ಮುಂಬೈ (ಮಹಾರಾಷ್ಟ್ರ) :ಹಿಜಾಬ್ ಧರಿಸಿ ಬಂದ ಯುವತಿಗೆ ಪ್ರವೇಶ ನಿರಾಕರಿಸಿದ ರೆಸ್ಟೋರೆಂಟ್ ಸಿಬ್ಬಂದಿಯನ್ನ ಮತ್ತೊಬ್ಬ ಯುವತಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿರುವ ಘಟನೆ ಮಹಾರಾಷ್ಟ್ರದ ಮುಂಬೈನಲ್ಲಿ ನಡೆದಿದೆ.
ಮುಂಬೈನ Tap Resto Bar ಹೆಸರಿನ ರೆಸ್ಟೋರೆಂಟ್ನಲ್ಲಿ ಈ ಘಟನೆಯ ದೃಶ್ಯ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ. ಎರಡು ನಿಮಿಷಗಳ ಈ ವಿಡಿಯೋ ಕ್ಲಿಪ್ನಲ್ಲಿ ಹಿಜಾಬ್ ಧರಿಸಿ ಬಂದ ತನ್ನ ಸ್ನೇಹಿತೆಗೆ ಯಾಕೆ ಪ್ರವೇಶ ನೀಡುತ್ತಿಲ್ಲ ಎಂದು ಯುವತಿಯೊಬ್ಬರು ರೆಸ್ಟೋರೆಂಟ್ ಸಿಬ್ಬಂದಿಯನ್ನ ಪ್ರಶ್ನಿಸಿದ್ದಾರೆ.
ಅದಕ್ಕೆ ಆತ "ನಾವು ಸೀರೆ, ಹಿಜಾಬ್ ಧರಿಸಿ ಫುಲ್ ಕವರ್ ಆಗಿ ಬಂದ ಮಹಿಳೆಯರನ್ನು ನಮ್ಮ ರೆಸ್ಟೋರೆಂಟ್ನೊಳಗೆ ಬಿಟ್ಟು ಕೊಳ್ಳುವುದಿಲ್ಲ. ಆಕೆಗೆ ಬೇಕಾದರೆ ವಾಷ್ರೂಂಗೆ ಹೋಗಿ ಹಿಜಾಬ್ ತೆಗೆದು ಬರಲು ಹೇಳಿ" ಎಂದಿದ್ದಾನೆ.
ರೆಸ್ಟೋರೆಂಟ್ ಸಿಬ್ಬಂದಿಯನ್ನ ತರಾಟೆಗೆ ತೆಗೆದುಕೊಂಡ ಯುವತಿ.. ಈ ವಿಡಿಯೋವನ್ನು ಹಿಜಾಬ್ ಧರಿಸಿ ಬಂದಿದ್ದ ಯುವತಿ ಗೆಳೆಯ ತನ್ನ ಇನ್ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡು, ಜಾತ್ಯಾತೀತ ಸಮಾಜದಲ್ಲಿ ಇಂತಹ ಅವಿವೇಕಿ ನಿರ್ಬಂಧಗಳು ಇರುವುದು ನನಗೆ ಆಶ್ಚರ್ಯವಾಗಿದೆ ಎಂದು ಬರೆದು ಆಕ್ರೋಶ ಹೊರ ಹಾಕಿದ್ದಾನೆ. ಇದನ್ನು ಕಂಡ ನೆಟ್ಟಿಗರು ರೆಸ್ಟೋರೆಂಟ್ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ.