ವಿಶಾಖಪಟ್ಟಣ( ಆಂಧ್ರಪ್ರದೇಶ): ಕೋವಿಡ್ನಿಂದ ಅದೇಷ್ಟೋ ಜನರು ತಮ್ಮ ಸಂಬಂಧಿಗಳು, ತಂದೆ-ತಾಯಿ ಕಳೆದುಕೊಂಡು ಸಂಕಷ್ಟಕ್ಕಿಡಾಗಿದ್ದಾರೆ. ಆದರೆ ಇಲ್ಲೊಬ್ಬ ಪ್ರೇಮಿ ತನ್ನ ಪ್ರಿಯತಮೆ ಕೋವಿಡ್ನಿಂದ ಮೃತಪಟ್ಟಿದ್ದಾಳೆಂದು ಆತ್ಮಹತ್ಯೆಗೆ ಶರಾಣಗಿರುವ ಘಟನೆ ಇಲ್ಲಿನ ಗಾಜುವಾಕ ಕಣಿತಿ ನಗರದಲ್ಲಿ ನಡೆದಿದೆ.
ಹೌದು, ತಾನು ಇಷ್ಟಪಟ್ಟಿದ್ದ ಯುವತಿ ಕೋವಿಡ್ ಸೊಂಕಿನಿಂದಾಗಿ ಕಳೆದ ಮೂರು ದಿನಗಳ ಹಿಂದೆ ಗುಂಟೂರಿನಲ್ಲಿ ಮೃತಪಟ್ಟಿದ್ದಾಳೆ. ಈ ವಿಷಯವನ್ನು ಜೀರ್ಣಿಸಿಕೊಳ್ಳದ ರೋಹಿತ್ ಕುಮಾರ್ (25) ಬುಧವಾರ ಸಂಜೆ ಆತ್ಮಹತ್ಯೆಗೆ ಶರಣಾಗಿದ್ದಾನೆ.
ಪರವಾಡ ತಾಲೂಕಿನ ದೇಶಪಾತ್ರುನಿಪಾಲೇ ಗ್ರಾಮದ ನಿವಾಸಿ ದಟ್ಟಿ ಕೃಷ್ಣಾರಾವು, ಶಾಂತಿ ದಂಪತಿ ಮಗ ರೋಹಿತ್ ಕುಮಾರ್ ಇಂಟರ್ ಮೀಡಿಯೆಟ್ ವರೆಗೆ ವ್ಯಾಸಂಗ ಮುಗಿಸಿದ್ದಾರೆ. ಹೋಟೆಲ್ ಆನ್ಲೈನ್ ಪಾರ್ಸಲ್ ಸರ್ವಿಸ್ವೊಂದರಲ್ಲಿ ಕೆಲಸ ಮಾಡುತ್ತಿದ್ದರು. ಆರು ಸ್ನೇಹಿತರೊಡನೆ ಸೇರಿ ರೋಹಿತ್ ಕಣಿತಿ ರಸ್ತೆ ನಗರದಲ್ಲಿ ವಾಸಿಸುತ್ತಿದ್ದನು. ಮಧ್ಯಾಹ್ನದವರೆಗೆ ಪಾರ್ಸಲ್ ನೀಡಿ ಬಂದಿದ್ದಾರೆ. ಮಧ್ಯಾಹ್ನ 2.30ರ ಸಮಯಕ್ಕೆ ನೇರ ರೂಂಗೆ ತೆರಳಿ ಫ್ಯಾನ್ಗೆ ನೇಣುಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.