ಕರ್ನಾಟಕ

karnataka

ETV Bharat / bharat

ತಮಿಳುನಾಡು: ಪ್ರೇಯಸಿಗೆ ಪೆಟ್ರೋಲ್​ ಸುರಿದು, ಬೆಂಕಿ ಹಚ್ಚಿದ ದುರುಳ ಪ್ರೇಮಿ - ಬೆಂಕಿ ಹಚ್ಚಿ ಕೊಲೆಗೈದ ಯುವಕ

ತನ್ನ ಗೆಳೆಯನೊಂದಿಗೆ ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಯುವತಿ ಆತನ ಭೇಟಿಗೆಂದು ಹೋಗಿದ್ದಳು. ಆದರೆ ಆತ ಪೆಟ್ರೋಲ್​ ಸುರಿದು, ಬೆಂಕಿ ಹಚ್ಚಿ ಆಕೆಯ ಬದುಕಿಗೇ ಕೊಳ್ಳಿ ಇಟ್ಟಿದ್ದಾನೆ!.

youth murdered
ಯುವತಿ ಕೊಲೆ

By

Published : Jan 6, 2023, 12:28 PM IST

ತಿರುಪ್ಪುರ್​(ತಮಿಳುನಾಡು): ಯುವಕನೊಬ್ಬ ತಾನು ಪ್ರೀತಿಸಿದ ಹುಡುಗಿಗೆ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿರುವ ಅಮಾನವೀಯ ಘಟನೆ ತಮಿಳುನಾಡಿನ ತಿರುಪ್ಪುರ್​ ಜಿಲ್ಲೆಯಲ್ಲಿ ನಡೆದಿದೆ. ಮೃತ ಯುವತಿಯನ್ನು ತಿರುಪ್ಪುರ್​ ಜಿಲ್ಲೆಯ ಪಲ್ಲಡಂ ನಿವಾಸಿ ಪೂಜಾ(19) ಎಂದು ಗುರುತಿಸಲಾಗಿದೆ. ಭೇಟಿಗೆಂದು ಆಕೆ ಆಗಮಿಸಿದ್ದಾಗ ಘಟನೆ ನಡೆದಿದೆ ಎಂದು ಪೊಲೀಸ್‌ ಮೂಲಗಳಿಂದ ಗೊತ್ತಾಗಿದೆ.

ಭೇಟಿಯಾಗೋಣ ಎಂದಿದ್ದೇ ತಪ್ಪಾಯಿತಾ?: ಮೃತ ಯುವತಿ ಪೂಜಾ ಪಲ್ಲಡಂನ ಬನಿಯನ್​ ಕಂಪೆನಿಯಲ್ಲಿ ಕೆಲಸ ಮಾಡುತ್ತಿದ್ದರು. ಅಲ್ಲೇ ಕೆಲಸ ಮಾಡುತ್ತಿದ್ದ ಲೋಕೇಶ್ (22) ಎಂಬಾತನನ್ನು ಕಳೆದೊಂದು ವರ್ಷದಿಂದ ಪ್ರೀತಿಸುತ್ತಿದ್ದಳು. ಇಬ್ಬರು ಬಹಳ ಅನ್ಯೋನ್ಯವಾಗಿದ್ದರು. ಕೆಲವು ದಿನಗಳ ಹಿಂದೆ ಆತನೇ ಯಾವುದೋ ಭಿನ್ನಾಭಿಪ್ರಾಯ ಹೇಳಿಕೊಂಡು ಆಕೆಯೊಂದಿಗೆ ಬ್ರೇಕಪ್​ ಮಾಡಿಕೊಂಡಿದ್ದ. ಆದರೆ ಪೂಜಾ ಆಗಾಗ್ಗೆ ದೂರಾವಾಣಿ ಮೂಲಕ ಆತನನ್ನು ಸಂಪರ್ಕಿಸಿ ಮದುವೆಯಾಗುವಂತೆ ಕೇಳುಕೊಳ್ಳುತ್ತಿದ್ದಳು.

ಬುಧವಾರ ಮಧ್ಯಾಹ್ನ 3.45ರ ಸುಮಾರಿಗೆ ಲೋಕೇಶ್‌ನನ್ನು​ ಸಂಪರ್ಕಿಸಿದ ಪೂಜಾ, ಪಲ್ಲಡಂ-ಪೇತಂಪಾಳ್ಯಂ ರಸ್ತೆಯಲ್ಲಿರುವ ಅಪ್ಪನ್‌ಕಾಡು ಬಳಿ ಬರುವಂತೆ ಕೇಳಿಕೊಂಡಿದ್ದಳು. ಇಂದೇ ನಮ್ಮಿಬ್ಬರ ಮನಸ್ತಾಪ ಬಗೆಹರಿಸಿ ಮತ್ತೆ ನಾವಿಬ್ಬರು ಜೊತೆಯಾಗಬೇಕು ಎಂದೆಲ್ಲಾ ಆಸೆಗಳನ್ನು ಇಟ್ಟುಕೊಂಡೇ ಆತನನ್ನು ಕಾಣಲು ಬಂದಿದ್ದಳು. ಆದರೆ ಲೋಕೇಶ್ ಇಂದೇ ನಮ್ಮಿಬ್ಬರ ಪ್ರೀತಿ ಅಂತ್ಯ ಎಂಬಂತೆ ಪೆಟ್ರೋಲ್​ ಬಾಟಲಿಯನ್ನು ಜೊತೆಯಲ್ಲಿ ಹಿಡಿದುಕೊಂಡೇ ಬಂದಿದ್ದ. ಮೊದಲಿಗೆ ತಾಳ್ಮೆಯಿಂದಲೇ ಮಾತನಾಡುತ್ತಿದ್ದ ಆಕೆಯು ಕೊನೆಗೆ ತಾಳ್ಮೆ ಕಳೆದುಕೊಂಡಿದ್ದಳು. ಬಳಿಕ ಅವರಿಬ್ಬರ ಮಧ್ಯೆ ಜೋರು ಜಗಳ ನಡೆದಿದ್ದು, ತಾರಕಕ್ಕೇರಿತ್ತು. ಕೋಪದ ಭರದಲ್ಲಿ ಲೋಕೇಶ್​ ಆಕೆಗೆ ಬೆಲ್ಟ್​ನಿಂದ ಹಲ್ಲೆ ಮಾಡಿದ್ದಲ್ಲದೇ, ಕಲ್ಲಿನಿಂದ ತಲೆಯನ್ನು ಜಜ್ಜಿದ್ದಾನೆ. ಆಕೆ ಪ್ರಜ್ಞೆ ತಪ್ಪಿ ಬಿದ್ದಾಗ ಪೆಟ್ರೋಲ್​ ಸುರಿದು ಬೆಂಕಿ ಹಚ್ಚಿದ್ದಾನೆ. ತಕ್ಷಣವೇ ಸ್ಥಳದಿಂದ ಆತ ಪರಾರಿಯಾಗುವಲ್ಲಿ ಯಶಸ್ವಿಯಾಗಿದ್ದಾನೆ.

ಬೆಂಕಿ ಹೊತ್ತಿಕೊಂಡು ಉರಿಯುತ್ತಿರುವುದನ್ನು ಗಮನಿಸಿದ ಸ್ಥಳೀಯರು, ಆಕೆಯನ್ನು ಪ್ರಥಮ ಚಿಕಿತ್ಸೆಗೆಂದು ಸ್ಥಳೀಯ ಸರಕಾರಿ ಆಸ್ಪತ್ರೆಗೆ ದಾಖಲಿಸಿದ್ದರು. ಬಳಿಕ ಆಕೆಯನ್ನು ಕೊಯಮತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ರವಾನಿಸಲಾಯಿತು. ಆಕೆ ಗುರುವಾರ ಬೆಳಗ್ಗೆ ಮೃತಪಟ್ಟಿದ್ದಾಳೆ. ಸಾಯುವುದಕ್ಕಿಂತ ಮುಂಚೆ ನಡೆದ ಘಟನೆಯನ್ನು ಪೊಲೀಸರಿಗೆ ವಿವರಿಸಿದ್ದಾಳೆ. ಕಿಡಿಗೇಡಿ ಪ್ರೇಮಿಯನ್ನು ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.

ಇದನ್ನೂ ಓದಿ:ಬೆಂಗಳೂರಿನ ದೇವಸ್ಥಾನದಲ್ಲಿ ಮಹಿಳೆ ಮೇಲೆ ಹಲ್ಲೆ ಆರೋಪ; ದೂರು-ಪ್ರತಿ ದೂರು ದಾಖಲು

ABOUT THE AUTHOR

...view details