ಕರ್ನಾಟಕ

karnataka

ETV Bharat / bharat

ಆನ್​ಲೈನ್​ ಕ್ಲಾಸ್​ಗೆ ಮೊಬೈಲ್​ ಕೂಡಿಸಿದ್ರೆ, ಗೇಮ್​​ ಆಡಿ 40 ಸಾವಿರ ಕಳೆದುಕೊಂಡ: ಬೈದಿದ್ದಕ್ಕೆ ಆತ್ಮಹತ್ಯೆ ಮಾಡಿಕೊಂಡ! - 40 ಸಾವಿರ ಕಳೆದುಕೊಂಡ ಬಾಲಕ

ಆನ್​ಲೈನ್ ಗೇಮ್​ನಲ್ಲಿ 40 ಸಾವಿರ ರೂಪಾಯಿ ಕಳೆದುಕೊಂಡಿರುವ ಬಾಲಕನೊಬ್ಬ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.

online game boy died
online game boy died

By

Published : Jul 31, 2021, 4:16 PM IST

ಛತ್ರಪುರ(ಮಧ್ಯಪ್ರದೇಶ): 13 ವರ್ಷದ ಬಾಲಕನೊಬ್ಬ ಆನ್​ಲೈನ್​ ಗೇಮ್​ನಲ್ಲಿ 40 ಸಾವಿರ ರೂ. ಕಳೆದುಕೊಂಡಿದ್ದು, ಕೋಪದಿಂದ ತಾಯಿ ಬೈದಿದ್ದಕ್ಕಾಗಿ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಮಧ್ಯಪ್ರದೇಶದ ಛತ್ರಪುರದಲ್ಲಿ ನಡೆದಿದೆ.

ಛತ್ರಪುರದ ಶಾಂತಿ ನಗರದಲ್ಲಿ ಕುಟುಂಬದೊಂದಿಗೆ ವಾಸವಾಗಿದ್ದ ಬಾಲಕ ಆನ್​ಲೈನ್​ನಲ್ಲಿ Free Fire ಮೊಬೈಲ್​ ಗೇಮ್​ ಆಡಿದ್ದಾನೆ. ಈ ಗೇಮ್​​ ಆಡುತ್ತಿದ್ದ ಸಂದರ್ಭದಲ್ಲಿ ಹಣ ಸಂದಾಯ ಮಾಡುವಂತೆ ಸಂದೇಶ ಬಂದಿದ್ದು, ತಕ್ಷಣವೇ ತಾಯಿಯ ಅಕೌಂಟ್​ ನಂಬರ್​ ಹಾಕಿ, ಗೇಮ್​ ಆಡಲು ಶುರು ಮಾಡಿದ್ದಾನೆ. ಈ ವೇಳೆ 40 ಸಾವಿರ ರೂ. ಕಳೆದುಕೊಂಡಿದ್ದಾನೆ.

ತಾಯಿಯ ಅಕೌಂಟ್​ನಿಂದ 40 ಸಾವಿರ ರೂ. ಕಟ್​​ ಆಗುತ್ತಿದ್ದಂತೆ ಮಗನಿಗೆ ಫೋನ್​ ಮಾಡಿ ಬೈದಿದ್ದಾಳೆ. ಇದರಿಂದ ಮನನೊಂದು, ಖಿನ್ನತೆಗೊಳಗಾಗಿರುವ ಆತ ರೂಂನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದು, ಈ ವೇಳೆ ಸೊಸೈಡ್​ ನೋಟ್​ ಬರೆದಿಟ್ಟಿದ್ದಾನೆ.

ಸೊಸೈಡ್​ ನೋಟ್​​ ಬರೆದಿಟ್ಟ ಬಾಲಕ

ಫ್ರೀ ಫೈರ್​ ಗೇಮ್​ ಆಡುವುದಕ್ಕಾಗಿ 40 ಸಾವಿರ ರೂ. ಖರ್ಚು ಮಾಡಿದ್ದೇನೆ. ದಯವಿಟ್ಟು ನನ್ನನ್ನು ಕ್ಷಮಿಸಿ ಎಂದು ಸೊಸೈಡ್ ನೋಟ್​ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿದ್ದಾನೆ. ಇನ್ನು ಬಾಲಕ ಆರನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದು, ಸದ್ಯ ಆನ್​ಲೈನ್ ತರಗತಿ ನಡೆಯುತ್ತಿದ್ದ ಕಾರಣ ಆತನಿಗೆ ಮೊಬೈಲ್​ ಕೊಡಿಸಲಾಗಿತ್ತು ಎಂದು ತಿಳಿದು ಬಂದಿದೆ. ಬಾಲಕನ ತಂದೆ ಲ್ಯಾಬ್​ ಟೆಕ್ನಿಷಿಯನ್​ ಆಗಿದ್ದು, ತಾಯಿ ಸರ್ಕಾರಿ ಆಸ್ಪತ್ರೆಯಲ್ಲಿ ನರ್ಸ್​ ಆಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಕರಣ ದಾಖಲು ಮಾಡಿಕೊಂಡಿರುವ ಪೊಲೀಸರು ದೂರು ದಾಖಲು ಮಾಡಿಕೊಂಡಿದ್ದು, ಆನ್​ಲೈನ್​ ಗೇಮ್​​ ಆಡುತ್ತಿದ್ದ ಸಂದರ್ಭದಲ್ಲಿ ಹಣಕ್ಕಾಗಿ ಯಾರಾದ್ರೂ ಬೇಡಿಕೆ ಹಾಕಿದ್ರಾ? ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ.

ABOUT THE AUTHOR

...view details