ಕರ್ನಾಟಕ

karnataka

ETV Bharat / bharat

ಹೆತ್ತ ಶಿಶುವನ್ನು ಬಕೆಟ್​ನಲ್ಲಿ ಬಿಟ್ಟು ಆಸ್ಪತ್ರೆಗೆ ತೆರಳಿದ ತಾಯಿ: ಪೊಲೀಸರು ಮಗುವನ್ನು ರಕ್ಷಿಸಿದ್ದು ಹೀಗೆ.. - Chengannur Police

ಮನೆಯೊಂದರ ಬಾತ್​ರೂಮ್​ನಲ್ಲಿ ನವಜಾತ ಶಿಶುವನ್ನು ಬಕೆಟ್‌ನಲ್ಲಿಯೇ ಬಿಟ್ಟು ಹೋಗಿರುವ ಘಟನೆ ಚೆಂಗನ್ನೂರು ಮುಳಕುಳ ಬಳಿಯ ಕೋಟೆಯಲ್ಲಿ ಜರುಗಿದೆ.

The police saved the child life
ನವಜಾತ ಶಿಶುವನ್ನು ಸ್ನಾನಗೃಹದಲ್ಲಿ ಬಿಟ್ಟು ಆಸ್ಪತ್ರೆಗೆ ತೆರಳಿದ ತಾಯಿ: ಮಗುವಿನ ಪ್ರಾಣ ಉಳಿಸಿದ ಪೊಲೀಸರು

By

Published : Apr 4, 2023, 7:02 PM IST

ಆಲಪ್ಪುಳ (ಕೇರಳ):ಮನೆಯೊಂದರ ಬಾತ್​ರೂಮ್​ನಲ್ಲಿ ನವಜಾತ ಶಿಶುವನ್ನು ಬಕೆಟ್‌ನಲ್ಲಿಯೇ ಬಿಟ್ಟು ಹೋಗಿರುವ ಘಟನೆ ಚೆಂಗನ್ನೂರು ಮುಳಕುಳ ಬಳಿಯ ಕೋಟೆಯಲ್ಲಿ ನಡೆದಿದೆ. ಚೆಂಗನ್ನೂರು ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಶಿಶುವನ್ನು ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ್ದಾರೆ. ಅತಿಯಾದ ರಕ್ತ ಸ್ರಾವವಾದ ಪರಿಣಾಮ ಆಸ್ಪತ್ರೆಗೆ ಬಂದ ಮಹಿಳೆ ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ಮನೆಗೆ ತೆರಳಿ ಮಗುವನ್ನು ರಕ್ಷಿಸಿದ್ದಾರೆ.

ನವಜಾತ ಶಿಶು ಸಾವನ್ನಪ್ಪಿದೆ ಎಂದು ತಿಳಿದ ತಾಯಿ:ಮನೆಯಲ್ಲೇ ಹೆರಿಗೆ ಮಾಡಲಾಗಿದ್ದು, ನವಜಾತ ಶಿಶು ಸಾವನ್ನಪ್ಪಿದೆ ಎಂದು ತಿಳಿದ ತಾಯಿ, ಮಗುವನ್ನು ಬಾತ್ ರೂಮ್​ನಲ್ಲಿ ಬಿಟ್ಟು ಬಂದು ಆಸ್ಪತ್ರೆಗೆ ದಾಖಲಾಗಿದ್ದಾರೆ. ಹೆರಿಗೆಯಾದ ನಂತರ ಶಿಶು ಮೃತಪಟ್ಟಿದೆ ಎಂದು ಮಹಿಳೆ ಆಸ್ಪತ್ರೆಯ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಆಸ್ಪತ್ರೆಯ ಅಧಿಕಾರಿಗಳು ಚೆಂಗನ್ನೂರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ತಕ್ಷಣವೇ ಮುಳಕುಳದ ಮನೆಗೆ ಬಂದು ಪರಿಶೀಲಿಸಿದರು. ಆದರೆ, ಶಿಶು ಬಕೆಟ್‌ನಲ್ಲಿ ಮಲಗಿರುವುದು ಕಂಡುಬಂದಿದೆ.

ಮಗುವನ್ನು ಆಸ್ಪತ್ರೆಗೆ ಸಾಗಿಸಿ ಪ್ರಾಣ ಉಳಿಸಿದ ಪೊಲೀಸರು:ಬಕೆಟ್​ ಸಮೇತವಾಗಿ ಶಿಶುವನ್ನು ತೆಗೆದುಕೊಂಡು ಹೋಗುತ್ತಿರುವ ವೇಳೆಯಲ್ಲಿ ಕೈ, ಕಾಲುಗಳನ್ನು ಅಲ್ಲಾಡಿಸುತ್ತಿರುವುದು ಪೊಲೀಸರು ಗಮನಕ್ಕೆ ಬಂದಿದೆ. ತಕ್ಷಣವೇ ಪೊಲೀಸರು ಮಗುವನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಮಗು ಜೀವಂತವಾಗಿದೆ ಎಂದು ಆಸ್ಪತ್ರೆ ಅಧಿಕಾರಿಗಳು ಖಚಿತ ಪಡಿಸಿದ್ದಾರೆ.

ಮಹಿಳೆ ವಿರುದ್ಧ ದೂರು ದಾಖಲು:ಬಾತ್ ರೂಮ್​ನ ಬಕೆಟ್​ಯೊಂದರಲ್ಲಿದ್ದ ಮಗುವನ್ನು ಪೊಲೀಸರು ಆಸ್ಪತ್ರೆಗೆ ಕರೆದುಕೊಂಡು ಓಡುತ್ತಿರುವ ದೃಶ್ಯಗಳು ಮೊಬೈಲ್​ನಲ್ಲಿ ಸೆರೆಹಿಡಿಯಾಗಿವೆ. ಈ ನವಜಾತ ಶಿಶುವನ್ನು ಕೊಟ್ಟಾಯಂ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದ್ದು, ಸದ್ಯ ವಿಶೇಷ ನಿಗಾ ಘಟಕದಲ್ಲಿ ಇಡಲಾಗಿದೆ. ಚೆಂಗನ್ನೂರು ಪೊಲೀಸ್​ ಠಾಣೆಯಲ್ಲಿ ಮಹಿಳೆ ವಿರುದ್ಧ ದೂರು ದಾಖಲಾಗಿದೆ.

ಕುಡಿದ ಅಮಲಿನಲ್ಲಿ ತನ್ನ 12ನೇ ಪತ್ನಿಯನ್ನೇ ಕೊಂದಿದ್ದ ಗಂಡ:ಕುಡಿದ ಅಮಲಿನಲ್ಲಿ ಗಂಡನೊಬ್ಬ ತನ್ನ 12ನೇ ಪತ್ನಿಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿರುವ ಘಟನೆ ಜಾಮ್ದಾರ್​ ಪಂಚಾಯತ್​ ವ್ಯಾಪ್ತಿಯಲ್ಲಿ ನಿನ್ನೆ ನಡೆದಿತ್ತು. ಸಾವಿತ್ರಿ ದೇವಿ (40) ಮೃತ ಮಹಿಳೆ. ಘಟನೆ ಸಂಬಂಧ ಗವಾನ್​ ಪೊಲೀಸ್​​ ಠಾಣೆ ಪ್ರಕರಣ ದಾಖಲಾಗಿತ್ತು. ಸೋಮವಾರ ರಾತ್ರಿ ಪತಿ ರಾಮಚಂದ್ರ, ಪತ್ನಿ ಸಾವಿತ್ರಿ ಜೊತೆ ಕೊಠಡಿಯಲ್ಲಿ ಮದ್ಯ ಸೇವಿಸುತ್ತಿದ್ದ, ಮದ್ಯ ಸೇವಿಸುವ ವೇಳೆ ಇಬ್ಬರ ನಡುವೆ ವಾಗ್ವಾದ ಶುರುವಾಗಿತ್ತು, ಮಾತು ತಾರಕಕ್ಕೇರಿದಾಗ ಅಮಲಿನಲ್ಲಿದ್ದ ಪತಿ ರಾಮಚಂದ್ರ ದೊಣ್ಣೆಯಿಂದ ಪತ್ನಿಗೆ ಹೊಡೆದಿದ್ದಾನೆ. ಪರಿಣಾಮ ಪತ್ನಿ ಸ್ಥಳದಲ್ಲೇ ಮೃತಪಟ್ಟಿದ್ದರು.

12 ಮದುವೆ ಆಗಿದ್ದ ಭೂಪ: ಪತ್ನಿಯನ್ನೇ ಕೊಲೆ ಮಾಡಿದ ಆರೋಪಿ ಒಟ್ಟು 12 ಮದುವೆ ಆಗಿದ್ದಾನೆ. ಈ ಹಿಂದೆ ಇದ್ದ ಪತ್ನಿಯರು ಆರೋಪಿಯ ಕಾಟ ತಾಳಲಾರದೇ ಓಡಿ ಹೋಗಿದ್ದಾರೆ. ಸಾವಿತ್ರಿ ದೇವಿ ಎಂಬುವರನ್ನು ರಾಮಚಂದ್ರ 12ನೇ ಪತ್ನಿಯಾಗಿದ್ದ. ತನ್ನ ಹಿಂದಿನ ಹೆಂಡತಿಯರಿಂದ ಒಂದೇ ಒಂದು ಮಗು ಪಡೆದಿರಲಿಲ್ಲ. 12ನೇ ಪತ್ನಿಯಾಗಿದ್ದ ಸಾವಿತ್ರಿಗೆ ಮೂರು ಗಂಡು ಮತ್ತು ಒಂದು ಹೆಣ್ಣು ಮಗು ಇವೆ. ಆರೋಪಿ ರಾಮಚಂದ್ರನನ್ನು ಪೊಲೀಸರು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.

ಇದನ್ನೂ ಓದಿ:ಸಾಲದ ಶೂಲಕ್ಕೆ ರೈತ ಆತ್ಮಹತ್ಯೆ, ಅನಾರೋಗ್ಯದಿಂದ ಮಹಿಳಾ ಪಿಎಸ್​ಐ ಸಾವು.. ಕಾರವಾರದ ಇನ್ನಿತರ ಸುದ್ದಿಗಳು

ABOUT THE AUTHOR

...view details