ ಅಭ್ಯರ್ಥಿ ಆಗಬೇಕು ಎಂಬ ಕುರಿತು 7074870748 ಸಂಖ್ಯೆಗೆ ಸಂದೇಶ ರವಾನಿಸಬೇಕು. ಈ ಮೂಲಕ ಜನರು ಯಾರನ್ನು ಆಯ್ಕೆ ಮಾಡಿರುತ್ತಾರೋ ಅವರನ್ನೇ ಸಿಎಂ ಅಭ್ಯರ್ಥಿ ಆಗಿ ಘೋಷಿಸಲಾಗುವುದು ಎಂದು ತಿಳಿಸಿದರು.

ಅಭ್ಯರ್ಥಿಯ ಆಯ್ಕೆ ವಿಚಾರವಾಗಿ ಮೇಲೆ ತಿಳಿಸಿದ ಸಂಖ್ಯೆಗೆ ಕರೆ, ಸಂದೇಶ ಅಥವಾ ವಾಟ್ಸಾಪ್ ಮಾಡಬೇಕು. ಈ ಪ್ರಕ್ರಿಯೆಗೆ ಜನವರಿ 17 ರ ಸಂಜೆ 5 ಗಂಟೆಯವರೆಗೆ ಅವಕಾಶ ಇರುತ್ತದೆ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ:ಮುಂದಿನ ವಾರ ಪಂಜಾಬ್ ಸಿಎಂ ಅಭ್ಯರ್ಥಿಯ ಹೆಸರು ಘೋಷಣೆ: ಅರವಿಂದ್ ಕೇಜ್ರಿವಾಲ್

ಪಂಜಾಬ್ ವಿಧಾನಸಭಾ ಚುನಾವಣೆಗೆ ಫೆಬ್ರವರಿ 14 ರಂದು ಮತದಾನ ನಡೆಯಲಿದ್ದು, ಮಾರ್ಚ್ 10 ರಂದು ಮತ ಎಣಿಕೆ ನಡೆಯಲಿದೆ.

ABOUT THE AUTHOR

...view details