ಕರ್ನಾಟಕ

karnataka

ETV Bharat / bharat

ಪಂಜಾಬ್ ವಿಶ್ವವಿದ್ಯಾನಿಲಯ ಅಧ್ಯಕ್ಷ ಸ್ಥಾನ ಆಪ್ ಪಾಲು...ಕಾರ್ಯಕರ್ತರ ವಿಜಯೋತ್ಸವ

ಆಮ್ ಆದ್ಮಿ ಪಕ್ಷದ ವಿದ್ಯಾರ್ಥಿ ಘಟಕ ಛತ್ರ ಯುವ ಸಂಘರ್ಷ ಸಮಿತಿ (ಸಿವೈಎಸ್ಎಸ್) ಪಂಜಾಬ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಸ್ಥಾನ ಆಮ್​ ಆದ್ಮಿ ಪಕ್ಷದ ಪಾಲಾಗಿದೆ.

AAP entry in to student politics
ಪಂಜಾಬ್ ವಿಶ್ವವಿದ್ಯಾನಿಲಯ ಅಧ್ಯಕ್ಷ ಸ್ಥಾನ ಆಪ್ ಪಾಲು

By

Published : Oct 19, 2022, 12:04 PM IST

Updated : Oct 19, 2022, 12:46 PM IST

ಚಂಡೀಗಢ(ಪಂಜಾಬ್​): ಆಮ್ ಆದ್ಮಿ ಪಕ್ಷ ರಾಜಕೀಯವಲ್ಲದೇ ವಿದ್ಯಾರ್ಥಿ ಸಂಘಟನೆಯಾಗಿಯೂ ಅಡಿ ಇಟ್ಟಿದೆ. ಆಪ್​ ವಿದ್ಯಾರ್ಥಿ ಘಟಕ ಛತ್ರ ಯುವ ಸಂಘರ್ಷ ಸಮಿತಿ (ಸಿವೈಎಸ್ಎಸ್) ಪಂಜಾಬ್ ವಿಶ್ವವಿದ್ಯಾನಿಲಯದ ವಿದ್ಯಾರ್ಥಿ ಪರಿಷತ್ತಿನ ಅಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿ ಜಯಭೇರಿ ಬಾರಿಸಿದೆ. ಪಂಜಾಬ್ ವಿಶ್ವವಿದ್ಯಾನಿಲಯ ಕ್ಯಾಂಪಸ್ ಸ್ಟೂಡೆಂಟ್ಸ್ ಕೌನ್ಸಿಲ್ (PUCSC) ಚುನಾವಣೆಯಲ್ಲಿ ಸಿವೈಎಸ್ಎಸ್ ಸ್ಪರ್ಧಿಸಿದ್ದು ಇದೇ ಮೊದಲು.

ಕಾರ್ಯಕರ್ತರ ವಿಜಯೋತ್ಸವ

ಆಯುಷ್ ಖಟ್ಕರ್ ಅವರು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ (ಎಬಿವಿಪಿ) ಹರೀಶ್ ಗುಜ್ಜರ್ ಅವರನ್ನು 660 ಮತಗಳ ಅಂತರದಿಂದ ಸೋಲಿಸಿ 27,12 ಮತಗಳನ್ನು ಗಳಿಸುವ ಮೂಲಕ ಪಿಯುಸಿಎಸ್‌ಸಿಯ ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಕಾಂಗ್ರೆಸ್‌ನ ವಿದ್ಯಾರ್ಥಿ ಘಟಕವಾದ ನ್ಯಾಷನಲ್ ಸ್ಟೂಡೆಂಟ್ಸ್ ಯೂನಿಯನ್ ಆಫ್ ಇಂಡಿಯಾದ (ಎನ್‌ಎಸ್‌ಯುಐ) ಹರ್ಷದೀಪ್ ಸಿಂಗ್ ಬಾತ್ ಮತ್ತು ಮನೀಶ್ ಬುರಾ ಕ್ರಮವಾಗಿ ಉಪಾಧ್ಯಕ್ಷ ಮತ್ತು ಜಂಟಿ ಕಾರ್ಯದರ್ಶಿ ಸ್ಥಾನವನ್ನು ಪಡೆದರು.

ಇದನ್ನೂ ಓದಿ:ಗ್ರೆನೇಡ್​ ಎಸೆದು ಇಬ್ಬರು ಕಾರ್ಮಿಕರ ಹತ್ಯೆಗೈದಿದ್ದ ಹೈಬ್ರಿಡ್​ ಉಗ್ರ ಹತ

ಕಾರ್ಯದರ್ಶಿ ಸ್ಥಾನಕ್ಕೆ ಭಾರತೀಯ ರಾಷ್ಟ್ರೀಯ ವಿದ್ಯಾರ್ಥಿ ಸಂಘಟನೆಯ (ಐಎನ್‌ಎಸ್‌ಒ) ಪ್ರವೇಶ್ ಬಿಷ್ಣೋಯ್ 4,275 ಮತಗಳನ್ನು ಪಡೆದರೆ, ಅವರ ಪ್ರತಿಸ್ಪರ್ಧಿ ಎನ್‌ಎಸ್‌ಯುಐ ಯು 3,131 ಮತಗಳನ್ನು ಪಡೆದರು.

Last Updated : Oct 19, 2022, 12:46 PM IST

ABOUT THE AUTHOR

...view details