ಕರ್ನಾಟಕ

karnataka

ETV Bharat / bharat

ಪ್ರೀತಿಸಿದವಳು ಬೇರೊಬ್ಬನೊಂದಿಗೆ ಮದುವೆ.. ಕಲ್ಯಾಣ ಮಂಟಪದಲ್ಲೇ ಲವರ್​ ಆತ್ಮಹತ್ಯೆ! - ಕಲ್ಯಾಣ ಮಂಟಪದಲ್ಲೇ ಲವರ್​ ಆತ್ಮಹತ್ಯೆ

ಪ್ರೀತಿಸುತ್ತಿದ್ದ ಯುವತಿಯೊಬ್ಬಳು ಬೇರೊಬ್ಬನೊಂದಿಗೆ ಮದುವೆ ಮಾಡಿಕೊಳ್ಳಲು ಮುಂದಾದ ಕಾರಣ, ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

Lover suicide
Lover suicide

By

Published : Jul 4, 2022, 8:09 PM IST

Updated : Jul 4, 2022, 8:20 PM IST

ಹೈದರಾಬಾದ್​(ತೆಲಂಗಾಣ):ತಾನೂ ಪ್ರೀತಿಸುತ್ತಿದ್ದ ಯುವತಿ ಬೇರೊಬ್ಬನೊಂದಿಗೆ ಮದುವೆ ಮಾಡಿಕೊಳ್ಳುತ್ತಿದ್ದ ಕಾರಣ, ಕಲ್ಯಾಣ ಮಂಟಪದಲ್ಲೇ ಸೀಮೆಎಣ್ಣೆ ಸುರಿದುಕೊಂಡು ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ ಹೈದರಾಬಾದ್​ನಲ್ಲಿ ನಡೆದಿದೆ. ಘಟನೆಯ ಸಂಪೂರ್ಣ ದೃಶ್ಯಾವಳಿ ಸಿಸಿಟಿವಿಯಲ್ಲಿ ಸೆರೆಯಾಗಿವೆ.

ಪ್ರೀತಿಸಿದವಳು ಬೇರೊಬ್ಬನೊಂದಿಗೆ ಮದುವೆ.. ಕಲ್ಯಾಣ ಮಂಟಪದಲ್ಲೇ ಲವರ್​ ಆತ್ಮಹತ್ಯೆ!

ರಾಜೇಂದ್ರನಗರದ ನಿವಾಸಿ ಶೇಕ್​ ಅಶ್ವಕ್​(19) ಅದೇ ಪ್ರದೇಶದ ಯುವತಿಯನ್ನ ಪ್ರೀತಿಸುತ್ತಿದ್ದ. ಆದರೆ, ಜೂನ್​​ 30ರಂದು ಲಂಗರ್​ ಹೌಸ್​​ನಲ್ಲಿ ಬೇರೊಬ್ಬನೊಂದಿಗೆ ಮದುವೆ ಕಾರ್ಯಕ್ರಮ ನಡೆಯುತ್ತಿತ್ತು. ಈ ವಿಷಯ ಅಶ್ವಕ್​​ನಿಗೆ ಗೊತ್ತಾಗಿದೆ. ತಕ್ಷಣವೇ ಕಲ್ಯಾಣ ಮಂಟಪಕ್ಕೆ ತೆರಳಿರುವ ಆತ ಮೈಮೇಲೆ ಸೀಮೆ ಎಣ್ಣೆ ಸುರಿದುಕೊಂಡು ಬೆಂಕಿ ಹಚ್ಚಿಕೊಂಡಿದ್ದಾನೆ. ಇದನ್ನ ನೋಡಿರುವ ಸ್ಥಳೀಯರು ಆತನನ್ನ ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಅಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದ ಆತ, ಇಂದು ಬೆಳಗ್ಗೆ ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿರಿ:ಇಸ್ರೇಲ್​​ನಲ್ಲಿ ವೃದ್ಧನ ಮೇಲೆ ಅಮಾನವೀಯ ರೀತಿ ಹಲ್ಲೆ ನಡೆಸಿದ ಕೇರಳದ ವ್ಯಕ್ತಿ.. ವಿಡಿಯೋ

ಹೈದರಾಬಾದ್​ನ ಹಳೆ ಸಿಟಿ ಲ್ಯಾಂಗರ್​ ಹೌಸ್​ನಲ್ಲಿ ಈ ಘಟನೆ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಎಫ್ಐಆರ್​ ದಾಖಲು ಮಾಡಿಕೊಂಡಿದ್ದಾರೆ. ಇನ್ನೂ ಲಭ್ಯವಾಗಿರುವ ಮಾಹಿತಿ ಪ್ರಕಾರ, ಇದೊಂದು ಒನ್​ಸೈಡ್​ ಲವ್​ ಕಹಾನಿ ಎನ್ನಲಾಗಿದೆ.

Last Updated : Jul 4, 2022, 8:20 PM IST

ABOUT THE AUTHOR

...view details