ಪುದುಚೇರಿ:ಕೊರೊನಾ ಭಯ ಎಲ್ಲರನ್ನೂ ಕಾಡುತ್ತಿದೆ. ಹೀಗಾಗಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲಾ ರಾಜ್ಯಗಳು ಕೋವಿಡ್ ವ್ಯಾಕ್ಸಿನೇಷನ್ ತೀವ್ರಗೊಳಿಸಿವೆ. ಆದರೆ ಕೆಲವೆಡೆ ಲಸಿಕೆ ಕೊಡಿಸಿಕೊಳ್ಳಲು ವ್ಯಕ್ತಿಗಳು ಹಿಂಜರಿಯುತ್ತಿದ್ದಾರೆ.
ಪುದುಚೇರಿಯಲ್ಲೂ ಕೂಡಾ ಇಂಥದ್ದೇ ಘಟನೆ ನಡೆದಿದೆ. ಪುದುಚೇರಿ ಸರ್ಕಾರದ ಶುಶ್ರೂಷಕಿಯರು, ಕೋವಿಡ್ ಲಸಿಕೆ ನೀಡಲು ಕೊನೇರಿಕುಪ್ಪಂ ಗ್ರಾಮಕ್ಕೆ ತೆರಳಿದಾಗ 39 ವರ್ಷದ ಮುತ್ತುವೇಲ್ ಎಂಬಾತ ಮರವೇರಿ ಕುಳಿತಿದ್ದಾನೆ.