ಕರ್ನಾಟಕ

karnataka

ETV Bharat / bharat

ಯುವತಿ ಮೇಲೆ ಅತ್ಯಾಚಾರ: ವಿಡಿಯೋ ಮಾಡಿ ಬ್ಲಾಕ್​ಮೇಲ್​​ - ವಿಡಿಯೋ ಮಾಡಿ ಬ್ಲಾಕ್​ಮೇಲ್​​

ನನಗೆ ಯುವಕ ಪಾನೀಯದಲ್ಲಿ ಮತ್ತು ಬರುವ ಪದಾರ್ಥ ಹಾಕಿ, ಅತ್ಯಾಚಾರ ಎಸಗಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಈ ಘಟನೆ ದೆಹಲಿಯ ಸಮಯ್‌ಪುರ್ ಬದ್ಲಿ ಪ್ರದೇಶದಲ್ಲಿ ನಡೆದಿದೆ.

A young man raped a woman
ಯುವತಿ ಮೇಲೆ ಅತ್ಯಾಚಾರ

By

Published : Dec 22, 2022, 2:14 PM IST

ನವದೆಹಲಿ:ರಾಷ್ಟ್ರರಾಜಧಾನಿಯ ಸಮಯ್​​ಪುರ್​​ ಬದ್ಲಿಯಲ್ಲಿ ಮಹಿಳೆಯೊಬ್ಬರ ಮೇಲೆ ಅತ್ಯಾಚಾರ ಎಸಗಿರುವ ಪ್ರಕರಣ ಬೆಳಕಿಗೆ ಬಂದಿದೆ. ಮಹಿಳೆ ತನ್ನ ಕುಟುಂಬದೊಂದಿಗೆ ಈ ಪ್ರದೇಶದಲ್ಲಿ ವಾಸಿಸುತ್ತಿದ್ದರು ಎಂದು ತಿಳಿದು ಬಂದಿದೆ. ಕೆಲ ತಿಂಗಳ ಹಿಂದೆ ಆಕೆಗೆ ಮನೆ ಮುಂದೆ ವಾಸವಾಗಿರುವ ಯುವಕನ ಪರಿಚಯವಾಗಿದೆ. ಬಳಿಕ ಇಬ್ಬರೂ ಫೋನ್ ನಂಬರ್​ ಹಂಚಿಕೊಂಡಿದ್ದಾರೆ. ನಂತರ ಯುವಕ ಯುವತಿಯನ್ನು ಭೇಟಿಯಾಗಲು ಲಿಬಾಸ್‌ಪುರ ಬಳಿ ಕರೆದಿದ್ದಾನೆ.

ಯುವತಿ ಯುವಕನನ್ನು ಭೇಟಿಯಾಗಲು ಲಿಬಾಸ್​​ಪುರಕ್ಕೆ ಹೋಗಿದ್ದಾರೆ ಎನ್ನಲಾಗ್ತಿದೆ. ಅಲ್ಲಿಂದ ಮಹಿಳೆಯನ್ನು ರೋಹಿಣಿ ಸೆಕ್ಟರ್ 18ರ ಹೋಟೆಲ್‌ಗೆ ಕರೆದೊಯ್ಯಲಾಗಿದೆ. ಅಲ್ಲಿ ತಂಪು ಪಾನೀಯದಲ್ಲಿ ಏನನ್ನೋ ಬೆರಸಿ ಪ್ರಜ್ಞೆ ತಪ್ಪಿಸಿದ್ದಾನೆ ಎಂದು ಹೇಳಲಾಗ್ತಿದೆ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿ ಯುವತಿ ಮೇಲೆ ಅತ್ಯಾಚಾರ ನಡೆಸಿದ್ದಾನೆ ಎಂಬ ಆರೋಪ ಕೇಳಿಬಂದಿದೆ. ಸಂತ್ರಸ್ತೆಗೆ ಪ್ರಜ್ಞೆ ಬಂದಾಗ, ದೇಹದಲ್ಲಿ ಬಟ್ಟೆ ಇರಲಿಲ್ಲ ಎಂದು ಸಂತ್ರಸ್ತೆ ಹೇಳಿದ್ದಾರೆ.

ಇದನ್ನೂ ಓದಿ:ಜಾಮೀನು ಅರ್ಜಿ ಹಿಂಪಡೆದ ಕೊಲೆ ಆರೋಪಿ ಅಫ್ತಾಬ್ ಪೂನಾವಾಲಾ

ಯುವಕನ ಈ ಕೃತ್ಯವನ್ನು ವಿರೋಧಿಸಿದಾಗ, ಆತ ಬೆದರಿಕೆ ಹಾಕಿದ್ದಲ್ಲದೇ ವಿಡಿಯೋ ಮಾಡಿರುವುದಾಗಿಯೂ ಹೇಳಿದ್ದಾನೆ ಎಂದು ಯುವತಿ ಆರೋಪಿಸಿದ್ದಾರೆ. ಯಾರಿಗಾದರೂ ಹೇಳಿದರೆ ಅಥವಾ ವಿರೋಧಿಸಿದರೆ, ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತದೆ ಎಂದು ಬೆದರಿಕೆ ಹಾಕಿದ್ದಾನಂತೆ. ಇದಾದ ಬಳಿಕ ಈ ವಿಡಿಯೋ ತೋರಿಸಿ ಬ್ಲ್ಯಾಕ್ ಮೇಲ್ ಮಾಡಲು ಆರಂಭಿಸಿದ್ದಾರಂತೆ.

ವಿಡಿಯೋವನ್ನು ಪತಿಗೆ ಕಳುಹಿಸುವುದಾಗಿ ಬೆದರಿಸಿ ಆಕೆಗೆ ದೈಹಿಕ ಹಿಂಸೆ ನೀಡಲು ಆರಂಭಿಸಿದ್ದ ಎಂಬ ಆರೋಪ ಕೇಳಿ ಬಂದಿದೆ. ಇದರಿಂದ ಬೇಸರಗೊಂಡ ಸಂತ್ರಸ್ತೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಸಂತ್ರಸ್ತೆಗೆ ಕೌನ್ಸೆಲಿಂಗ್​ ನೀಡಿದ ಬಳಿಕ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.

ABOUT THE AUTHOR

...view details