ಮೇದಕ್ (ತೆಲಂಗಾಣ):ಅಂತಾರಾಷ್ಟ್ರೀಯ ಮಹಿಳಾ ದಿನವಾದ ನಿನ್ನೆ ತೆಲಂಗಾಣದ ಮೇದಕ್ ಜಿಲ್ಲೆಯಲ್ಲಿ ಮಹಿಳೆಯೊಬ್ಬರ ಮೇಲೆ ಪೆಟ್ರೋಲ್ ಸುರಿದು ಬೆಂಕಿ ಹಚ್ಚಿದ ಘಟನೆ ನಡೆದಿತ್ತು.
ಮೇದಕ್ ಜಿಲ್ಲೆಯ ಅಲ್ಲದುರ್ಗಂ ಮಂಡಲದ ಗಾಡಿಪೆದ್ದಾಪುರ ಗ್ರಾಮದ ಮಹಿಳೆಗೆ ಬೆಂಕಿ ಹಚ್ಚಿ ಆರೋಪಿ ಪರಾರಿಯಾಗಿದ್ದನು. ತನಿಖೆ ಆರಂಭಿಸಿದ ಪೊಲೀಸರು ಜಾನುವಾರು ವ್ಯಾಪಾರದ ದಲ್ಲಾಳಿ ಸಾದತ್ ಎಂಬಾತ ಕೃತ್ಯ ಎಸಗಿದ್ದಾನೆಂಬುದನ್ನು ಪತ್ತೆ ಮಾಡಿ, ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.