ಕರ್ನಾಟಕ

karnataka

ETV Bharat / bharat

'ಹೆಲಿಕಾಪ್ಟರ್'​ ಸಿದ್ಧಪಡಿಸಿದ 8ನೇ ಕ್ಲಾಸ್​ ಪಾಸಾದ ಮೆಕ್ಯಾನಿಕ್​... ಪರೀಕ್ಷೆ ವೇಳೆ ಅಪಘಾತ, ದುರ್ಮರಣ

ಹೆಲಿಕಾಪ್ಟರ್​ ತಯಾರಿಸಿದ್ದ ಮೆಕ್ಯಾನಿಕ್ ಒಬ್ಬ ಅದರ ಟೆಸ್ಟಿಂಗ್ ನಡೆಸುತ್ತಿದ್ದ ವೇಳೆ ಅಪಘಾತಕ್ಕೀಡಾಗಿ ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದಲ್ಲಿ ನಡೆದಿದೆ.

YOUNG BOY DIED
YOUNG BOY DIED

By

Published : Aug 11, 2021, 9:44 PM IST

Updated : Aug 11, 2021, 9:51 PM IST

ಯಾವತ್​ಮಾಲ್​(ಮಹಾರಾಷ್ಟ್ರ): 8ನೇ ತರಗತಿ ಪಾಸ್​ ಮಾಡಿದ್ದ 24 ವರ್ಷದ ಮೆಕ್ಯಾನಿಕ್ ಒಬ್ಬ ಅಭಿವೃದ್ಧಿ ಪಡಿಸಿದ್ದ ಹೆಲಿಕಾಪ್ಟರ್​ವೊಂದು ಪರೀಕ್ಷೆ ವೇಳೆ ಅಪಘಾತಕ್ಕೀಡಾಗಿದ್ದು, ಈ ವೇಳೆ ಮೆಕ್ಯಾನಿಕ್ ಸಾವನ್ನಪ್ಪಿರುವ ಘಟನೆ ನಡೆದಿದೆ.

ಮಹಾರಾಷ್ಟ್ರದ ಯಾವತ್​ಮಲ್​ನಲ್ಲಿ ಈ ಘಟನೆ ನಡೆದಿದ್ದು, ಮೆಕ್ಯಾನಿಕ್​​ ಆಗಿದ್ದ ಶೇಖ್ ಇಸ್ಮಾಯಿಲ್​ ಇಬ್ರಾಹಿಂ ಹೆಲಿಕಾಪ್ಟರ್​ ನಿರ್ಮಾಣ ಮಾಡಿದ್ದರು. ವರ್ಕ್​​ಶಾಪ್​​ನಲ್ಲಿ ಪರಿಶೀಲನೆ ಮಾಡುತ್ತಿದ್ದಾಗ ಪರೀಕ್ಷೆ ನಡೆಸಲು ಹಾರಾಟ ನಡೆಸಲು ಮುಂದಾಗಿದ್ದಾನೆ. ಈ ವೇಳೆ, ಅದರ ಬ್ಲೇಡ್​ವೊಂದು ಆತನ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದಾನೆ.

ತಕ್ಷಣವೇ ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಈತ ಕಳೆದ ಎರಡು ವರ್ಷಗಳಿಂದ ಹೆಲಿಕಾಪ್ಟರ್​ ಅಭಿವೃದ್ಧಿ ಕಾರ್ಯದಲ್ಲಿ ನಿರತನಾಗಿದ್ದನು ಎಂದು ತಿಳಿದು ಬಂದಿದೆ.

ಇದನ್ನೂ ಓದಿರಿ: ಫಿಟ್​ ಆಗಿರಲು 'ಬ್ಲಾಕ್​ ವಾಟರ್​' ಕುಡಿಯುತ್ತಾಳಂತೆ ಬಾಲಿವುಡ್​ ಬ್ಯೂಟಿ ಮಲೈಕಾ.. ಆ ನೀರಿನ ಬೆಲೆ ಎಷ್ಟು?

ಶೇಖ್​ ಇಸ್ಮಾಯಿಲ್​​ ಫುಲ್ಸವಾಂಗಿ ಗ್ರಾಮದ ನಿವಾಸಿಯಾಗಿದ್ದು, 8ನೇ ತರಗತಿವರೆಗೆ ಮಾತ್ರ ಶಾಲೆ ಕಲಿತ್ತಿದ್ದಾನೆ. ಇದಾದ ಬಳಿಕ ಮೆಕ್ಯಾನಿಕ್​ ಶಾಪ್​ ನಡೆಸುತ್ತಿದ್ದನು. ಇದೇ ಸಂದರ್ಭದಲ್ಲಿ ಆತ ಹೆಲಿಕಾಪ್ಟರ್ ನಿರ್ಮಾಣ ಮಾಡಿದ್ದನು. ಅದಕ್ಕೆ 'ಮುನ್ನಾ ಹೆಲಿಕಾಪ್ಟರ್' ಎಂದು ನಾಮಕರಣ ಮಾಡಿದ್ದನು. ಆಗಸ್ಟ್​ 15ರಂದು ಈ ಹೆಲಿಕಾಪ್ಟರ್ ಲಾಂಚ್ ಮಾಡುವ ಉದ್ದೇಶ ಇಟ್ಟುಕೊಂಡಿದ್ದನು. ಆದರೆ, ಇದಕ್ಕೂ ಮುಂಚಿತವಾಗಿ ಟೆಸ್ಟಿಂಗ್ ಮಾಡುವ ಉದ್ದೇಶದಿಂದ ವರ್ಕ್​ಶಾಪ್​ನಲ್ಲಿ ಭಾಗಿಯಾಗಿದ್ದ. ಈ ಸಂದರ್ಭದಲ್ಲಿ ಅದರ ಬ್ಲೇಡ್​ ಆತನ ಮೇಲೆ ಬಿದ್ದು ಮೃತಪಟ್ಟಿದ್ದಾನೆ.

Last Updated : Aug 11, 2021, 9:51 PM IST

ABOUT THE AUTHOR

...view details