ಕರ್ನಾಟಕ

karnataka

ETV Bharat / bharat

ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ.. ಮೂವರ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತೆಲಂಗಾಣದ

woman committed suicide  suicide along with her three kids  suicide along with her three kids in Telangana  ಮೂವರ ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ  ಕೌಟುಂಬಿಕ ಕಲಹಕ್ಕೆ ಬೇಸತ್ತು ಮಹಿಳೆ  ಮಹಿಳೆಯೊಬ್ಬರು ತನ್ನ ಮೂವರು ಮಕ್ಕಳೊಂದಿಗೆ ಆತ್ಮಹತ್ಯೆ  ಕುಟುಂಬಸ್ಥರ ಹಿರಿಯರನ್ನು ವಿರೋಧಿಸಿ ಪ್ರೀತಿಸಿ ಮದುವೆ  ಮಹಿಳೆಯ ಬದುಕು ದುರಂತದಲ್ಲಿ ಅಂತ್ಯ  ಮದುವೆಯಾದ ನಂತರ ಗಂಡನ ಮೇಲಿನ ಪ್ರೀತಿ
ಕೌಟುಂಬಿಕ ಕಲಹ, ವರದಕ್ಷಿಣೆ ಕಿರುಕುಳ

By

Published : Jul 1, 2023, 11:51 AM IST

ರಾಜಣ್ಣ ಸಿರಸಿಲ್ಲ (ತೆಲಂಗಾಣ) :ಕುಟುಂಬದ ಹಿರಿಯರ ಮಾತು ವಿರೋಧಿಸಿ ಪ್ರೀತಿಸಿ ಮದುವೆಯಾದ ಮಹಿಳೆಯ ಬದುಕು ದುರಂತದಲ್ಲಿ ಅಂತ್ಯವಾಗಿದೆ. ಮದುವೆಯಾದ ನಂತರ ಗಂಡನ ಮೇಲಿನ ಪ್ರೀತಿಯನ್ನು ಕಳೆದುಕೊಂಡಿದ್ದಾರೆ. ಹೆಚ್ಚುತ್ತಿರುವ ಕಿರುಕುಳ ಸಹಿಸಲಾರದೆ ಹತ್ತು ವರ್ಷದೊಳಗಿನ ತನ್ನ ಮೂವರು ಮಕ್ಕಳನ್ನು ಕೊಂದು ತಾನೂ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಮಹಿಳೆ. ರಾಜಣ್ಣ ಸಿರಸಿಲ್ಲ ಜಿಲ್ಲೆಯ ಬೋಯಿನಪಲ್ಲಿ ತಾಲೂಕಿನ ಕೋಡುರುಪಾಕದಲ್ಲಿ ಶುಕ್ರವಾರ ಈ ದುರಂತ ನಡೆದಿದೆ.

ಮೃತರ ಸಂಬಂಧಿಕರ ಪ್ರಕಾರ, ಪೊಲೀಸ್ ವರದಿ:ವೇಮುಲವಾಡ ತಾಲೂಕಿನ ರುದ್ರಾವರದ ರಜಿತಾ ಅಲಿಯಾಸ್ ನೇಶಾ (30) ಕಂಪ್ಯೂಟರ್ ಕೋರ್ಸ್ ಕಲಿಯಲು ಕರೀಂನಗರಕ್ಕೆ ಹೋಗುತ್ತಿದ್ದರು. ಅಲ್ಲಿ ಅವರಿಗೆ ಸುಭಾಷನಗರದ ಬಾಳೆಹಣ್ಣು ಮಾರಾಟಗಾರ ಮಹಮ್ಮದ್ ಅಲಿ ಪರಿಚಯವಾಗಿತ್ತು. ಶೀಘ್ರದಲ್ಲೇ ಸ್ನೇಹ ಪ್ರೀತಿಗೆ ತಿರುಗಿತು. ಇವರ ಮದುವೆಗೆ ಎರಡೂ ಕುಟುಂಬಸ್ಥರು ಒಪ್ಪಿಗೆ ನೀಡಿರಲಿಲ್ಲ.

10 ವರ್ಷಗಳ ಹಿಂದೆ ರಜಿತಾ ಮನೆ ತೊರೆದು ಅಲಿಯನ್ನು ಮದುವೆಯಾಗಿದ್ದರು. ಅವರಿಗೆ 7 ಮತ್ತು 14 ತಿಂಗಳ ಇಬ್ಬರು ಪುತ್ರರು ಮತ್ತು 5 ವರ್ಷದ ಪುತ್ರಿ ಇದ್ದರು. ಮದುವೆಯಾದ ಕೆಲ ದಿನಗಳ ನಂತರ ಅಲಿ ವರದಕ್ಷಿಣೆಗಾಗಿ ರಜಿತಾಗೆ ಕಿರುಕುಳ ನೀಡಲಾರಂಭಿಸಿದ್ದಾನೆ. ಈ ಬಗ್ಗೆ ರಜಿತಾ ವೇಮುಲವಾಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ನಂತರ ಲೋಕ ಅದಾಲತ್‌ನಲ್ಲಿ ರಾಜಿ ಸಂಧಾನ ಮಾಡಲಾಗಿತ್ತು. ಆಗ ಅಲಿ ತಮ್ಮ ನಡವಳಿಕೆಯನ್ನು ಬದಲಾಯಿಸಿಕೊಳ್ಳುವ ಭರವಸೆ ನೀಡಿದ್ದ.

ಇದಾದ ಬಳಿಕ ಅಲಿ ವರದಕ್ಷಿಣೆಗಾಗಿ ರಜಿತಾ ಕುಟುಂಬ ಸದಸ್ಯರೊಂದಿಗೆ ಜಗಳವಾಡಿದ್ದಾನೆ. ಜೂನ್ 27 ರಂದು ರುದ್ರವರಂನಲ್ಲಿರುವ ಆಕೆಯ ತಾಯಿಯ ಮನೆಗೆ ಅಲಿ ತನ್ನ ಹೆಂಡತಿ ಮತ್ತು ಮೂವರು ಮಕ್ಕಳನ್ನು ಡ್ರಾಪ್ ಮಾಡಿದ್ದಾನೆ. ಆಗ ರಜಿತಾಳನ್ನು ಗಂಡನ ಬಳಿಗೆ ಹೋಗುವಂತೆ ಪಾಲಕರಾದ ರಾಜಾ ನರಸು ಮತ್ತು ಲಕ್ಷ್ಮಿ ಹೇಳಿ ಮರುದಿನ ರುದ್ರಂಗಿಯಲ್ಲಿ ಬಸ್ ನಿಲ್ದಾಣದಲ್ಲಿ ಇಳಿಸಿದರು. ಆಗ ವೇಮುಲವಾಡ ಠಾಣೆಗೆ ತೆರಳಿ ಮಗಳು ರಜಿತಾಗೆ ಪತಿ ಕಿರುಕುಳ ನೀಡುತ್ತಿದ್ದಾರೆ ಎಂದು ರಜಿತಾ ಪೋಷಕರು ದೂರು ನೀಡಿದ್ದರು. ಬಕ್ರೀದ್ ನಂತರ ಈ ವಿಷಯವನ್ನು ಇತ್ಯರ್ಥಪಡಿಸುವುದಾಗಿ ಪೊಲೀಸರು ಹೇಳಿದಾಗ ಅವರು ರುದ್ರವರಂಗೆ ಮರಳಿದರು.

ಶುಕ್ರವಾರ ಕೋಡುರುಪಾಕ ರಾಷ್ಟ್ರೀಯ ಹೆದ್ದಾರಿ ಪಕ್ಕದ ಮಿಡ್ ಮನೇರ್ ಜಲಾಶಯದಲ್ಲಿ ರಜಿತಾ ಹಾಗೂ ಮೂವರು ಮಕ್ಕಳ ಶವ ಪತ್ತೆಯಾಗಿದ್ದು, ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ವೇಮುಲವಾಡ ಪಟ್ಟಣ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದರು. ದಡದಲ್ಲಿ ಬ್ಯಾಗ್‌ನಲ್ಲಿ ಸಿಕ್ಕ ವಿಳಾಸ ಮತ್ತು ದೂರವಾಣಿ ಸಂಖ್ಯೆ ಆಧರಿಸಿ ರಜಿತಾ ಅವರ ಪತಿ ಅಲಿ ಮತ್ತು ಅವರ ಸಹೋದರನಿಗೆ ಮಾಹಿತಿ ನೀಡಲಾಯಿತು.

ಸ್ಥಳೀಯರ ಸಹಾಯದಿಂದ ಮೃತದೇಹಗಳನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗಾಗಿ ಸಿರಸಿಲ್ಲಾ ಜಿಲ್ಲಾ ಆಸ್ಪತ್ರೆಗೆ ಸಾಗಿಸಲಾಯಿತು. ರಜಿತಾ ಅವರ ಕಿರಿಯ ಸಹೋದರ ರಂಜಿತ್ ಅವರ ದೂರಿನ ಮೇರೆಗೆ ಪ್ರಕರಣ ದಾಖಲಿಸಲಾಗಿದೆ ಎಂದು ಎಸ್‌ಐ ಮಹೇಂದರ್ ಮಾಹಿತಿ ನೀಡಿದ್ದಾರೆ. ವರದಕ್ಷಿಣೆ ಕಿರುಕುಳದಿಂದ ರಜಿತಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದಾರೆ.

ಓದಿ:ಬಾಡಿಗೆದಾರರ ಕಿರುಕುಳ ತಾಳಲಾರದೇ ಮನೆ ಯಜಮಾನಿ ಆತ್ಮಹತ್ಯೆ: ಮಗಳ ಸಾವಿನ ಸುದ್ದಿ ತಿಳಿದು ತಾಯಿಗೂ ಹೃದಯಾಘಾತ

ABOUT THE AUTHOR

...view details