ನವದೆಹಲಿ:ನಗರದಲ್ಲಿ ಮುನ್ಸಿಪಲ್ ಚುನಾವಣೆ ರಂಗೇರುತ್ತಿದೆ. ಪುರಸಭೆ ಚುನಾವಣೆಯಲ್ಲಿ ಗೆಲುವು ಸಾಧಿಸಿ ಅಧಿಕಾರಿ ಪಡೆದುಕೊಳ್ಳಲು ಪಕ್ಷಗಳ ತಂತ್ರಗಳನ್ನು ರೂಪಿಸುತ್ತಿದ್ದಾರೆ. ಅಭ್ಯರ್ಥಿಗಳು ಸಹ ಮತದಾರರ ಮನವೋಲಿಸು ನಾನಾ ಪ್ರಯತ್ನಗಳು ಮಾಡುತ್ತಿದ್ದಾರೆ. ಅದರ ಭಾಗವಾಗಿ ಇಲ್ಲೊಬ್ಬ ಅಭ್ಯರ್ಥಿ ಚರಂಡಿಗೆ ಹಾರಿ, ಚರಂಡಿಗೆ ಸ್ವಚ್ಛಗೊಳಿಸಿರುವ ಘಟನೆ ನಡೆದಿದೆ.
ದೆಹಲಿಯ ಆಡಳಿತಾರೂಢ ಆಮ್ ಆದ್ಮಿ ಪಕ್ಷ ಪುರಸಭೆಯಲ್ಲಿ ಜಯ ಸಾಧಿಸಲು ಕಸರತ್ತು ನಡೆಸುತ್ತಿದೆ. ಅದರಂತೆ ಅಭ್ಯರ್ಥಿಗಳು ಕಾರ್ಯ ಪ್ರವೃತ್ತರಾಗಿದ್ದಾರೆ. ಪೂರ್ವ ದೆಹಲಿಯ ಎಎಪಿ ಸ್ಥಳೀಯ ನಾಯಕ ಹಸೀಬ್ - ಉಲ್-ಹಸನ್ ಶಾಸ್ತ್ರಿ ಪಾರ್ಕ್‌ನಲ್ಲಿ ತುಂಬಿ ಹರಿಯುವ ಚರಂಡಿಗೆ ಹಾರಿ, ಚರಂಡಿ ಸ್ವಚ್ಛಗೊಳಿಸಿದರು.
ಓದಿ:ಟಿಂಬರ್ ಡಿಪೋದಲ್ಲಿ ಭಾರಿ ಅಗ್ನಿ ಅವಘಡ.. 11 ಜನರ ಸಜೀವ ದಹನ
ಚರಂಡಿಯಲ್ಲಿ ಕಸ - ಕಡ್ಡಿ, ಪ್ಲ್ಯಾಸ್ಟಿಕ್ ತೆಗೆದು ಸ್ವಚ್ಛಗೊಳಿಸಿದ ಬಳಿಕ ಎಎಪಿ ಕಾರ್ಯಕರ್ತರು ಹಸನ್ಗೆ ಹಾಲಿನ ಅಭಿಷೇಕ ನಡೆಸಿ ದೇಹ ಸ್ವಚ್ಛಗೊಳಿಸಿದರು. ಇನ್ನು ‘ನಾಯಕ್’ ಚಿತ್ರದಲ್ಲಿ ಅನಿಲ್ ಕಪೂರ್ಗೆ ಅಭಿಮಾನಿಗಳು ಹಾಲಿನ ಅಭಿಷೇಕ ಮಾಡುತ್ತಾರೆ. ಎಎಪಿ ನಾಯಕ ಹಸನ್ಗೂ ಹಾಲಿನ ಅಭಿಷೇಕ ನಡೆಸಿದ್ದಾರೆ. ಈ ಎರಡೂ ಜೋಡಿಸಿರುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗುತ್ತಿವೆ.
ಮಾಧ್ಯಮಗಳೊಂದಿಗೆ ಚರಂಡಿ ನೀರಿನಲ್ಲಿ ನಿಂತು ಮಾತನಾಡಿದ ಎಎಪಿ ಕೌನ್ಸಿಲರ್ ಹಸನ್, ಹಲವು ತಿಂಗಳಿನಿಂದ ಚರಂಡಿ ತುಂಬಿ ಹರಿಯುತ್ತಿದೆ. ಅಧಿಕಾರಿಗಳಿಗೆ ಪದೇ ಪದೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಬಿಜೆಪಿ ಕೌನ್ಸಿಲರ್ ಮತ್ತು ಸ್ಥಳೀಯ ಶಾಸಕರು ಸಹ ಕ್ಯಾರೆ ಎನ್ನುತ್ತಿಲ್ಲ. ಆದರಿಂದ ನಾನೇ ಖುದ್ದಾಗಿ ಚರಂಡಿಗಿಳಿದು ಸ್ಚಚ್ಛಗೊಳಿಸುತ್ತಿದ್ದೇನೆ ಎಂದು ಹೇಳಿದ್ದಾರೆ.