ಕರ್ನಾಟಕ

karnataka

ETV Bharat / bharat

ನಾಮಪತ್ರ ರದ್ದು.. ಪೆಟ್ರೋಲ್​ ಸುರಿದುಕೊಂಡು AAP ಅಭ್ಯರ್ಥಿ ಆತ್ಮಹತ್ಯೆಗೆ ಯತ್ನ! - uttar pradesh Election 2022

AAP candidate attempts to commit suicide: ಉತ್ತರ ಪ್ರದೇಶ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿರುವ ಎಎಪಿ ಅಭ್ಯರ್ಥಿಯೋರ್ವರ ನಾಮಪತ್ರ ರದ್ದುಗೊಂಡಿರುವ ಕಾರಣ ಅವರು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

AAP candidate tried to commit suicide
AAP candidate tried to commit suicide

By

Published : Jan 24, 2022, 5:53 PM IST

ಮುಜಾಫರ್​ನಗರ(ಉತ್ತರ ಪ್ರದೇಶ):ಉತ್ತರ ಪ್ರದೇಶ ವಿಧಾನಸಭಾ ಚುನಾವಣೆ ಕಣ ರಂಗೇರಿದ್ದು, ಮೊದಲ ಹಂತದ ಚುನಾವಣೆಗೋಸ್ಕರ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಕಾರ್ಯ ಆರಂಭಿಸಿದ್ದಾರೆ. ಅದೇ ರೀತಿ ಮುಜಾಫರ್​ನಗರದ ಮೀರಾಪುರ್ ಕ್ಷೇತ್ರದಿಂದ ಕಣಕ್ಕಿಳಿಯಲು ಇಚ್ಛಿಸಿದ್ದ ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಉಮೇದುವಾರಿಕೆ ರದ್ದುಗೊಂಡ ಹಿನ್ನೆಲೆ ರಾದ್ಧಾಂತವೇ ನಡೆದಿದೆ. ನಾಮಪತ್ರ ರದ್ದಾಗಿದ್ದರಿಂದ ಮನನೊಂದು ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ನಡೆದಿದೆ.

ನಾಮಪತ್ರ ರದ್ಧು ಬೆನ್ನಲ್ಲೇ ಆತ್ಮಹತ್ಯೆಗೆ ಯತ್ನಿಸಿದ ಅಭ್ಯರ್ಥಿ

ಆಮ್​ ಆದ್ಮಿ ಪಕ್ಷದ ಅಭ್ಯರ್ಥಿ ಸರ್ದಾರ್​​ ಜೋಗಿಂದರ್ ​​ಸಿಂಗ್​​ ಮೀರಾಪುರ್ ವಿಧಾನಸಭೆ ಕ್ಷೇತ್ರದಿಂದ ನಾಮಪತ್ರ ಸಲ್ಲಿಸಿದ್ದರು. ಆದರೆ, ಅವರ ಉಮೇದುವಾರಿಕೆ ರದ್ದುಗೊಳ್ಳುತ್ತಿದ್ದಂತೆ ಮನನೊಂದಿದ್ದಾರೆ. ಇದರ ಬೆನ್ನಲ್ಲೇ ಜಿಲ್ಲಾಧಿಕಾರಿ ಕಚೇರಿ ಎದುರೇ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ತಕ್ಷಣವೇ ಅವರನ್ನ ಪೊಲೀಸರು ರಕ್ಷಣೆ ಮಾಡಿದ್ದಾರೆ.

ಎಎಪಿ ಅಭ್ಯರ್ಥಿ ರಕ್ಷಣೆ ಮಾಡಿದ ಪೊಲೀಸರು

ಇದನ್ನೂ ಓದಿರಿ:ಹರಿಣಗಳ ವಿರುದ್ಧ ODI ಸರಣಿ ಸೋತ ರಾಹುಲ್ ಪಡೆಗೆ ಶಾಕ್​​.. ಫೈನಲ್​​​ ಪಂದ್ಯದ ಶೇ.40ರಷ್ಟು ದಂಡ

ತಮ್ಮ ನಾಮಪತ್ರ ರದ್ದುಗೊಂಡಿರುವುದಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜೋಗಿಂದರ್ ಸಿಂಗ್​, ಜಿಲ್ಲಾ ಆಡಳಿತದ ವಿರುದ್ಧ ಗಂಭೀರ ಆರೋಪ ಮಾಡಿದ್ದಾರೆ. ನಾನು ಓರ್ವ ಸಿಖ್​​ ಆಗಿರುವ ಕಾರಣ ನನ್ನ ಉಮೇದುವಾರಿಕೆ ರದ್ದು ಮಾಡಲಾಗಿದೆ. ಜೊತೆಗೆ ನಾವು ದೆಹಲಿ ಗಡಿಯಲ್ಲಿ ಕೃಷಿ ಕಾಯ್ದೆ ವಿರುದ್ಧ ಪ್ರತಿಭಟನೆ ನಡೆಸಿದ್ದಕ್ಕಾಗಿ ಈ ರೀತಿಯಾಗಿ ನಡೆದುಕೊಳ್ಳಲಾಗಿದೆ ಎಂದು ಆರೋಪಿಸಿದ್ದಾರೆ.

ಆತ್ಮಹತ್ಯೆಗೆ ಯತ್ನಿಸಿದ ಎಎಪಿ ಅಭ್ಯರ್ಥಿ

ಉತ್ತರ ಪ್ರದೇಶದ 403 ವಿಧಾನಸಭೆ ಕ್ಷೇತ್ರಗಳಿಗೆ ಒಟ್ಟು 7 ಹಂತಗಳಲ್ಲಿ ಮತದಾನ ನಡೆಯಲಿದ್ದು, ಮೊದಲ ಹಂತದ ವೋಟಿಂಗ್​​ ಫೆಬ್ರವರಿ 10ರಿಂದ ಆರಂಭಗೊಳ್ಳಲಿದೆ. ಮಾರ್ಚ್​ 10ಕ್ಕೆ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಹೊರಬೀಳಲಿದೆ.

ಜಾಹೀರಾತು-ನಿಮ್ಮ ಸೂಕ್ತ ಸಂಗಾತಿ ಹುಡುಕುತ್ತಿರುವಿರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ ನೋಂದಣಿ ಉಚಿತ

ABOUT THE AUTHOR

...view details