ಕರ್ನಾಟಕ

karnataka

ETV Bharat / bharat

ಆಕ್ಸಿಜನ್ ಸಿಗದ ಸ್ಥಳಕ್ಕೆ ಹೋಗಿ ಬಂದ ಬಾಲೆ.. ಚಿತ್ರಕಲೆಯಲ್ಲೂ ಚಮತ್ಕಾರ ಮೂಡಿಸುತ್ತಾಳೆ ಈ ಬಾವಿ ವೈದ್ಯೆ

ಈ ಹುಡುಗಿ ತನ್ನ ಹನ್ನೆರಡನೇ ವಯಸ್ಸಿನಲ್ಲಿ ಮೋಜಿಗಾಗಿ ಬುಲೆಟ್ ಬೈಕ್ ಓಡಿಸುವುದನ್ನು ಕಲಿತರು. ಈಗ ಅವರು ಬುಲೆಟ್ ಮೇಲೆ ಹಿಮಾಲಯದ ಅಂಚಿಗೆ ಹೋಗಿ ಬಂದಿದ್ದಾರೆ. 19 ಸಾವಿರದ 24 ಅಡಿ ಎತ್ತರದಲ್ಲಿರುವ ವಿಶ್ವದ ಅತಿ ಎತ್ತರದ ರಸ್ತೆಯಲ್ಲಿ ಈಕೆ ಪ್ರಯಾಣ ಬೆಳೆಸಿದ್ದಾರೆ. ಎಂಟು ದಿನಗಳ ಈ ಪಯಣದಲ್ಲಿ 2,800 ಕಿ.ಮೀ. ಸಂಚರಿಸಿದ್ದಾರೆ. ಆಕ್ಸಿಜನ್ ಕೂಡ ಸರಿಯಾಗಿ ಸಿಗದ ಪ್ರದೇಶದಲ್ಲಿ ಬುಲೆಟ್​ ಓಡಿಸಿ ಇತಿಹಾಸ ಸೃಷ್ಟಿಸಿದ್ದಾರೆ. ಇನ್ನೊಂದು ಕಡೆ ವೈದ್ಯಕೀಯ ಶಿಕ್ಷಣ ಪಡೆಯುತ್ತಲೇ ಮಹಿಳಾ ಬೈಕ್ ರೈಡರ್ ಆಗಿ ಮಿಂಚುತ್ತಿರುವ ಈ ನಾರಿ ಆಂಧ್ರಪ್ರದೇಶದ ಕೃಷ್ಣಾ ಜಿಲ್ಲೆಯವರು.. ಈ ಬಾಲೆಯ ಸಾಧನೆ ಕುರಿತು ವಿಶೇಷ ಲೇಖನ ನಿಮ್ಮ ಮುಂದಿದೆ.

By

Published : Aug 15, 2022, 1:30 PM IST

young woman successfully driven  driven the highest road in the world and set a record  girl learned to ride a bullet bike  achieve something more than men  young lady traveling on the bullet is Indu Vallabhaneni  Andhra Pradesh young woman  ಚಿತ್ರಕಲೆಯಲ್ಲೂ ಚಮತ್ಕಾರ ಮೂಡಿಸುತ್ತಾಳೆ ಈ ಬಾವಿ ವೈದ್ಯೆ  ಆಕ್ಸಿಜನ್ ಕೂಡ ಸರಿಯಾಗಿ ಸಿಗದ ಸ್ಥಳಕ್ಕೆ ಹೋಗಿ ಬಂದ ಬಾಲೆ  ವೈದ್ಯಕೀಯ ಶಿಕ್ಷಣ ಪಡೆಯುತ್ತಲೇ ಮಹಿಳಾ ಬೈಕ್ ರೈಡರ್  ಬುಲೆಟ್ ಪಯಣ  ಬುಲೆಟ್​ನಲ್ಲಿ ನೂರಾರು ಕಿಲೋಮೀಟರ್ ಲಾಂಗ್ ಡ್ರೈವ್  ಆಂಧ್ರಪ್ರದೇಶದ ಯುವತಿಯ ಸಾಧನೆ
ಆಕ್ಸಿಜನ್ ಕೂಡ ಸರಿಯಾಗಿ ಸಿಗದ ಸ್ಥಳಕ್ಕೆ ಹೋಗಿ ಬಂದ ಬಾಲೆ

ಕೃಷ್ಣ, ಆಂಧ್ರಪ್ರದೇಶ:ಚಿಕ್ಕಂದಿನಿಂದಲೂ ಏನಾದರೂ ಸಾಧನೆ ಮಾಡಬೇಕು ಎಂಬ ಹಂಬಲ ಹೊಂದಿದ್ದ ಈ ಯುವತಿಯೊಬ್ಬಳು ಅದಕ್ಕೆ ತಕ್ಕಂತೆ ಹೆಜ್ಜೆ ಹಾಕಿ ಮುಂದೆ ಸಾಗಿದ್ದಾರೆ. ಎಲ್ಲ ಹುಡುಗಿಯರಂತೆ ಸೈಕಲ್ ತುಳಿಯುವ ಬದಲು ಈಕೆ 8ನೇ ತರಗತಿಯಲ್ಲಿ ಬುಲೆಟ್ ಬೈಕ್ ಓಡಿಸಲು ಕಲಿತಿದ್ದಾರೆ. ಈ ಬಾಲೆ ಬುಲೆಟ್ ಬೈಕ್​ನಲ್ಲಿ ಶಾಲೆಗೆ ಹೋಗಿ ಬರುತ್ತಿದ್ದರು. ಅಂದು ಶುರುವಾದ ಬುಲೆಟ್ ಪಯಣ ಇಂದಿಗೂ ಮುಂದುವರೆದಿದೆ.

ಬುಲೆಟ್​ನಲ್ಲಿ ಪ್ರಯಾಣಿಸುತ್ತಿದ್ದ ಈ ಯುವತಿಯ ಹೆಸರು ಇಂದು ವಲ್ಲಭನೇನಿ. ಕೃಷ್ಣಾ ಜಿಲ್ಲೆಯ ಗನ್ನವರಂ ಮೂಲದ ಇಂದು ಮೂರನೇ ವರ್ಷ ದಂತ ವೈದ್ಯಕೀಯ ಶಿಕ್ಷಣ ಪಡೆಯುತ್ತಿದ್ದಾರೆ. ತಂದೆ ಹರೀಶ್ ಕುಮಾರ್ ಕೃಷಿ ಇಲಾಖೆಯಲ್ಲಿ ಅಧಿಕಾರಿಯಾಗಿದ್ದು, ತಾಯಿ ಗೃಹಿಣಿ. ಅಧ್ಯಯನದಲ್ಲಿ ಕ್ರಿಯಾಶೀಲರಾಗಿರುವ ಇಂದು ಜೀವನದಲ್ಲಿ ಏನನ್ನಾದರೂ ಸಾಧಿಸಬೇಕೆಂಬ ಹಂಬಲದಿಂದ ಈ ಯಶಸ್ಸನ್ನು ತಲುಪಿದ್ದಾರೆ.

ಚಿಕ್ಕ ವಯಸ್ಸಿನಲ್ಲೇ ಬುಲೆಟ್​ ಕಲಿತರು:ಇಂದು 12ನೇ ವಯಸ್ಸಿನಲ್ಲಿ ತನ್ನ ಅಣ್ಣನ ಸಹಾಯದಿಂದ ಬುಲೆಟ್ ಕಲಿತರು. ಅಂದಿನಿಂದ ಸಮಯ ಸಿಕ್ಕಾಗಲೆಲ್ಲ ಬುಲೆಟ್​ನಲ್ಲಿ ನೂರಾರು ಕಿಲೋಮೀಟರ್ ಲಾಂಗ್ ಡ್ರೈವ್ ಹೋಗುತ್ತಿದ್ದರು. ಈ ವೇಳೆ, ರಾಯಲ್ ಎನ್‌ಫೀಲ್ಡ್ ಹಿಮಾಲಯನ್ ಒಡಿಸ್ಸಿ ಹೆಸರಿನಲ್ಲಿ ರಾಯಲ್ ಎನ್‌ಫೀಲ್ಡ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಲು ಇಂದು ನಿರ್ಧರಿಸಿದ್ದರು.

ಈ ರೈಡ್‌ನಲ್ಲಿ, ರಾಯಲ್ ಎನ್‌ಫೀಲ್ಡ್ ಕಂಪನಿಯು ವಿಶ್ವದ ಅತಿ ಎತ್ತರದ ರಸ್ತೆ ಉಮ್ಲಿಂಗ್ ಲಾ ಪಾಸ್ ವೇ ಅನ್ನು ಪೂರ್ಣಗೊಳಿಸಲು ನಿರ್ಧರಿಸಿತು. ಈ ನಿರ್ಧಾರವನ್ನು ಇಂದು ಪೋಷಕರಿಗೆ ತಿಳಿಸಿದಾಗ ಅವರು ಆರಂಭದಲ್ಲಿ ನಿರಾಕರಿಸಿದರು. ಆದರೆ, ಈ ಪ್ರಯತ್ನಗಳಿಗೆ ಸದಾ ಪ್ರೋತ್ಸಾಹ ನೀಡಿದ ಸಹೋದರ ಸಾಯಿಕೃಷ್ಣ ಅವರಿಗೆ ಮನವರಿಕೆ ಮಾಡಿ ಒಪ್ಪಿಸಿದರು.

ಭಾರತದ ಗಡಿಯಲ್ಲಿರುವ ಉಮ್ಲಿಂಗ್ ಲಾ ವಿಶ್ವದ ಅತಿ ಎತ್ತರದ ಮೋಟಾರು ರಸ್ತೆಯಾಗಿದೆ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ 70 ಮಂದಿಯಲ್ಲಿ ಕೇವಲ ಆರು ಮಂದಿ ಯುವತಿಯರು ಭಾಗವಹಿಸಿದ್ದರು. ಈ ಆರು ಯುವತಿಯರಲ್ಲಿ ಇಂದು ಸಹ ಒಬ್ಬರಾಗಿದ್ದರು. ಜೂನ್ 30 ರಂದು ಸಿಂಧು ದೆಹಲಿಯಿಂದ ಚಂಡೀಗಢಕ್ಕೆ ಬುಲೆಟ್​ನಲ್ಲಿ ಪ್ರಯಾಣವನ್ನು ಪ್ರಾರಂಭಿಸಿದರು.

ಜುಲೈ 1 ರಂದು ಬೈಕ್ ಓಡಿಸುವಾಗ ಆಗಬೇಕಾದ ಸಮಸ್ಯೆಗಳು ಮತ್ತು ಮುನ್ನೆಚ್ಚರಿಕೆಗಳ ಬಗ್ಗೆ ತಿಳಿದುಕೊಂಡ ಇಂದು ಜುಲೈ 2 ರಂದು ಚಂಡೀಗಢದಿಂದ ಮನಾಲಿ ತಲುಪಿದ್ದಾರೆ. ಇಂದು 2800 ಕಿ.ಮೀ ದೂರವನ್ನು 8 ದಿನಗಳಲ್ಲಿ ಪೂರೈಸಿದರು. 20ರ ಹರೆಯದಲ್ಲಿ ಇಂಥದ್ದೊಂದು ಸಾಹಸವನ್ನು ಪೂರ್ಣಗೊಳಿಸಿದ್ದು ಹೊಸ ಉತ್ಸಾಹ ತಂದಿದೆ ಎನ್ನುತ್ತಾರೆ ಇಂದು.

ಆಮ್ಲಜನಕ ಕೊರತೆ ಇರೋ ಪ್ರದೇಶದಲ್ಲಿ ಸವಾರಿ:ಎತ್ತರದ ಪ್ರದೇಶಗಳಲ್ಲಿ ಆಮ್ಲಜನಕ ಕಡಿಮೆ ಇರುತ್ತದೆ. ಅಂತಹ ಪ್ರದೇಶಗಳಲ್ಲಿ ಬೈಕ್ ಸವಾರಿ ಕಷ್ಟ ಎಂದು ಹೇಳಲಾಗುತ್ತದೆ. ತಜ್ಞರ ಸೂಚನೆಯಂತೆ ಸೂಕ್ತ ಮುನ್ನೆಚ್ಚರಿಕೆ ವಹಿಸಿ ಪ್ರವಾಸ ಮುಂದುವರಿಸಲಾಗಿತ್ತು. ಬೈಕ್ ರೈಡಿಂಗ್ ನನ್ನ ಹವ್ಯಾಸ ಎಂದಿರುವ ಸಿಂಧು, ವೈದ್ಯೆಯಾಗಿ ನೆಲೆಯೂರಿದ ನಂತರ ಮತ್ತೊಂದು ದಾಖಲೆ ಮಾಡುತ್ತೇನೆ. ಪೋಷಕರು ಹೆಣ್ಣು ಮತ್ತು ಗಂಡು ಮಕ್ಕಳನ್ನು ಸಮಾನವಾಗಿ ಬೆಳೆಸಬೇಕು. ಇದರಿಂದ ಮಕ್ಕಳು ಎತ್ತರಕ್ಕೆ ಬೆಳೆಯಬೇಕು. ಹೆಣ್ಣುಮಕ್ಕಳನ್ನು ಪ್ರೋತ್ಸಾಹಿಸಿದರೆ ಯಾವುದೇ ಕ್ಷೇತ್ರದಲ್ಲೂ ಸಾಧನೆ ಮಾಡಬಹುದು ಎಂಬುದಕ್ಕೆ ನಾನೇ ಉದಾಹರಣೆ ಎನ್ನುತ್ತಾರೆ ಇಂದು.

ಚಿಕ್ಕಂದಿನಿಂದಲೂ ಎಲ್ಲದರಲ್ಲೂ ಎದೆಗಾರಿಕೆ ಮೆರೆದ ಮಗಳು ಬೈಕ್ ರೈಡಿಂಗ್ ಕಂಪ್ಲೀಟ್ ಮಾಡಿದ್ದು ತುಂಬಾ ಖುಷಿ ತಂದಿದೆ ಎನ್ನುತ್ತಾರೆ ಯುವ ವೈದ್ಯೆಯ ಪೋಷಕರು. ಮೊಮ್ಮಗಳ ಯಶಸ್ಸಿನ ಬಗ್ಗೆ ಹೆಮ್ಮೆಯಿದೆ ಎಂದು ಅಜ್ಜ ಸಂತಸ ವ್ಯಕ್ತಪಡಿಸಿದ್ದಾರೆ.

ಓದಿ:ಮತ್ತೆ ರಾಯಲ್​ ಎನ್​ಫೀಲ್ಡ್​ ದರ ಏರಿಕೆ: ಯಾವ ಬೈಕ್​ ದರ ಎಷ್ಟಿದೆ?


ABOUT THE AUTHOR

...view details