ದಕ್ಷಿಣ 24 ಪರಗಣ, ಪಶ್ಚಿಮಬಂಗಾಳ:ನವಜಾತ ಶಿಶುವನ್ನು ಎರಡು ಲಕ್ಷಕ್ಕೆ ಮಾರಾಟ ಮಾಡಿರುವ ಘಟನೆ ಜಿಲ್ಲೆಯ ನರೇಂದ್ರಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂಬ ಆರೋಪವೊಂದು ಕೇಳಿ ಬಂದಿದೆ. ಪೊಲೀಸರು ಮಹಿಳೆಯೊಬ್ಬರಿಗೆ ಶಿಶು ಮಾರಾಟ ಮಾಡಿದ ಆರೋಪದ ಮೇಲೆ ತಾಯಿ ಸೇರಿದಂತೆ ನಾಲ್ವರನ್ನು ಬಂಧಿಸಿದ್ದಾರೆ. ಸ್ಥಳೀಯ ನಿವಾಸಿಯೊಬ್ಬರು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿಗಳು ಹಣಕಾಸಿನ ವ್ಯವಹಾರವನ್ನು ಒಪ್ಪಿಕೊಂಡಿದ್ದಾರೆ. ಆದರೆ ನವಜಾತ ಶಿಶುಗಳ ಮಾರಾಟವನ್ನು ನಿರಾಕರಿಸಿದ್ದಾರೆ.
ನವಜಾತ ಶಿಶುವನ್ನು ಮಾರಾಟ: ಪ್ರಾಥಮಿಕ ತನಿಖೆಯ ನಂತರ ಮಹಿಳೆಯ ಪತಿ ಬಹಳ ಹಿಂದೆಯೇ ಮೃತಪಟ್ಟಿರುವುದು ಪೊಲೀಸರಿಗೆ ತಿಳಿದು ಬಂದಿದೆ. ಇದಾದ ಬಳಿಕ ಆಕೆ ಮತ್ತೊಬ್ಬ ವ್ಯಕ್ತಿಯೊಂದಿಗೆ ಸಂಬಂಧ ಬೆಳೆಸಿದ್ದಾಳೆ. ಆ ಸಂಬಂಧದಿಂದಾಗಿ ಆಕೆ ಗರ್ಭಿಣಿಯಾದಳು. ಘಟನೆ ತಿಳಿದ ನೆರೆಹೊರೆಯವರು ಆಕೆಯ ಬಗ್ಗೆ ಗುಸುಗುಸು ಮಾತನಾಡಲು ಪ್ರಾರಂಭಿಸಿದರು. ಆಗ ವಿಧವೆಗೆ ಹುಟ್ಟಲಿರುವ ಮಗುವನ್ನು ಗರ್ಭಪಾತ ಮಾಡಿಸಲು ನಿರ್ಧರಿಸಿದ್ದರು.
ಭೂಮಿ ಮಾರಾಟ ಮಾಡಿ ಹಣ ಹೊಂದಿಸಿದ ಮಹಿಳೆ:ಈ ವಿಷಯ ತಪಸ್ ಮೊಂಡಲ್ ಮತ್ತು ಶಾಂತಿ ಮೊಂಡಲ್ ಎಂಬ ದಂಪತಿಗೆ ತಿಳಿಯಿತು. ಆಗ ಶಾಂತಿ ಅವರು ಪಂಚಸಾಯರ್ ಪ್ರದೇಶದ ನಿವಾಸಿ ಜುಮಾ ಮಾಝಿಗೆ ಕರೆ ಮಾಡಿದ್ದಾರೆ. ಜುಮಾಗೆ ಮಕ್ಕಳಿಲ್ಲ. ಹೀಗಾಗಿ ಶಾಂತಿ ಅವರು ಜುಮಾಗೆ ಮಗುವನ್ನು ದತ್ತು ಪಡೆಯಲು ಒಪ್ಪಿಸಿದ್ದಳು. ಪ್ರಕ್ರಿಯೆ ಮುಂದುವರೆಯಿತು. ಜುಮಾ ಮಗುವನ್ನು 2 ಲಕ್ಷ ರೂಪಾಯಿಗೆ ಖರೀದಿಸಿ 11 ದಿನದ ಹಸುಳೆಯನ್ನು ಮನೆಗೆ ಕರೆತಂದಿದ್ದಾರೆ. ಆ ಹಣವನ್ನು ಹೊಂದಿಸಲು ಜುಮಾ ತನ್ನ ಭೂಮಿಯನ್ನು ಸಹ ಮಾರಾಟ ಮಾಡಿದ್ದರು.