ಕರ್ನಾಟಕ

karnataka

ETV Bharat / bharat

ಸಿಎಂ ಜಗನ್​ ಕಚೇರಿ ಬಳಿ ಮಹಿಳೆ ಮೇಲೆ ಅತ್ಯಾಚಾರ... ಆರೋಪಿ ಬಂಧನ - ವಿಜಯವಾಡದ ರೈಲ್ವೇ ಟ್ರ್ಯಾಕ್​

ಜುಲೈ 29ರ ರಾತ್ರಿ ಅತ್ಯಾಚಾರವೆಸಗಿರುವ ಕೃಷ್ಣ ಕಿಶೋರ್​ ವಿಜಯವಾಡದ ರೈಲ್ವೇ ಟ್ರ್ಯಾಕ್​ ಮೇಲೆ ಸಿಕ್ಕಿಬಿದ್ದಿದ್ದು, ಈ ಕೃತ್ಯವೆಸಗುವುದಕ್ಕೂ ಮುಂಚಿತವಾಗಿ ಆರೋಪಿ ಓರ್ವ ವ್ಯಕ್ತಿಯ ಕೊಲೆ ಮಾಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

rape
rape

By

Published : Aug 7, 2021, 10:00 PM IST

ತಾಡೆಪಲ್ಲಿ(ಆಂಧ್ರಪ್ರದೇಶ): ಮುಖ್ಯಮಂತ್ರಿ ಜಗನ್​ ಮೋಹನ್ ರೆಡ್ಡಿ ಕ್ಯಾಂಪ್ ಆಫೀಸ್​ ಬಳಿ ಮಹಿಳೆ ಮೇಲೆ ಅತ್ಯಾಚಾರವೆಸಗಿರುವ ಘಟನೆ ನಡೆದಿದ್ದು, ಆರೋಪಿಯ ಬಂಧನ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಜುಲೈ 29ರಂದು ಈ ಘಟನೆ ನಡೆದಿದ್ದು, ಕೃಷ್ಣಾ ಕಿಶೋರ್ ಎಂಬ ಆರೋಪಿ ಈ ಕೃತ್ಯವೆಸಗಿರುವುದಾಗಿ ತಿಳಿದು ಬಂದಿದೆ.

ಜುಲೈ 29ರ ರಾತ್ರಿ ಅತ್ಯಾಚಾರವೆಸಗಿರುವ ಕೃಷ್ಣ ಕಿಶೋರ್​ ವಿಜಯವಾಡದ ರೈಲ್ವೇ ಟ್ರ್ಯಾಕ್​ ಮೇಲೆ ಸಿಕ್ಕಿಬಿದ್ದಿದ್ದು, ಈ ಕೃತ್ಯವೆಸಗುವುದಕ್ಕೂ ಮುಂಚಿತವಾಗಿ ಆರೋಪಿ ಓರ್ವ ವ್ಯಕ್ತಿಯ ಕೊಲೆ ಮಾಡಿದ್ದಾನೆಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿರಿ: ಅಧಿಕಾರ ಇರಲಿ ಅಥವಾ ಬಿಡಲಿ, ಪಕ್ಷ ಸಂಘಟನೆಯೇ ನನ್ನ ಗುರಿ : ಲಕ್ಷ್ಮಣ್​ ಸವದಿ

ತಾಮ್ರದ ತಂತಿ ಬಳಕೆ ಮಾಡಿ ಆತ ವ್ಯಕ್ತಿಯ ಕೊಲೆ ಮಾಡಿದ್ದು, ಇದನ್ನ ಗ್ರಾಮಸ್ಥರು ಕಣ್ಣಾರೆ ನೋಡಿದ್ದಾರೆ ಎನ್ನಲಾಗಿದೆ. ಇದಾದ ಬಳಿಕ ಮೃತದೇಹವನ್ನ ನದಿಗೆ ಎಸೆದಿದ್ದನು ಎಂದು ತಿಳಿದು ಬಂದಿದೆ. ಆರೋಪಿ ಮೇಲೆ ಈಗಾಗಲೇ ಕೆಲವೊಂದು ಕಳ್ಳತನ ಹಾಗೂ ಹಲ್ಲೆ ನಡೆಸಿರುವ ಅಪರಾಧಗಳಿವೆ ಎಂದು ಪೊಲೀಸರು ತಿಳಿಸಿದ್ದು, ಘಟನೆಯಲ್ಲಿ ಭಾಗಿಯಾಗಿರುವ ಮತ್ತೋರ್ವ ಆರೋಪಿ ತಲೆಮರೆಸಿಕೊಂಡಿದ್ದಾನೆ.

ABOUT THE AUTHOR

...view details