ಹೈದರಾಬಾದ್:ಬ್ರಿಟನ್ ಮೂಲದ ಐಷಾರಾಮಿ ಮೆಕ್ಲರೆನ್ 765 ಎಲ್ಟಿ ಸ್ಪೈಡರ್ ಕಾರನ್ನು ಹೈದರಾಬಾದ್ನ ಉದ್ಯಮಿಯೊಬ್ಬರು ಖರೀದಿಸಿದ್ದು, ಇದು ದೇಶದಲ್ಲಿಯೇ ಅತಿ ದುಬಾರಿ ಕಾರಾಗಿದೆ. ಇದರ ಬೆಲೆ ಸುಮಾರು 12 ಕೋಟಿ ರೂಪಾಯಿಯಾಗಿದೆ.
ಉದ್ಯಮ ಮತ್ತು ವಾಹನ ಸಂಗ್ರಹದಲ್ಲಿ ಆಸಕ್ತಿ ಹೊಂದಿರುವ ನಾಸೀರ್ ಖಾನ್ ಮೆಕ್ಲರೆನ್ ಕಾರು ಖರೀದಿಸಿದವರು. ಇತ್ತೀಚೆಗೆ ಕಾರನ್ನು ಆಮದು ಮಾಡಿಕೊಂಡಿದ್ದು, ನಗರದ ರಾಜ್ ಫಲಕ್ನಾಮಾ ಅರಮನೆಯ ಮುಂದೆ ಸ್ವೀಕರಿಸಿದ್ದಾರೆ. ಬಳಿಕ ಕಾರಿನ ಜೊತೆಗಿನ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಇಂಗ್ಲೆಂಡ್ನ ಐಷಾರಾಮಿ ಸೂಪರ್ ಕಾರ್ ತಯಾರಕ ಮೆಕ್ಲರೆನ್ ಆಟೋಮೋಟಿವ್ ಕಳೆದ ವರ್ಷ ನವೆಂಬರ್ನಲ್ಲಿ ಈ ಕಾರನ್ನು ಭಾರತೀಯ ಮಾರುಕಟ್ಟೆಗೆ ಪರಿಚಯಿಸಿತ್ತು. 3.72 ಕೋಟಿ ರೂಪಾಯಿಗಳಿಂದ ಪ್ರಾರಂಭವಾಗುವ ಆರು ಸೂಪರ್‌ಕಾರ್‌ಗಳ ಶ್ರೇಣಿಯನ್ನು ಇದು ಹೊಂದಿದೆ. ಅದರಲ್ಲಿ 765 LT ಸ್ಪೈಡರ್ ಸುಮಾರು 12 ಕೋಟಿ ರೂಪಾಯಿಗಳಾಗಿದ್ದು, ಅತ್ಯಂತ ದುಬಾರಿಯಾಗಿದೆ. ನಾಸೀರ್ ಖಾನ್ ದೇಶದಲ್ಲಿಯೇ 765 LT ಸ್ಪೈಡರ್‌ನ ಮೊದಲ ಗ್ರಾಹಕರು ಎಂದು ಹೇಳಲಾಗ್ತಿದೆ.