ಕರ್ನಾಟಕ

karnataka

ETV Bharat / bharat

ವರ್ಷ ಕಳೆದರೂ ಗಲ್ವಾನ್ ಘರ್ಷಣೆಗೆ ಸರ್ಕಾರ ಉತ್ತರಿಸಿಲ್ಲ: ಸೋನಿಯಾ ಗಾಂಧಿ - .20 ಸೈನಿಕರು ಹುತಾತ್ಮ

ಗಲ್ವಾನ್ ಕಣಿವೆಯಲ್ಲಿನ ಭಾರತ - ಚೀನಾ ಸಂಘರ್ಷಕ್ಕೆ ಒಂದು ವರ್ಷ ಕಳೆದಿದೆ. ಈ ಕುರಿತು ಆಡಳಿತ ಪಕ್ಷದ ವಿರುದ್ಧ ಕಾಂಗ್ರೆಸ್​ ಸ್ಪಷ್ಟ ಸಂದೇಶ ನೀಡುವಂತೆ. ಹುತಾತ್ಮರಾದ ಯೋಧರ ಬಲಿದಾನ ವ್ಯರ್ಥವಾಗಲು ಬಿಡದೇ, ದೇಶವಾಸಿಗಳ ವಿಶ್ವಾಸಕ್ಕೆ ತೆಗೆದುಕೊಳ್ಳುವಂತೆ ಸೋನಿಯಾ ಗಾಂಧಿ ಆಗ್ರಹಿಸಿದ್ದಾರೆ.

sonia-gandhi
ಸೋನಿಯಾ ಗಾಂಧಿ

By

Published : Jun 15, 2021, 8:20 PM IST

ನವದೆಹಲಿ: ಗಲ್ವಾನ್ ಕಣಿವೆಯಲ್ಲಿ ಭಾರತ ಮತ್ತು ಚೀನಾ ಸೈನಿಕರ ನಡುವಿನ ಸಂಘರ್ಷ ನಡೆದು ಒಂದು ವರ್ಷ ಕಳೆದಿದೆ. ಈ ಕುರಿತು ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ, ಈ ವಿಷಯ ಕುರಿತು ಕೇಂದ್ರ ಸರ್ಕಾರ ಸ್ಪಷ್ಟವಾಗಿರಬೇಕು ಎಂದು ನಮ್ಮ ಪಕ್ಷ ಆಗ್ರಹಿಸುತ್ತಿದೆ ಎಂದಿದ್ದಾರೆ.

2020ರ ಜೂನ್ 15-16ರ ರಾತ್ರಿ ಚೀನಾದ ಸೈನ್ಯದೊಂದಿಗಿನ ಮುಖಾಮುಖಿಯಲ್ಲಿ ಬಿಹಾರ ರೆಜಿಮೆಂಟ್‌ನ ಕಮಾಂಡಿಂಗ್ ಆಫೀಸರ್ ಸೇರಿದಂತೆ 20 ಸೈನಿಕರು ಹುತಾತ್ಮರಾಗಿದ್ದರು. ಈ ಕುರಿತು ಕೇಂದ್ರ ಸರ್ಕಾರ ದೇಶದ ಜನತೆಯನ್ನ ವಿಶ್ವಾಸಕ್ಕೆ ತೆಗದುಕೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

ಈ ಘಟನೆ ಕುರಿತು ಕೇಂದ್ರ ಸರ್ಕಾರ ಸ್ಪಷ್ಟನೆ ನೀಡಬೇಕು. ಇದಕ್ಕಾಗಿ ನಾವು ತಾಳ್ಮೆಯಿಂದ ಕಾಯುತ್ತಿದ್ದೇವೆ. ಕೆಚ್ಚೆದೆಯ 20 ಯೋಧರ ಬಲಿದಾಗ ವ್ಯರ್ಥವಾಗಬಾರದು. ಒಂದು ವರ್ಷದ ಹಿಂದೆ ನಡೆದ ಘಟನೆಗೆ ಇನ್ನೂ ಸ್ಪಷ್ಟನೆ ನೀಡಿಲ್ಲ. ಆದರೆ, ಪ್ರಧಾನಿ ಮೋದಿ ಈ ಕುರಿತು ಕಳೆದ ವರ್ಷ ಯಾವ ಸಂಘರ್ಷವೂ ನಡೆದಿಲ್ಲ ಎಂದು ನುಡಿದ ಮಾತು ಇಂದಿಗೂ ಹಾಗೆಯೇ ಉಳಿದಿದೆ ಎಂದು ಸೋನಿಯಾ ಗಾಂಧಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರಧಾನ ಮಂತ್ರಿಯ ಹೇಳಿಕೆಯ ಬೆನ್ನಲ್ಲೆ ನಾವು ಪದೇ ಪದೇ ಘಟನೆಯ ಬಗ್ಗೆ ಮಾಹಿತಿ ಕೇಳಿದ್ದೇವೆ. ಹಾಗೆಯೇ ಏಪ್ರಿಲ್​ 2020ಕ್ಕಿಂತಲೂ ಮೊದಲು ಗಡಿಯ ಯಥಾಸ್ಥಿತಿ ಕಾಪಾಡಲು ಯಾವ ಕ್ರಮ ತೆಗೆದುಕೊಳ್ಳಲಾಗಿದೆ ಎಂಬ ವಿವರ ನಾವು ಬಯಸಿದ್ದೇವೆ ಎಂದಿದ್ದಾರೆ. ಈ ಕುರಿತು ರಾಹುಲ್ ಗಾಂಧಿ ಸಹ ಟ್ವೀಟ್ ಮಾಡಿದ್ದು, ಆ ಘಟನೆಗೆ ಉತ್ತರಿಸಲಾಗದ ಹಲವು ಪ್ರಶ್ನೆಗಳಿವೆ ಮತ್ತು ಈ ಸರ್ಕಾರವು ಜನರಿಗೆ ನೀಡಬೇಕಾದ ಅನೇಕ ವಿವರಣೆಗಳು ಉಳಿದಿವೆ ಎಂದಿದ್ದು, #JusticeForGalwanMartyrs ಹ್ಯಾಷ್​​​​​​ಟ್ಯಾಗ್ ಬಳಸಿ ಟ್ವೀಟ್ ಮಾಡಿದ್ದಾರೆ.

ಇದನ್ನೂ ಓದಿ:ಗಲ್ವಾನ್ ಸಂಘರ್ಷದಲ್ಲಿ ಹುತಾತ್ಮರಾದ ಕರ್ನಲ್ ಸಂತೋಷ್ ಬಾಬು ಪ್ರತಿಮೆ ಅನಾವರಣ

ABOUT THE AUTHOR

...view details