ಕರ್ನಾಟಕ

karnataka

ETV Bharat / bharat

ಎರಡು ವರ್ಷಗಳಿಂದ ಹಾಳಾಗಿದ್ದ ಕಾರಿನಲ್ಲೇ ಯುವತಿ ವಾಸ.. ಕಾರಣ ಇಲ್ಲದಿಲ್ಲ..

ಕೌನ್ಸೆಲಿಂಗ್ ನೀಡಿದ ಪೊಲೀಸರು ಕಾರಿನಲ್ಲಿ ಉಳಿದುಕೊಳ್ಳುವುದು ಒಳ್ಳೆಯದಲ್ಲ ಎಂದು ಹೇಳಿ ಸ್ಟೇಟ್ ಹೋಮ್‌ಗೆ ತೆರಳುವಂತೆ ಹೇಳಿದರೂ ಆಕೆ ಪೊಲೀಸರ ಮಾತಿಗೆ ಒಪ್ಪಲಿಲ್ಲ. ಮತ್ತೊಮ್ಮೆ ಕೌನ್ಸೆಲಿಂಗ್ ಮಾಡಲಾಗುವುದು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ..

A Woman had been living in A Car for two years in hyderabad
ಎರಡು ವರ್ಷಗಳಿಂದ ಹಾಳಾಗಿದ್ದ ಕಾರಿನಲ್ಲೇ ಯುವತಿ ವಾಸ..!ಕಾರಣ ಇದು..

By

Published : Mar 30, 2022, 12:24 PM IST

ಹೈದರಾಬಾದ್‌ :ಕಳೆದ ಎರಡು ವರ್ಷಗಳಿಂದ ಯುವತಿಯೊಬ್ಬಳು ತಮ್ಮ ಹಾಳಾದ ಕಾರಿನಲ್ಲೇ ವಾಸ ಮಾಡುತ್ತಿರುವ ಘಟನೆ ಹೈದರಾಬಾದ್‌ನ ಎಸ್‌ಆರ್‌ನಗರ ಪೊಲೀಸ್ ಠಾಣಾ ವ್ಯಾಪ್ತಿಯ ಮಧುರಾನಗರದಲ್ಲಿ ಬೆಳಕಿಗೆ ಬಂದಿದೆ. ಸ್ಥಳೀಯರು ನೀಡಿದ ಮಾಹಿತಿ ಮೇರೆಗೆ ಪೊಲೀಸರು ಸ್ಥಳಕ್ಕೆ ಬಂದು ಪರಿಶೀಲಿಸಿದಾಗ ಪ್ರಕರಣ ಗೊತ್ತಾಗಿದೆ. ವಿಶೇಷ ಅಂದರೆ ಈ ಯುವತಿಯ ಹೆಸರಿನಲ್ಲೇ ಕಾರು ನೋಂದಣಿಕೆಯಾಗಿದ್ದು, 30 ವರ್ಷದ ಗುರ್ರಂ ಅನಿತಾ ಎಂಬುವರೇ ಮಾರುತಿ ಓಮ್ನಿ (ಎಪಿ31ಕ್ಯೂ-6434) ಕಾರಿನಲ್ಲಿ ವಾಸ ಮಾಡುತ್ತಿರುವ ಯುವತಿ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಕಾರಿನಲ್ಲೇ ವಾಸಿಸಲು ಕಾರಣ ಇದು! :ಈಕೆಯ ಕುರಿತು ಹೆಚ್ಚಿನ ಮಾಹಿತಿ ಸಂಗ್ರಹಕ್ಕೆ ಪೊಲೀಸರು ಮುಂದಾಗಿದ್ದಾರೆ. ಅನಿತಾ ರಾಜದೂತ್ ಹಾಸ್ಟೆಲ್‌ನಲ್ಲಿ ಇದ್ದರು. ಎರಡು ವರ್ಷಗಳ ಹಿಂದೆ ಶುಲ್ಕ ಪಾವತಿಸದ ಕಾರಣ ಹಾಸ್ಟೆಲ್ ಮ್ಯಾನೇಜರ್‌ ಈಕೆಯನ್ನು ಹಾಸ್ಟೆಲ್‌ನಿಂದ ಹೊರ ಕಳುಹಿಸಿದ್ದಾರೆ. ಇದರಿಂದಾಗಿ ತನ್ನ ವಸ್ತುಗಳನ್ನು ತೆಗೆದುಕೊಂಡು ಬಂದ ಅನಿತಾ ಕಾರಿನಲ್ಲಿ ವಾಸಿಸುತ್ತಿದ್ದಾಳೆ.

ಸ್ಥಳೀಯರು ಈಕೆಗೆ ಅನ್ನ ನೀಡುತ್ತಿದ್ದಾರೆ. ಕಾರಿನಲ್ಲೇ ಮಲಗುವ ಮೂಲಕ ಎರಡು ವರ್ಷಗಳನ್ನು ಕಳೆದಿದ್ದಾಳೆ. ಸದ್ಯ ರಸ್ತೆಯಲ್ಲಿ ಕಾರು ನಿಲ್ಲಿಸಿದ್ದಕ್ಕೆ ಸಂಚಾರ ಪೊಲೀಸರು ಆಕೆಗೆ ಎರಡು ವರ್ಷ ದಂಡ ವಿಧಿಸಿದ್ದಾರೆ. ಕೌನ್ಸೆಲಿಂಗ್ ನೀಡಿದ ಪೊಲೀಸರು ಕಾರಿನಲ್ಲಿ ಉಳಿದುಕೊಳ್ಳುವುದು ಒಳ್ಳೆಯದಲ್ಲ ಎಂದು ಹೇಳಿ ಸ್ಟೇಟ್ ಹೋಮ್‌ಗೆ ತೆರಳುವಂತೆ ಹೇಳಿದರೂ ಆಕೆ ಪೊಲೀಸರ ಮಾತಿಗೆ ಒಪ್ಪಲಿಲ್ಲ. ಮತ್ತೊಮ್ಮೆ ಕೌನ್ಸೆಲಿಂಗ್ ಮಾಡಲಾಗುವುದು ಎಂದು ಇನ್ಸ್‌ಪೆಕ್ಟರ್ ಹೇಳಿದ್ದಾರೆ.

ಇದನ್ನೂ ಓದಿ:ಉಕ್ರೇನ್‌ನಿಂದ ಬಂದ ವೈದ್ಯಕೀಯ ವಿದ್ಯಾರ್ಥಿಗಳಿಗಾಗಿ ಸೀಟು ಹೆಚ್ಚಿಸಿ ; ಪ್ರಧಾನಿ ಮೋದಿಗೆ ತೆಲಂಗಾಣ ಸಿಎಂ ಕೆಸಿಆರ್‌ ಪತ್ರ

For All Latest Updates

TAGGED:

ABOUT THE AUTHOR

...view details