ಕರ್ನಾಟಕ

karnataka

ETV Bharat / bharat

ಕೊಟ್ಟಿದ್ದು ₹5 ಸಾವಿರ ಸಾಲ, ಕಟ್ಟಲು ಹೇಳಿದ್ದು ₹80 ಸಾವಿರ.. ನೊಂದ ಯುವಕ ಆತ್ಮಹತ್ಯೆ

ಸಾಲದ ಆ್ಯಪ್​ನಿಂದ ಹಣ ಪಡೆದು ಕಟ್ಟಲಾಗದೇ ಕಿರುಕುಳಕ್ಕೆ ಬೇಸತ್ತ ತಮಿಳುನಾಡಿನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

a-youth-suicided-on-loan-app-tortures
ನೊಂದ ಯುವಕ ಆತ್ಮಹತ್ಯೆ

By

Published : Oct 4, 2022, 2:37 PM IST

ತಮಿಳುನಾಡು(ಚೆನ್ನೈ):ಸಾಲದ ಆ್ಯಪ್​ನಿಂದ ಹಣ ಪಡೆದು ಕಟ್ಟಲಾಗದೇ ಕಿರುಕುಳಕ್ಕೆ ಬೇಸತ್ತ ತಮಿಳುನಾಡಿನ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಾಲದ ಆ್ಯಪ್​ವೊಂದರಲ್ಲಿ ಆತ 5 ಸಾವಿರ ರೂಪಾಯಿ ಸಾಲ ಪಡೆದಿದ್ದ. ದುಬಾರಿ ಬಡ್ಡಿಯಿಂದ ಅದು 80 ಸಾವಿರ ರೂಪಾಯಿಗಳಾಗಿತ್ತು. ಇಷ್ಟು ಪ್ರಮಾಣದ ಮೊತ್ತವನ್ನು ಕಟ್ಟಲಾಗದೇ ಆತ ಜೀವ ಕೊನೆಗೊಳಿಸಿದ್ದಾನೆ.

ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಬಿಕಾಂ ಪದವೀಧರನಾದ ನರೇಂದ್ರನ್ (23) ಆತ್ಮಹತ್ಯೆ ಮಾಡಿಕೊಂಡ ಯುವಕ. ನರೇಂದ್ರ 3 ತಿಂಗಳ ಹಿಂದಷ್ಟೇ ಸಾಲದ ಆ್ಯಪ್​ನಿಂದ 5 ಸಾವಿರ ಹಣ ಸಾಲವಾಗಿ ಪಡೆದಿದ್ದ. ಇದನ್ನ ತೀರಿಸಲು ನರೇಂದ್ರ ಮತ್ತೊಂದು ಆ್ಯಪ್​ನಿಂದ ಸಾಲ ಪಡೆದು ತೀರಿಸಿದ್ದಾನೆ.

ಬಳಿಕ ಹಣ ನೀಡಿದ ಆ್ಯಪ್​ನವರು ಕೊಟ್ಟ ಸಾಲಕ್ಕೆ 33 ಸಾವಿರ ಬಡ್ಡಿ ಸಮೇತ ನೀಡಲು ಸೂಚಿಸಿದ್ದಾರೆ. ಇದು ನರೇಂದ್ರನಿಗೆ ಶಾಕ್​ ತಂದಿದೆ. ಕೊಟ್ಟ 5 ಸಾವಿರಕ್ಕೆ 33 ಸಾವಿರ ಬಡ್ಡಿ ಕಟ್ಟಬೇಕೇ ಎಂದು ಕೇಳಿದಾಗ ಸಾಲ ನೀಡಿದವರು ಕಡ್ಡಾಯವಾಗಿ ಹಣ ಕಟ್ಟಲು ಹೇಳಿದ್ದಾರೆ.

ಇದಾದ ಬಳಿಕ ದಿನವೂ ಆತನಿಗೆ ಕರೆ ಮಾಡಿ ಪೀಡಿಸಲು ಆರಂಭಿಸಿದ್ದರು. ಇದರಿಂದ ಬೇಸತ್ತ ನರೇಂದ್ರ 33 ಸಾವಿರ ರೂಪಾಯಿ ನೀಡಿ ಸಾಲ ತೀರಿಸಿದ್ದ. ಅಷ್ಟಕ್ಕೇ ಬಿಡದ ಆ್ಯಪ್​ನವರು ಮತ್ತೆ 50 ಸಾವಿರ ಕಟ್ಟಲು ಒತ್ತಾಯಿಸಿದ್ದಾರೆ. ಹಣಕ್ಕಾಗಿ ಕರೆ ಮಾಡಿ ಇನ್ನಿಲ್ಲದ ಹಿಂಸೆ ನೀಡಿದ್ದಾರೆ. ಇದು ನರೇಂದ್ರನನ್ನು ತೀವ್ರ ಒತ್ತಡಕ್ಕೆ ಸಿಲುಕಿಸಿತ್ತು.

ಮತ್ತೊಂದು ಸಾಲದ ಆ್ಯಪ್‌ನಿಂದ ಅಷ್ಟು ಮೊತ್ತವನ್ನು ಪಡೆದು ಹಿಂತಿರುಗಿಸಿದ್ದರು. ಬಳಿಕ ಪಡೆದ 50 ರೂಪಾಯಿ ಸಾಲ 15 ದಿನಗಳಲ್ಲಿ 80 ಸಾವಿರ ಕಟ್ಟುವಂತೆ ಆ್ಯಪ್​ ಒತ್ತಾಯ ಹೇರಿತ್ತು. ಹಣ ಕೇಳಿದಾಗ ಕಟ್ಟದಿದ್ದರೆ, ಫೋಟೋಗಳನ್ನು ಹುಡುಗಿಯರಿಗೆ ಕಳುಹಿಸುವ ಬೆದರಿಕೆ ಒಡ್ಡಲಾಗಿತ್ತು.

ಇದರಿಂದ ನೊಂದಿದ್ದ ನರೇಂದ್ರ ನಿನ್ನೆ ಬೆಳಗ್ಗೆ ಮನೆಯಲ್ಲಿ ಒಂಟಿಯಾಗಿದ್ದಾಗ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸಂಬಂಧಿಕರೊಬ್ಬರು ಇದನ್ನು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಸ್ಥಳಕ್ಕೆ ಆಗಮಿಸಿ ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ. ಸಾಲದ ಆ್ಯಪ್​ಗಳ ಕುರಿತು ತನಿಖೆ ನಡೆಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

ಓದಿ:ಬಂದೀಖಾನೆ ಡಿಜಿ ಕೊಲೆ: ಜಮ್ಮು ಮತ್ತು ರಾಜೌರಿಯಲ್ಲಿ ಮೊಬೈಲ್​ ಡೇಟಾ ಸ್ಥಗಿತ

ABOUT THE AUTHOR

...view details