ಜೆಮ್ಶೆಡ್ಪುರ(ಜಾರ್ಖಂಡ್):ದೇಶಾದ್ಯಂತ ಗಣೇಶ ಹಬ್ಬದ ಸಂಭ್ರಮಾಚರಣೆ ಜೋರಾಗಿದೆ. ಮನೆಗಳಲ್ಲಿ ಮಾತ್ರವಲ್ಲ, ಸಾರ್ವಜನಿಕ ಸ್ಥಳಗಳಲ್ಲೂ ಗಣೇಶನ ವಿಗ್ರಹ ಪ್ರತಿಷ್ಠಾಪನೆ ಮಾಡಲಾಗಿದ್ದು ವಿವಿಧ ರೀತಿಯ ಆಕರ್ಷಕ ವಿಘ್ನವಿನಾಶಕನನ್ನು ಕೂರಿಸಲಾಗಿದೆ. ಜಾರ್ಖಂಡ್ನಲ್ಲಿ ಜನರು ಗಣೇಶನಿಗೆ ಆಧಾರ್ ಕಾರ್ಡ್ ಸಿದ್ಧಪಡಿಸಿ ಗಮನ ಸೆಳೆದಿದ್ದಾರೆ.
ಜೆಮ್ಶೆಡ್ಪುರದಲ್ಲಿ ಪ್ರತಿಷ್ಠಾಪಿಸಿರುವ ಗಣೇಶನಿಗೆ ಆಧಾರ್ ಕಾರ್ಡ್ ತಯಾರಿಸಲಾಗಿದೆ. ಈ ಆಧಾರ್ ಕಾರ್ಡ್ನಲ್ಲಿ ಶ್ರೀ ಗಣೇಶ್ S/O ಮಹಾದೇವ್, ಕೈಲಾಸ್ ಪರ್ವತದ ತುದಿ, ಮಾನಸ ಸರೋವರ, ಕೈಲಾಸ ಇದರ ಜೊತೆಗೆ ಪಿನ್ಕೋಡ್ ನೀಡಲಾಗಿದೆ. ಅದರಲ್ಲಿ 000001 ಎಂದು ನಮೂದಿಸಲಾಗಿದೆ. ಜನ್ಮ ದಿನಾಂಕದ ಜಾಗದಲ್ಲಿ 6ನೇ ಶತಮಾನ ಎಂದು ತೋರಿಸಿದ್ದಾರೆ. ಆಧಾರ್ ಕಾರ್ಡ್ ಸಂಖ್ಯೆಯನ್ನೂ ಸಹ ಮುದ್ರಿಸಲಾಗಿದೆ.