ಥಾಣೆ(ಮಹಾರಾಷ್ಟ್ರ): ಮುನ್ಸಿಪಾಲ್ ಕಾರ್ಪೋರೇಷನ್ ವಿರುದ್ಧ ಇದೀಗ ಮತ್ತೊಮ್ಮೆ ಆಕ್ರೋಶ ವ್ಯಕ್ತವಾಗಿದ್ದು, ಓರ್ವ ಮಹಿಳೆಗೆ ಒಂದೇ ದಿನ ಮೂರು ಸಲ ವ್ಯಾಕ್ಸಿನ್ ನೀಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.
ಥಾಣೆ ಮಹಾನಗರ ಪಾಲಿಕೆಯ ಆನಂದನಗರ ವ್ಯಾಕ್ಸಿನೇಷನ್ ಕೇಂದ್ರದಲ್ಲಿ ಜೂನ್ 25ರಂದು ಈ ಘಟನೆ ನಡೆದಿದೆ. ಇದೇ ಮೊದಲ ಬಾರಿಗೆ ಇಂತಹದೊಂದು ಘಟನೆ ನಡೆದಿದೆ ಎನ್ನಲಾಗಿದೆ. ತೆರಿಗೆ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದ ವೈಭವ್ ಸಾಲ್ವೆ ಅವರ ಪತ್ನಿಗೆ ಜೂನ್ 25ರಂದು ಮೊದಲ ಕೋವಿಡ್ ವ್ಯಾಕ್ಸಿನ್ ನೀಡಲಾಗಿದೆ. ಇದರ ಬೆನ್ನಲ್ಲೇ ಅದೇ ದಿನ ಲಸಿಕೆಯ ಎರಡನೇ ಹಾಗೂ ಮತ್ತೊಂದು ಡೋಸ್ ನೀಡಲಾಗಿದೆ.
ಇದರ ಬಗ್ಗೆ ವೈದ್ಯರಿಗೆ ಮಾಹಿತಿ ಗೊತ್ತಾಗುತ್ತಿದ್ದಂತೆ ಮಹಿಳೆ ಮೇಲೆ ಕೆಲ ಗಂಟೆಗಳ ಕಾಲ ನಿಗಾ ಇಟ್ಟಿದ್ದಾರೆ. ಜತೆಗೆ ವಿಷಯ ಮೆರೆಮಾಚಲು ಮಹಿಳೆಯ ಗಂಡನ ಮೇಲೆ ಒತ್ತಡ ಹೇರಿದ್ದು, ಹೊರಗಡೆ ಮಾಹಿತಿ ಹಂಚಿಕೊಳ್ಳದಂತೆ ತಿಳಿಸಿದ್ದಾರೆ.
ಇದನ್ನೂ ಓದಿರಿ: ಸಂಬಂಧದಲ್ಲಿ ಚಿಕ್ಕಮ್ಮ: ಆದ್ರೂ ಪ್ರೀತಿಸಿ ಮದುವೆಯಾದ ಯುವಕ!
ಕೆಲಸ ಕಳೆದುಕೊಳ್ಳುವ ಭೀತಿಯಿಂದ ವಿಷಯ ಮುಚ್ಚಿಟ್ಟಿದ್ದಾರೆ. ಆದರೆ, ಸ್ಥಳೀಯ ಬಿಜೆಪಿ ಕಾರ್ಪೋರೇಟರ್ಗೆ ಮಾಹಿತಿ ಗೊತ್ತಾಗಿದೆ. ಇದೀಗ ಇದರ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಪುರಸಭೆ ಆಯುಕ್ತರು ತಿಳಿಸಿದ್ದಾರೆ. ಇದರ ಬಗ್ಗೆ ವೈದ್ಯಕೀಯ ಅಧಿಕಾರಿಗೆ ಕೇಳಿದಾಗ ಅಂತಹ ಯಾವುದೇ ಘಟನೆ ನಡೆದಿಲ್ಲ ಎಂದಿದ್ದಾರೆ.