ತಮಿಳುನಾಡು: ರೈಲು ಡಿಕ್ಕಿ ಹೊಡೆದ ಪರಿಣಾಮ ಗಂಡು ಆನೆಯೊಂದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನವಕ್ಕರೈನಲ್ಲಿ ನಡೆದಿದೆ.
ತಮಿಳುನಾಡು-ಕೇರಳ ಗಡಿಯಲ್ಲಿರುವ ವಲಯಾರ್ ನದಿಯಲ್ಲಿ ನೀರು ಕುಡಿದು ಆನೆಯೊಂದು ಕಾಡಿಗೆ ಹಿಂದಿರುಗುತ್ತಿತ್ತು. ಈ ವೇಳೆ ಕೇರಳದಿಂದ ಬರುತ್ತಿದ್ದ ತಿರುವನಂತಪುರ ಎಕ್ಸ್‌ಪ್ರೆಸ್ ರೈಲು ಡಿಕ್ಕಿ ಹೊಡೆದಿದೆ. ಪರಿಣಾಮ ಆನೆಯ ತಲೆ ಮತ್ತು ಬೆನ್ನಿನ ಕೆಲ ಭಾಗಗಳಲ್ಲಿ ಗಂಭೀರ ಗಾಯಗಳಾಗಿವೆ.