ಹೈದರಾಬಾದ್: ದಿನವಿಡೀ ಚೈತನ್ಯದಿಂದ ಇರಬೇಕಾದರೆ ವ್ಯಾಯಾಮ ಮಾಡಬೇಕು. ದಿನದಲ್ಲಿ ಸ್ವಲ್ಪ ಹೊತ್ತು ಸೈಕಲ್ ತುಳಿಯುವುದು ಆರೋಗ್ಯಕ್ಕೆ ಒಳ್ಳೆಯದು. ಅದಕ್ಕಾಗಿಯೇ ಹೈದರಾಬಾದ್, ವಾರಂಗಲ್‌ನಂತಹ ನಗರಗಳಲ್ಲಿ ಸೈಕಲ್ ಸವಾರಿಯ ಅರಿವು ಮೂಡಿಸಲು ಹಲವು ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ. ಆದರೆ ಅದರಲ್ಲಿ ಸೈಕಲ್ ಸವಾರಿಯನ್ನು ಫಾಲೋ ಮಾಡುವವರು ಹೆಚ್ಚಿನವರು ಯುವಕರೇ ಆಗಿದ್ದಾರೆ. ಆದರೆ ಇಲ್ಲೊಬ್ಬ 60 ವರ್ಷದ ಮಹಿಳೆ ಎಲ್ಲಿ ಹೋಗಬೇಕಾದರೂ ತನ್ನ ಸಾರಿಗೆಯಾಗಿ ಸೈಕಲ್ ಅನ್ನೇ ಬಳಸಿ, ಯುವಕರಿಗೆ ಮಾತ್ರವಲ್ಲ, ಹಿರಿಯರಿಗೂ ಮಾದರಿಯಾಗಿದ್ದಾಳೆ.
ಹನುಮಕೊಂಡದ ಹೊಸ ಸಾಯನಪೇಟೆಯ ಶಕುಂತಲಾ ಸೈಕ್ಲಿಂಗ್ ಅನ್ನು ತುಂಬಾ ಇಷ್ಟ ಪಡುತ್ತಾರೆ. ಬೈಸಿಕಲ್ ಓಡಿಸಲು ಕಲಿತು ಈಗ ಎಲ್ಲಿಗೆ ಹೋಗಬೇಕಾದರೂ ಸೈಕಲ್‌ನಲ್ಲೇ ಹೋಗಿ ಬರುತ್ತಾರೆ. ವಯಸ್ಸು 60 ಆದರೂ ಮೈಲುಗಟ್ಟಲೆ ಸೈಕಲ್ ತುಳಿದು ಸಾಗುತ್ತಾರೆ. ಬಿಸಿಲಾದರೂ, ದಣಿಯದೇ ವಾರಂಗಲ್, ಕಾಜಿಪೇಟ್, ಹನುಮಕೊಂಡನಂತಹ ಸ್ಥಳಗಳಿಗೆ ಸೈಕಲ್‌ನಲ್ಲೇ ಪ್ರಯಾಣಿಸುತ್ತಾರೆ.
ಶಕುಂತಲಾ ಅವರದು ತೀರಾ ಬಡತನದ ಕುಟುಂಬ, ಪತಿ ಸಣ್ಣ ಸಂಸ್ಥೆಯಲ್ಲಿ ಉದ್ಯೋಗಿಯಾಗಿದ್ದಾರೆ. ಈ ದಂಪತಿ ತಮ್ಮ ಇಬ್ಬರು ಹೆಣ್ಣುಮಕ್ಕಳನ್ನು ಮದುವೆ ಮಾಡಿಕೊಟ್ಟಿದ್ದಾರೆ. ಕುಟುಂಬ ನಿರ್ವಹಣೆಗೆ ತನ್ನ ಪತಿಗೆ ಬೆನ್ನೆಲುಬಾಗಿ ನಿಂತಿದ್ದಾರೆ ಶಕುಂತಲಾ. ಮದುವೆ ಸಮಾರಂಭಗಳಿಗೆ ಬೇಕಾಗುವ ಅಡುಗೆ, ತಿನಿಸುಗಳನ್ನು ಶಕುಂತಳಾ ಮಾಡುತ್ತಾರೆ. ತನ್ನ 60ರ ಹರೆಯದಲ್ಲೂ ಎಲ್ಲಾ ರೀತಿಯ ಮನೆಕೆಲಸಗಳನ್ನು ಮಾಡುವ ಆರೋಗ್ಯವನ್ನು ಸೈಕಲ್ ತುಳಿತ ನೀಡಿದೆ.