ಕರ್ನಾಟಕ

karnataka

ETV Bharat / bharat

ರೈಲ್ವೆ ನಿಲ್ದಾಣದಲ್ಲಿ ತಪ್ಪು ಮಾರ್ಗದಲ್ಲಿ ಬಂದ ಎಂಜಿನ್​; ನಾಲ್ವರು ಗ್ಯಾಂಗ್​ಮನ್​ ದುರ್ಮರಣ

ರೈಲು ಹಳಿ ರಿಪೇರಿ ಕಾರ್ಯದಲ್ಲಿ ನಿರತರಾಗಿದ್ದ ನಾಲ್ವರು ಗ್ಯಾಂಗ್​ಮನ್​ ಮೇಲೆ ಲೈಟ್​ ರಿಪೇರಿ ಎಂಜಿನ್​ ಹರಿದಿದೆ.

ನಾಲ್ವರು ಗ್ಯಾಂಗ್​ಮನ್​ ಸಾವು
ನಾಲ್ವರು ಗ್ಯಾಂಗ್​ಮನ್​ ಸಾವು

By

Published : Feb 13, 2023, 11:45 AM IST

ಮುಂಬೈ: ರೈಲು ಡಿಕ್ಕಿಯಾದ ಪರಿಣಾಮ ನಾಲ್ವರು ಗ್ಯಾಂಗ್​ಮನ್​ಗಳು​​ ಸಾವನ್ನಪ್ಪಿರುವ ದಾರುಣ ಘಟನೆ ನಾಸಿಕ್ ಜಿಲ್ಲೆಯ ಲಾಸಲ್ ಗಾಂವ್ ರೈಲು ನಿಲ್ದಾಣದಲ್ಲಿ ನಡೆದಿದೆ. ಲೈಟ್​ ರಿಪೇರಿ ಎಂಜಿನ್​ ತಪ್ಪು ದಿಕ್ಕಿನಲ್ಲಿ ಬಂದ ಪರಿಣಾಮ ಈ ದುರ್ಘಟನೆ ನಡೆದಿದೆ. ಲಾಸಲ್‌ಗಾಂವ್‌ ರೈಲು ನಿಲ್ದಾಣದಲ್ಲಿ ಬೆಳಗ್ಗೆ 5.44ರ ಸಮಯದಲ್ಲಿ ಲೈಟ್‌ ಸರಿಪಡಿಸುವ ಎಂಜಿನ್‌ ಉಗ್ವ್​​ ನಿಂದ ಲಾಸ್​ಲ್​ ಗಾಂವ್​ ಬಳಿ ತಪ್ಪಾದ ಮಾರ್ಗದಲ್ಲಿ ಬಂದಿದೆ. ಈ ವೇಳೆ 230 ಕಿಮೀ ಉದ್ದದ ಮತ್ತು ಪೋಲ್ ಸಂಖ್ಯೆ 15 ರಿಂದ 17 ರ ನಡುವೆ ಟ್ರ್ಯಾಕ್ ನಿರ್ವಹಣೆ ಕಾರ್ಯ ನಡೆಯುತ್ತಿತ್ತು. ಈ ಹಿನ್ನೆಲೆ ನಾಲ್ವರು ಹಳಿ ನಿರ್ವಹಣಾ ಕಾರ್ಮಿಕರು ಈ ಕೆಲಸ ಮಾಡುತ್ತಿದ್ದಾಗ ರೈಲು ಮಾರ್ಗದ ನಿರ್ವಹಣಾ ಗೋಪುರಕ್ಕೆ ಡಿಕ್ಕಿ ಹೊಡೆದಿದೆ. ಈ ಅಪಘಾತದಲ್ಲಿ ನಾಲ್ವರು ಗಾಯಗೊಂಡು ಸಾವನ್ನಪ್ಪಿದ್ದಾರೆ.

ಸಾವನ್ನಪ್ಪಿದವರನ್ನು ಸಂತೋಷ್​ ಬಾಬುರಾವ್​ ಕೆದರೆ (38), ದಿನೇಶ್​​ ಸಹದಿ ದರದೆ (35), ಕೃಷ್ಣ ಆತ್ಮರಾಮ್​ ಅಹಿರೆ (40), ಸಂಶೋಷ್​ ಸುಖದೇವ್​ ಶಿರಸ್ಥ (38) ಎಂದು ಗುರುತಿಸಲಾಗಿದೆ

ಚೆನ್ನೈನಲ್ಲಿ ರಸ್ತೆ ಅಪಘಾತ; ನಾಲ್ವರಿಗೆ ಗಾಯ..ತಮಿಳುನಾಡಿನ ಚೆನ್ನೈನ ಮರೀನಾ ಬೀಚ್​ನಲ್ಲಿ ಶನಿವಾರ ರಾತ್ರಿ ನಡೆದ ಅಪಘಾತದಲ್ಲಿ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ವರದಿಯಾಗಿದೆ. ಘಟನೆ ತಿಳಿಯುತ್ತಿದ್ದಂತೆ ತಮಿಳುನಾಡು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಸುಬ್ರಹ್ಮಣಿಯನ್​ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದ್ದಾರೆ. ಚಿಕಿತ್ಸೆ ಬಳಿಕ ಮೂವರು ಆಸ್ಪತ್ರೆಯಿಂದ ಡಿಸ್ಚಾರ್ಜ್​ ಆಗಿದ್ದು, ಓರ್ವನಿಗೆ ಚಿಕಿತ್ಸೆ ಮುಂದುವರೆದಿದೆ.

ಕಾರನ್ನು ಓವರ್​ ಟೇಕ್​ ಮಾಡಲು ಹೋಗಿ ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಹೆಲ್ಮೆಟ್​​ ರಹಿತ ಪ್ರಯಾಣ; ಸವಾರ ಸಾವು..ಬೆಂಗಳೂರಿನ ಮಾಗಡಿ ರಸ್ತೆಯಲ್ಲಿ ಭಾನುವಾರ ನಡೆದ ಅಪಘಾತದಲ್ಲಿ 26 ವರ್ಷದ ಯುವಕ ಸಾವನ್ನಪ್ಪಿರುವ ಘಟನೆ ಸಂಭವಿಸಿದೆ. ಸಂಜಯ್​ ಕುಮಾರ್​ ಸಾವನ್ನಪ್ಪಿದ ವ್ಯಕ್ತಿ. ಮಧ್ಯರಾತ್ರಿ ಸುಮಾರು 1. 30ರ ಸುಮಾರಿಗೆ ಹೆಲ್ಮೆಟ್​ ಧರಿಸದೇ, ವೇಗವಾಗಿ ಪ್ರಯಾಣಿಸುತ್ತಿದ್ದ ಈತನ ಬೈಕ್​ ನಿಯಂತ್ರಣ ತಪ್ಪಿದೆ. ಪರಿಣಾಮವಾಗಿ ಬಿದ್ದ ಯುವಕನ ತಲೆ ಕಲ್ಲಿಗೆ ಹೊಡೆದಿದ್ದು, ಸಾವನ್ನಪ್ಪಿದ್ದಾನೆ. ತಕ್ಷಣಕ್ಕೆ ಯುವಕನನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಬಳಿಕ ನಿಮ್ಹಾನ್ಸ್​ಗೆ ಕರೆದೊಯ್ಯಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗಿಲ್ಲ ಎಂದು ತಿಳಿದು ಬಂದಿದೆ. ಇನ್ನು ಈ ಘಟನೆ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಯುವಕ ಕುಡಿದು ಗಾಡಿ ಚಲಾಯಿಸುತ್ತಿರಬಹುದು ಎಂಬ ಅನುಮಾನವನ್ನು ವ್ಯಕ್ತಪಡಿಸಿದ್ದಾರೆ.

ಗದಗದಲ್ಲಿ ಅಪಘಾತ: ಎಲ್​ಪಿಜಿ ಆಟೋ ಹಾಗೂ ಮಿನಿ ಬಸ್ ನಡುವೆ ಭೀಕರ ಅಪಘಾತ ಸಂಭವಿಸಿ ಸ್ಥಳದಲ್ಲೇ ಮೂವರು ಮೃತಪಟ್ಟಿದ್ದು ಹಲವರು ಗಾಯಗೊಂಡಿದ್ದಾರೆ. ಗದಗ ಜಿಲ್ಲೆಯ ಬೆಟಗೇರಿ ಸಮೀಪದ ಗಜೇಂದ್ರಗಡ ರಸ್ತೆಯ ಬಸವೇಶ್ವರ ದೇವಸ್ಥಾನದ ಬಳಿ ಈ ದುರ್ಘಟನೆ ನಡೆದಿದೆ. ಮೃತರನ್ನು ಬೆಟಗೇರಿಯ ನರಸಾಪೂರ ಆಶ್ರಯ ಕಾಲೋನಿಯ ಸಯ್ಯದ್ ಅಲಿ (20), ಪ್ರದೀಪ್ (40) ಹಾಗೂ ಬೆಟಗೇರಿ ನಿವಾಸಿ ಮಂಜುನಾಥ್ ಎಂದು ಗುರುತಿಸಲಾಗಿದೆ.

ಇದನ್ನೂ ಓದಿ: ಹಾಸ್ಟೆಲ್​ನಲ್ಲಿ ಆತ್ಮಹತ್ಯೆಗೆ ಶರಣಾದ ಬಾಂಬೆ ಐಐಟಿ ಕಾಲೇಜು ವಿದ್ಯಾರ್ಥಿ

ABOUT THE AUTHOR

...view details