ಕರ್ನಾಟಕ

karnataka

ETV Bharat / bharat

ಸಂತಾನಹರಣ ಶಸ್ತ್ರ ಚಿಕಿತ್ಸೆ ಬಳಿಕವೂ ಮೂರು ಬಾರಿ ಗರ್ಭಿಣಿಯಾದ ಮಹಿಳೆ! - ಸಂತಾನಹರಣ ಶಸ್ತ್ರಚಿಕಿತ್ಸೆ

ಬರೋಬ್ಬರಿ ಮೂರು ಬಾರಿ ಸಂತಾನಹರಣ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದರೂ ಮಹಿಳೆ ಮತ್ತೆ ಗರ್ಭಿಣಿಯಾಗಿರುವ ವಿಚಿತ್ರ ಘಟನೆ ಬಿಹಾರದಲ್ಲಿ ಬೆಳಕಿಗೆ ಬಂದಿದೆ.

women gets pregnant despite of  family planning procedures
women gets pregnant despite of family planning procedures

By ETV Bharat Karnataka Team

Published : Dec 12, 2023, 10:56 AM IST

ಪಾಟ್ನಾ (ಬಿಹಾರ): ಕುಟುಂಬದ ಸ್ಥಿರೀಕರಣ ಮತ್ತು ತಾಯಿ, ಮಕ್ಕಳ ಆರೋಗ್ಯ, ಮರಣ ಸಂಖ್ಯೆಯನ್ನು ತಡೆಯುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರವೂ ಕುಟುಂಬ ಯೋಜನೆಯನ್ನು ಜಾರಿಗೆ ತಂದಿದೆ. ಈ ಯೋಜನೆಯಡಿ ಶಸ್ತ್ರಚಿಕಿತ್ಸೆಗೆ ಒಳಗಾದ ಮಹಿಳೆಯೊಬ್ಬರು ಮತ್ತೆ ಮೂರನೇ ಬಾರಿ ಗರ್ಭಿಣಿಯಾಗಿರುವ ಘಟನೆ ಬಿಹಾರದ ಮುಜಾಫರ್​ಪುರ​ ನಗರದಲ್ಲಿ ನಡೆದಿದೆ.

ಮುಜಾಫರ್​ಪುರ​ ಜಿಲ್ಲೆಯ ಗಯ್ಗಾಟ್​ನ ನಾಲ್ಕು ಮಕ್ಕಳ ಮಹಿಳೆಯೊಬ್ಬರು 2015ರಲ್ಲಿ ಸಂತಾನ ಹರಣ ಶಸ್ತ್ರ ಚಿಕಿತ್ಸೆಗೆ ಒಳಗಾಗಿದ್ದಳು. ಚೆಕ್​-ಅಪ್​ ಕ್ಯಾಪ್​ನಲ್ಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದ ಮಹಿಳೆ 2018ರಲ್ಲಿ ಮತ್ತೆ ಗರ್ಭಿಣಿಯಾದಳು. ಈ ವಿಚಾರವನ್ನು ಆಕೆಯ ಗಂಡ ಸ್ಥಳೀಯ ಸಿವಿಲ್​ ಸರ್ಜನ್​ಗೆ ಮಾಹಿತಿ ನೀಡಿದ್ದರು. ಅಧಿಕಾರಿಗಳು ಮತ್ತೊಮ್ಮೆ ಆಕೆಯ ವೈದ್ಯಕೀಯ ತಪಾಸಣೆ ನಡೆಸುವ ಭರವಸೆ ನೀಡಿದ್ದರು. ಈ ಸಂದರ್ಭದಲ್ಲಿ ಆಕೆ ಗಂಡು ಮಗುವಿಗೆ ಜನ್ಮ ನೀಡಿದ್ದಳು.

ಇದಾದ ಎರಡು ವರ್ಷದ ಬಳಿಕ ಅಂದರೆ 2020ರಲ್ಲಿ ಮತ್ತೊಮ್ಮೆ ಈಕೆ ಗರ್ಭಿಣಿಯಾಗಿದ್ದು, ಹೆಣ್ಣು ಮಗು ಜನಿಸಿತ್ತು. ಈ ಸಂದರ್ಭದಲ್ಲಿ ಮತ್ತೊಮ್ಮೆ ಸಿವಿಲ್​ ಸರ್ಜನ್​ಗೆ ದೂರು ನೀಡಿದಾಗ ಅವರು 6000 ರೂ. ಹಣವನ್ನು ಪರಿಹಾರವಾಗಿ ನೀಡಿದ್ದರಂತೆ.

2023ರಲ್ಲಿ ಶಸ್ತ್ರಚಿಕಿತ್ಸೆ ಬಳಿಕ ಮೂರನೇ ಬಾರಿಗೆ ಮತ್ತೆ ಗರ್ಭಿಣಿಯಾಗಿದ್ದು, ಆಕೆಯ ಗಂಡ ಸಿವಿಲ್​ ಸರ್ಜನ್​ಗೆ ದೂರು ನೀಡಿದ್ದಾರೆ. ಆದರೆ, ಈ ಕುರಿತು ಸ್ಪಷ್ಟನೆ ನೀಡಿರುವ ಜಿಲ್ಲಾ ಆರೋಗ್ಯಾಧಿಕಾರಿಗಳು ತಮ್ಮ ಅವಧಿಯಲ್ಲಿ ಈ ಕುಟುಂಬ ಯೋಜನೆ ಸರ್ಜರಿಗಳು ನಡೆದಿಲ್ಲ. ಈ ಹಿನ್ನೆಲೆ ಈ ಕುರಿತು ತಾವು ಏನನ್ನು ಹೇಳಲು ಸಾಧ್ಯವಿಲ್ಲ ಎಂದಿದ್ದಾರೆ. ಆದಾಗ್ಯೂ ಸಿವಿಲ್​ ಸರ್ಜನ್​ ಈ ವಿಚಾರದಲ್ಲಿ ತನಿಖೆ ಮಾಡುವುದಾಗಿ ಭರವಸೆ ನೀಡಿದ್ದಾರೆ. ಸದ್ಯ ಮಹಿಳೆ ಇದೀಗ ಏಳನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ.

ಪ್ರತ್ಯೇಕ ಪ್ರಕರಣ- ಕಳೆದೆರಡು ವರ್ಷದ ಹಿಂದೆ ಕೂಡ ಇದೇ ರೀತಿಯ ಪ್ರಕರಣ ಮುಜಾಫರ್​ಪುರದಲ್ಲಿ ನಡೆದಿತ್ತು. ಇಲ್ಲಿನ ಮೊಟಿಪುರ್​ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ 2019ರಲ್ಲಿ ಸಂತಾನಹರಣ ಶಸ್ತ್ರ ಚಿಕಿತ್ಸೆಗೆ ಒಳಗಾದ ಮಹಿಳೆ 2021ರಲ್ಲಿ ಗರ್ಭಿಣಿಯಾಗಿದ್ದರು. ಈ ವೇಳೆ ಮಹಿಳೆ ಸರ್ಕಾರದ ವಿರುದ್ಧ ಜಿಲ್ಲಾ ಗ್ರಾಹಕ ವೇದಿಕೆ ಮೆಟ್ಟಿಲು ಹತ್ತಿದ್ದರು. ತಾವು ಕಷ್ಟದಲ್ಲಿದ್ದು, ಈ ಮಗುವನ್ನು ಪೋಷಿಸಲು ಸಾಧ್ಯವಿಲ್ಲ ಎಂದು ಮಹಿಳೆ ವಾದಿಸಿದ್ದರು. ಪ್ರಕರಣ ಆಲಿಸಿದ ಜಿಲ್ಲಾ ಗ್ರಾಹಕ ವೇದಿಕೆ 11 ಲಕ್ಷ ಪರಿಹಾರಕ್ಕೆ ಆದೇಶಿಸಿತು. (ಐಎಎನ್​ಎಸ್​)

ಇದನ್ನೂ ಓದಿ: ಒಂದೇ ಕುಟುಂಬದ ನಾಲ್ವರು ಶವವಾಗಿ ಪತ್ತೆ; ಡೆತ್​ ನೋಟ್​ನಿಂದ ಕಾರಣ ಬಹಿರಂಗ

ABOUT THE AUTHOR

...view details