ಕರ್ನಾಟಕ

karnataka

ETV Bharat / bharat

ನಾಟಿ ಕೋಳಿ ಸಾಕಾಣಿಕೆಯಿಂದ ಯಶಸ್ಸು .. ಮೊಟ್ಟೆ ಮರಿ ಮಾಡುವ ಸಾಧನ ತಯಾರಿಸಿದ ಹಾಸನ ಯುವಕ

ಕೋಳಿ ಮೊಟ್ಟಯಿಂದ ಮರಿ ಮಾಡಿಸುವ ಸಾಧನ ತಯಾರಿಸುವ ಮೂಲಕ ಹಾಸನದ ಯುವಕನೋರ್ವ ಗಮನ ಸೆಳೆದಿದ್ದಾನೆ. ಮಗನ ಕಾರ್ಯಕ್ಕೆ ಕೃಷಿಕರಾದ ತಂದೆ ಸ್ವಾಮಿ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಕೇವಲ 1 ಎಕರೆ 8 ಗುಂಟೆ ಜಮೀನಿನಲ್ಲಿ ತಂದೆಯ ಅಣಬೆ ಬೇಸಾಯದ ಜೊತೆ ಸಾವಯವ ಕೃಷಿ ಅಳವಡಿಸಿಕೊಂಡಿರುವ ಯುವಕ ಅನಿಲ್ ಉತ್ತಮ ಬೆಳೆಯನ್ನು ಸಹ ಬೆಳೆಯುತ್ತಿದ್ದಾನೆ.

a-young-man-invented-chicken-egg-hatcher
ನಾಟಿ ಕೋಳಿ ಸಾಕಾಣಿಕೆಯಿಂದ ಯಶ ಕಂಡ ಪ್ರತಿಭೆ

By

Published : May 3, 2021, 6:04 AM IST

ಹಾಸನ: ಇತ್ತೀಚೆಗೆ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಕೃಷಿಯತ್ತ ಒಲವು ತೋರಿದ್ರೂ ಕೂಡ ಸರಿಯಾದ ಮಾರುಕಟ್ಟೆ ದೊರೆಯುತ್ತಿಲ್ಲ ಎಂಬ ಕಾರಣಕ್ಕೆ ಕೃಷಿಯಿಂದ ವಿಮುಖರಾಗ್ತಿದ್ದಾರೆ. ಆದ್ರೆ ಇಲ್ಲೋರ್ವ ಯುವಕ ತನ್ನ ತಂದೆಯ ಜೊತೆ ಸೇರಿ ರೈತರಿಗೆ ಬೇಕಾದ ಸಾಧನವನ್ನು ಕಡಿಮೆ ಬೆಲೆಯಲ್ಲಿ ತಯಾರಿಸಿ, ಕಡಿಮೆ ದರಕ್ಕೆ ಮಾರುದ್ದಾನೆ.

ಹೊಳೆನರಸೀಪುರ ರಸ್ತೆಗೆ ಹೋಗೋ ದಾರಿಯಲ್ಲಿ ಸಿಗೋ ಮೊಸಳೆ ಹೊಸಹಳ್ಳಿ ಸಮೀಪದ ಉಳುವಾರೆ ಗ್ರಾಮದ ಯುವಕ ಅನಿಲ್, ಮೊದಲಿಗೆ ನಾಟಿ ಕೋಳಿ ಸಾಕಾಣಿಕೆಯಲ್ಲಿ ಯಶಸ್ಸು ಕಂಡಿದ್ದ. ಬಳಿಕ ನಾಟಿಕೋಳಿ ಮೊಟ್ಟೆ ಮರಿ ಮಾಡುವ ಉಪಕರಣ ಕಂಡು ಹಿಡಿದಿದ್ದಾನೆ. ಐಟಿಐ ಓದಿರೋ ಅನಿಲ್, ಸರಳವಾದ ಕಾಗದದ ರಟ್ಟಿನ ಡಬ್ಬ, ಫ್ಯಾನ್ ಹಾಗೂ ಟೆಂಪ್ರೆಚರ್ ಕಂಟ್ರೋಲರ್ ಅಳವಡಿಸಿ ಕೋಳಿ ಮೊಟ್ಟೆ ಮರಿ ಮಾಡುವ ಸಾಧನ ರೆಡಿ ಮಾಡಿದ್ದಾರೆ. ಕೃಷಿ ಮಾಡೋ ಯುವಕರಿಗೆ ಕೇವಲ ಮೂರುವರೆ ಸಾವಿರ ರೂಪಾಯಿಗೆ ಅದನ್ನ ಮಾರಾಟ ಮಾಡಿ, ಜೊತೆಗೆ ನಾಟಿ ಕೋಳಿ ಸಾಕಾಣಿಕೆ ಬಗ್ಗೆಯೂ ಮಾಹಿತಿ ನೀಡ್ತಿದ್ದಾರೆ.

ನಾಟಿ ಕೋಳಿ ಸಾಕಾಣಿಕೆಯಿಂದ ಯಶಸ್ಸು ಕಂಡ ಪ್ರತಿಭೆ

ಅನಿಲ್​​ ಒಂದು ನೈಜ ನಾಟಿ ಕೋಳಿಮರಿಗೆ ಅದರಲ್ಲೂ ಒಂದು ದಿನದ ಮರಿಗೆ 40 ರೂಪಾಯಿ ಹಾಗೂ 15ರಿಂದ 20 ದಿನದ ನಾಟಿಕೋಳಿ ಮರಿಗೆ ಕನಿಷ್ಠ 100ರಿಂದ 150 ರೂಪಾಯಿ ಮತ್ತು ಒಂದು ನಾಟಿ ಕೋಳಿ ಮೊಟ್ಟೆಗೆ 15 ರೂಪಾಯಿ ನಿಗದಿ ಮಾಡಿದ್ದಾನೆ. ಅಲ್ಲದೆ, ಈಗಾಗಲೇ 60ಕ್ಕೂ ಹೆಚ್ಚು ಇನ್ ಕ್ಯೂಬೇಟರ್ ಮಾರಾಟ ಮಾಡಿ ಆದಾಯ ಗಳಿಸಿದ್ದಾನೆ.

ಮಗನ ಕಾರ್ಯಕ್ಕೆ ಕೃಷಿಕರಾದ ತಂದೆ ಸ್ವಾಮಿ ಕೂಡ ಬೆನ್ನೆಲುಬಾಗಿ ನಿಂತಿದ್ದಾರೆ. ಕೇವಲ 1 ಎಕರೆ 8 ಗುಂಟೆ ಜಮೀನಿನಲ್ಲಿ ತಂದೆಯ ಅಣಬೆ ಬೇಸಾಯದ ಜೊತೆ ತಮ್ಮ ಸಾವಯವ ಕೃಷಿ ಅಳವಡಿಕೆ ಮಾಡಿಕೊಂಡಿರುವ ಅನಿಲ್ ಉತ್ತಮ ಬೆಳೆ ಬೆಳೆಯುತ್ತಿದ್ದಾನೆ. ಕೋಣೆಯೊಂದರಲ್ಲಿ 150 ರಿಂದ 200 ಬ್ಯಾಗ್ ಅಣಬೆ ಬೇಸಾಯ ಮಾಡಿದ್ದು, ಆರಂಭದಲ್ಲಿ ಮಾರುಕಟ್ಟೆ ಸಮಸ್ಯೆ ಎದುರಾಗಿತ್ತು. ಈಗ ನೇರವಾಗಿ ಗ್ರಾಹಕರಿಗೇ ಕೆಜಿಗೆ 200 ರೂಪಾಯಿಯಂತೆ ಮಾರುತ್ತಿದ್ದು, ಉತ್ತಮ ಲಾಭ ಸಿಗ್ತಿದೆ ಅಂತಾರೆ ಸ್ವಾಮಿಗೌಡ.

ಅಲ್ಲದೆ ಅಪ್ಪ-ಮಗ ತಮ್ಮ ಜಮೀನಲ್ಲಿ ತೆಂಗು, ಕಿತ್ತಳೆ ಗಿಡ, ಏಲಕ್ಕಿ, ಬಾಳೆ ಸೇರಿದಂತೆ ಇತರ ಹಲವು ಗಿಡಗಳನ್ನು ಅಚ್ಚುಕಟ್ಟಾಗಿ ಬೆಳೆಯುತ್ತಿರೋದು ಮತ್ತೊಂದು ವಿಶೇಷ. ಸದ್ಯಕ್ಕೆ 40 ತೆಂಗಿನ ಮರಗಳನ್ನ ಹೊಂದಿರೋ ಇವರು ತಮ್ಮಲ್ಲಿರುವ ಅಲ್ಪ ಜಮೀನನ್ನೇ ಕೃಷಿ ಪ್ರಯೋಗ ಶಾಲೆಯನ್ನಾಗಿಸಿಕೊಂಡು ಇತರರಿಗೆ ಮಾದರಿಯಾಗಿದ್ದಾರೆ.

ABOUT THE AUTHOR

...view details