ಕರ್ನಾಟಕ

karnataka

ETV Bharat / bharat

ಗಂಡನ ಮರ್ಮಾಂಗ ಕತ್ತರಿಸಿ ಕೊಂದ ಪತ್ನಿ - ಗಂಡನಿಂದ ಕಿರುಕುಳ

ಪ್ರತಿದಿನ ಮದ್ಯಪಾನ ಮಾಡಿ ಮನೆಗೆ ಬರುವ ಗಂಡ ಮನಸೋಇಚ್ಛೆ ಜಗಳವಾಡುತ್ತಿದ್ದನಂತೆ. ಎಷ್ಟೇ ಬುದ್ದಿ ಹೇಳಿದರೂ ಕೇಳುತ್ತಿರಲಿಲ್ಲ. ಇದರಿಂದ ಪತ್ನಿ ರೋಸಿ ಹೋಗಿದ್ದಳು. ಕೊನೆಗೊಂದಿನ ಆಕೆಯ ಆಕ್ರೋಶದ ಕಟ್ಟೆಯೊಡೆದಿದೆ. ತನ್ನ ಪತಿ ಅನ್ನೋದನ್ನೂ ನೋಡದೆ, ಆತನ ಮರ್ಮಾಂಗವನ್ನೇ ಕತ್ತರಿಸಿ ಹಾಕಿದಳು.

WOMEN ATTACKED HER HUSBAND
WOMEN ATTACKED HER HUSBAND

By

Published : Sep 22, 2021, 5:45 PM IST

Updated : Sep 22, 2021, 6:15 PM IST

ಮೆಹಬೂಬಾಬಾದ್‌(ತೆಲಂಗಾಣ):ಗಂಡ ನೀಡುತ್ತಿದ್ದ ಮಾನಸಿಕ, ದೈಹಿಕ ಕಿರುಕುಳ ತಾಳಲಾರದೆ ಹೆಂಡತಿಯೊಬ್ಬಳು ಆತನ ಮೇಲೆ ಹಲ್ಲೆಗೈದು, ಮರ್ಮಾಂಗ ಕತ್ತರಿಸಿರುವ ಘಟನೆ ತೆಲಂಗಾಣದ ಮೆಹಬೂಬಾಬಾದ್​​ನಲ್ಲಿ ಬೆಳಕಿಗೆ ಬಂದಿದೆ. ಗಂಭೀರವಾಗಿ ಗಾಯಗೊಂಡಿರುವ ವ್ಯಕ್ತಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಇದನ್ನೂ ಓದಿ:ಸ್ಲೀಪರ್ ಬಸ್​​ನಲ್ಲಿ 15ರ ಬಾಲೆಯ ಮೇಲೆ ಅತ್ಯಾಚಾರ; ಬಸ್ ನಿರ್ವಾಹಕನ ಸಹಾಯಕನಿಂದ ದುಷ್ಕೃತ್ಯ

ಮೆಹಬೂಬಾಬಾದ್​ನ ಮಾರಿಪದ ಮಂಡಲದ ವಂಕುತೊಡು ತಾಂಡಾದಲ್ಲಿ ಈ ಘಟನೆ ನಡೆದಿದೆ. ಕುಡಿತದ ದಾಸನಾಗಿದ್ದ ಗಂಡ ಪ್ರತಿದಿನ ಹೆಂಡತಿ ಜೊತೆ ಜಗಳವಾಡುತ್ತಿದ್ದ. ಇದರ ಜೊತೆಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ಪತ್ನಿ ಆರೋಪಿಸಿದ್ದಾಳೆ. ಗಂಡನ ನಿತ್ಯದ ವರ್ತನೆಯಿಂದ ತೀವ್ರವಾಗಿ ಮನನೊಂದ ಪತ್ನಿ ಆತ ನಿದ್ರಿಸುತ್ತಿದ್ದ ಸಂದರ್ಭದಲ್ಲಿ ಹಲ್ಲೆ ಮಾಡಿ ಮರ್ಮಾಂಗ ಕತ್ತರಿಸಿದ್ದಾಳೆ. ಇದರಿಂದ ತೀವ್ರ ರಕ್ತಸ್ರಾವವಾಗಿ, ವ್ಯಕ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾನೆ.

ಭೂಕಿಯಾ ಬಿಚ್ಯಾ(50) ಹಾಗು ಪ್ರಮೀಳಾ ಕಳೆದ ಕೆಲವು ವರ್ಷಗಳ ಹಿಂದೆ ಮದುವೆ ಮಾಡಿಕೊಂಡಿದ್ದರು. ಅವರಿಗೆ ಈಗಾಗಲೇ ಓರ್ವ ಮಗ ಹಾಗೂ ಮಗಳಿದ್ದಾರೆ. ಮದ್ಯಕ್ಕೆ ದಾಸನಾಗಿದ್ದ ಭೂಕಿಯಾ ಪ್ರತಿದಿನ ಪತ್ನಿ ಜೊತೆ ಜಗಳವಾಡುತ್ತಿದ್ದನಂತೆ. ಮಂಗಳವಾರ ರಾತ್ರಿ ಕೂಡ ಹೆಂಡತಿ ಜೊತೆ ಜಗಳವಾಗಿದೆ. ಈ ವೇಳೆ ತಾಳ್ಮೆ ಕಳೆದುಕೊಂಡಿರುವ ಪ್ರಮೀಳಾ ಗಂಡನ ಮೇಲೆ ಹಲ್ಲೆ ಮಾಡಿ ಖಾಸಗಿ ಭಾಗವನ್ನೇ ಕತ್ತರಿಸಿದ್ದಾಳೆ.

ಘಟನಾ ಸ್ಥಳಕ್ಕೆ ಭೇಟಿ ನೀಡಿರುವ ಪೊಲೀಸರು ವಿಚಾರಣೆ ನಡೆಸಿ, ಪ್ರಕರಣ ದಾಖಲಿಸಿದ್ದಾರೆ.

Last Updated : Sep 22, 2021, 6:15 PM IST

ABOUT THE AUTHOR

...view details