ಪುಣೆ (ಮಹಾರಾಷ್ಟ್ರ) : ಮದುವೆಯಾಗಲು ನಿರಾಕರಿಸಿದ ಸುಶಿಕ್ಷಿತ ಯುವತಿಯನ್ನು ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಪುಣೆಯ ಔಂಧ್ ನಲ್ಲಿ ನಡೆದಿದೆ. ಮೃತ ಯುವತಿಯನ್ನು ಸಿದ್ಧಾರ್ಥ್ ನಗರದ ಶ್ವೇತಾ ವಿಜಯ್ ರಣವಾಡೆ (26) ಗುರುತಿಸಲಾಗಿದ್ದು, ಕೊಲೆ ಮಾಡಿದ ಆರೋಪಿಯನ್ನು ರಾಜಗುರುನಗರದ ಪ್ರತೀಕ್ ಕಿಸಾನ್ ಧಾಮಲೆ ಎಂದು ಗುರುತಿಸಲಾಗಿದೆ. ಘಟನೆ ಸಂಬಂಧ ಚತುರ್ಶಿಂಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆ ಹಿನ್ನೆಲೆ: 2018ರಲ್ಲಿ ಸಂಬಂಧಿಕರೊಬ್ಬರ ಮದುವೆಯಲ್ಲಿ ಪ್ರತೀಕ್ಗೆ ಶ್ವೇತಾಳ ಪರಿಚಯವಾಗಿತ್ತು. ಅಲ್ಲಿ ಇಬ್ಬರೂ ಮದುವೆಯಾಗುವ ಬಗ್ಗೆ ನಿರ್ಧರಿಸಿದ್ದರು.ಆದರೆ ಪ್ರತೀಕ್ ಕೆಲವು ದಿನಗಳ ನಂತರ ಶ್ವೇತಾಗೆ ಕಿರುಕುಳ ನೀಡಲು ಪ್ರಾರಂಭಿಸಿದ್ದನು ಎಂದು ಹೇಳಲಾಗಿದೆ. ಜೊತೆಗೆ ಮಾನಸಿಕ ಕಿರುಕುಳ ನೀಡಲು ಪ್ರಾರಂಭಿಸಿದ್ದು, ಇದರಿಂದ ಬೇಸತ್ತ ಶ್ವೇತಾ ಆತನನ್ನು ಮದುವೆಯಾಗಲು ನಿರಾಕರಿಸಿದ್ದಳು.
ಈ ವಿಷಯವನ್ನು ತನ್ನ ಮನೆಯವರಿಗೂ ತಿಳಿಸಿದ್ದಾಳೆ. ಆದರೆ ಪ್ರತೀಕ್ ಮಾತ್ರ ಆತ್ಮಹತ್ಯೆ ಬೆದರಿಕೆ ಹಾಕುವ ಮೂಲಕ ಮತ್ತಷ್ಟು ಕಿರುಕುಳ ನೀಡುತ್ತಿದ್ದ ಎಂದು ತಿಳಿದುಬಂದಿದೆ. ಈ ಬಗ್ಗೆ ಎರಡು ತಿಂಗಳ ಹಿಂದೆ ಚತುರ್ಶಿಂಗಿ ಪೊಲೀಸ್ ಠಾಣೆಯಲ್ಲಿ ಶ್ವೇತಾ ದೂರು ದಾಖಲಿಸಿದ್ದಳು.