ರಾಜಕೋಟ್( ಗುಜರಾತ್): ತಮ್ಮ ಬದುಕಿನ ಭಾಗವಾಗಿದ್ದ ಜನರ ನೆನಪನ್ನು ಚಿರಸ್ಥಾಯಿಯಾಗಿಡುವ ಕೆಲಸವನ್ನು ಅನೇಕರು ಮಾಡುತ್ತಾರೆ. ಆದರೆ, ಇಲ್ಲೊಬ್ಬ ಮಹಿಳೆ ತನ್ನ ಗಂಡನ ನೆನಪು ಅಮರಾವಾಗಿಸುವ ಜೊತೆಗೆ ಬೇರೆಯವರ ಸಂಕಷ್ಟ ಕಾಲದಲ್ಲಿ ಮಿಡಿಯುವ ಮಾತೃ ಹೃದಯದಾತೆ ಆಗಿದ್ದಾರೆ.
ರಾಜ್ಕೋಟ್ನ ಸಂಗೀತ ಬೆನ್ ಕಳೆದ ಒಂದೂವರೆ ವರ್ಷದ ಹಿಂದೆ ಹರೇಶ್ಬಾಯ್ ಮನ್ಸುಖ್ಲಾಲ್ ಶಾ ಅವರನ್ನು ಕಳೆದು ಕೊಂಡಿದ್ದರು. ಪತಿಯ ನೆನಪಿನಲ್ಲಿ ಇತರರಿಗೆ ನೆರವಾಗುವ ಉದ್ದೇಶದಿಂದಾಗಿ ಸಂಗೀತಬೆನ್ ರಿಯಾಯ್ತಿ ದರದಲ್ಲಿ ಅಂಬ್ಯುಲೆನ್ಸ್ ಸೇವೆ ಆರಂಭಿಸಿದ್ದಾರೆ. ಇದರಿಂದ ಅನೇಕರಿಗೆ ಲಾಭವಾಗಿದೆ. ಈ ಆಂಬ್ಯುಲೆನ್ಸ್ ರಾಜ್ಕೋಟ್, ಮೊರ್ಬಿ, ನೇಪಾಳದಲ್ಲೂ ಸೇವೆ ನೀಡುತ್ತಿದೆ.
ಈ ಆಂಬ್ಯುಲೆನ್ಸ್ ಸೇವೆಯಿಂದಾಗಿ ಅನೇಕ ಮಂದಿ ಪ್ರಯೋಜನ ಪಡೆದಿದ್ದು, ಸಂಕಷ್ಟ ಸಮಯದಲ್ಲಿ ಕಡಿಮೆ ವೆಚ್ಚದಲ್ಲಿ ನೂರಾರು ರೋಗಿಗಳು ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಕೋಟ್ ನಿವಾಸಿಯಾಗಿರುವ ಸಂಗೀತ ಬೆನ್ ಮುಂಬೈನ ಆಲ್ಫಾ ಫೌಂಡೇಶನ್ ಸದಸ್ಯರು ಆಗಿದ್ದಾರೆ.
ರಿಯಾಯಿತಿ ದರದ ಆಂಬ್ಯುಲೆನ್ಸ್ ಸೇವೆ ಹೊರತಾಗಿ ಅವರು ಅವಶ್ಯಕತೆ ಹೊಂದಿರುವ ಮಕ್ಕಳಿಗೆ ಗ್ಲೋಕೋಸ್ ಬಾಟಲ್ಗಳನ್ನು ವಿತರಣೆ ಮಾಡುತ್ತಿದ್ದಾರೆ. ಜೊತೆಗೆ ಮುಂಬೈನ ಸ್ಲಂಗಳಿಗೆ ಭೇಟಿ ನೀಡಿ ಅಲ್ಲಿ ಸಾಮಾಜಿಕ ಕಾರ್ಯ ನಡೆಸುವ ಜೊತೆಗೆ ಆಹಾರವನ್ನು ವಿತರಣೆ ಮಾಡುವ ಕಾರ್ಯ ನಡೆಸಿದ್ದಾರೆ.
ಇದನ್ನೂ ಓದಿ:8 ತಿಂಗಳಲ್ಲಿ 46 ಕೆಜಿ ತೂಕ ಇಳಿಸಿಕೊಂಡ ಪೊಲೀಸ್ ಅಧಿಕಾರಿ.. ದೃಢ ಸಂಕಲ್ಪಕ್ಕೆ ಸಿಕ್ಕಿತು ಪ್ರಮಾಣಪತ್ರ