ನವದೆಹಲಿ:ಆಮ್ನೆಸ್ಟಿ ಇಂಡಿಯಾದ ಮಾಜಿ ಅಧ್ಯಕ್ಷ ಆಕಾರ್ ಪಟೇಲ್ ವಿರುದ್ಧ ಹೊರಡಿಸಿರುವ ಲುಕ್‌ಔಟ್ ನೋಟಿಸ್ ಅನ್ನು ತ್ರಿಸದಸ್ಯ ಪೀಠ ರದ್ದುಗೊಳಿಸಿದ್ದರ ವಿರುದ್ಧ ಕೇಂದ್ರೀಯ ತನಿಖಾ ದಳ (ಸಿಬಿಐ) ಸಲ್ಲಿಸಿದ್ದು, ಈ ಬಗ್ಗೆ ವಿವರಣೆ ಕೋರಿ ದೆಹಲಿ ಹೈಕೋರ್ಟ್ ಶುಕ್ರವಾರ ನೋಟಿಸ್ ಜಾರಿ ಮಾಡಿದೆ.
ನೋಟಿಸ್ ರದ್ದು ಕುರಿತು ಪಟೇಲ್ ಅವರ ಪ್ರತಿಕ್ರಿಯೆಯನ್ನು ಕೋರ್ಟ್ ಕೋರಿದ್ದು, ನ್ಯಾಯಮೂರ್ತಿ ಯೋಗೇಶ್ ಖನ್ನಾ ಅವರಿದ್ದ ಪೀಠ ಮುಂದಿನ ವಿಚಾರಣೆಯನ್ನು ಮೇ 18 ಕ್ಕೆ ಮುಂದೂಡಲಾಗಿದೆ.