ಲಕ್ನೋ: ಐದು ವರ್ಷಗಳ ಹಿಂದೆ ನಾಪತ್ತೆಯಾಗಿದ್ದ 23 ವರ್ಷದ ಬುಡಕಟ್ಟು ಯುವತಿಯೊಬ್ಬಳು ಆಧಾರ್ ಕಾರ್ಡ್ ಡೇಟಾಬೇಸ್ ಸಹಾಯದಿಂದ ಜಾರ್ಖಂಡ್‌ನಲ್ಲಿದ್ದ ತನ್ನ ಕುಟುಂಬದೊಂದಿಗೆ ಮತ್ತೆ ಸೇರಿಕೊಂಡಿದ್ದಾಳೆ.
ಜಾರ್ಖಂಡ್‌ನ ದಿನಗೂಲಿ ಕಾರ್ಮಿಕನ ಪುತ್ರಿ ರಶ್ಮಣಿ ಎಂಬಾಕೆಯನ್ನು 2017 ರಲ್ಲಿ ಏಜೆಂಟ್ ಒಬ್ಬಾತ ದೆಹಲಿಯಲ್ಲಿ ಕೆಲಸ ಕೊಡಿಸುವುದಾಗಿ ಭರವಸೆ ನೀಡಿ ಕರೆದೊಯ್ದಿದ್ದ. ಯುವತಿಯ ಕುಟುಂಬ ಆರ್ಥಿಕ ಸಂಕಷ್ಟದಲ್ಲಿದ್ದುದರಿಂದ ಕುಟುಂಬಸ್ಥರು ಯುವತಿಯನ್ನು ಕರೆದೊಯ್ಯಲು ಒಪ್ಪಿಗೆ ನೀಡಿದ್ದರು.
ಆದರೆ ಏಜೆಂಟ್‌ನೊಂದಿಗೆ ರೈಲು ಹತ್ತಿದ ನಂತರ ರಶ್ಮಣಿಗೆ ಏನೋ ಅಪಾಯ ಕಾದಿದೆ ಎನಿಸಿತ್ತು. ಹೀಗಾಗಿ ಆಕೆ ಫತೇಪುರ್ ನಿಲ್ದಾಣದಲ್ಲಿ ಇಳಿದು ಆತನಿಂದ ತಪ್ಪಿಸಿಕೊಂಡಿದ್ದಳು. ನಂತರ ರೈಲ್ವೆ ಪೊಲೀಸರು ಆಕೆಯನ್ನು ರಕ್ಷಿಸಿ ಆಶ್ರಯಧಾಮದಲ್ಲಿ ಇರಿಸಿದ್ದರು. ಅಲ್ಲಿ ಆಕೆಗೆ ರಾಶಿ ಎಂದು ಹೆಸರಿಡಲಾಗಿತ್ತು.