ಕರ್ನಾಟಕ

karnataka

ETV Bharat / bharat

ಸಿಎಂಗೆ ಒಳ್ಳೆಯ ಬುದ್ಧಿ ಕರುಣಿಸಪ್ಪಾ.. ಗಣೇಶನ ಮುಂದೆ ನೋವು ತೋಡಿಕೊಂಡ ಸರಪಂಚ್ - ಈಟಿವಿ ಭಾರತ ಕನ್ನಡ

ನನ್ನನ್ನು ಯಾಕೆ ಸರಪಂಚ್​ನನ್ನಾಗಿ ಮಾಡಿದಿರಿ ಎಂದು ಗಣೇಶ ಪ್ರತಿಮೆ ಎದುರು ಆಂಧ್ರ ಪ್ರದೇಶದ ಸರಪಂಚ್​ವೊಬ್ಬರು ತಮ್ಮ ನೋವನ್ನು ವ್ಯಕ್ತಪಡಿಸಿದ್ದಾರೆ.

a-villege-sarpanch-is-an-innovative-puja-for-lord-ganesha
ಸಿಎಂಗೆ ಒಳ್ಳೆಯ ಬುದ್ಧಿ ಕರುಣಿಸಪ್ಪಾ...ಗಣೇಶನ ಮುಂದೆ ನೋವು ತೋಡಿಕೊಂಡ ಸರಪಂಚ್!

By

Published : Sep 1, 2022, 4:46 PM IST

ಅಂಬೇಡ್ಕರ್ ಕೋನಸೀಮಾ (ಆಂಧ್ರಪ್ರದೇಶ): ಗಣೇಶ ಚೌತಿಯನ್ನು ಆಂಧ್ರ ಪ್ರದೇಶದ ಅಂಬೇಡ್ಕರ್ ಕೋನಸೀಮಾ ಜಿಲ್ಲೆಯ ಮಲ್ಕಿಪುರಂ ಮಂಡಲ ದಿಂಡಿ ಗ್ರಾಮದ ಸರಪಂಚ್​ವೊಬ್ಬರು ವಿಶಿಷ್ಟವಾಗಿ ಆಚರಿಸಿದ್ದಾರೆ. ನೀರಿನ ಕೊಳದ ಮಧ್ಯೆ ಮಂಪಟವನ್ನು ನಿರ್ಮಿಸಿ ವಿನಾಯಕ ಮೂರ್ತಿಯನ್ನು ಸ್ಥಾಪಿಸಿದ್ದಾರೆ. ಕೊಳದಲ್ಲಿಯೇ ವಿಘ್ನ ನಿವಾರಕನಿಗೆ ಪೂಜೆ ನೆರವೇರಿಸಿದ್ದಾರೆ. ಆದರೆ, ದೇವರ ಬಳಿ ಅವರು ಬೇಡಿಕೊಂಡಿರುವ ವಿಷಯ ಮಾತ್ರ ಅಚ್ಚರಿ ಮೂಡಿಸಿದೆ.

ಸರಪಂಚ್ ಮುದುನೂರಿ ಶ್ರೀನಿವಾಸರಾಜ್ ಎಂಬುವವರೇ ನೀರಿನ ಕೊಳದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸಿದವರು. ಪೂಜೆ ಮಾಡುತ್ತ ' ನನ್ನನ್ನು ಯಾಕೆ ಸರಪಂಚನನ್ನಾಗಿ ಮಾಡಿದಿರಿ' ಎಂದು ಗಣೇಶ ಪ್ರತಿಮೆ ಎದುರು ತಮ್ಮ ನೋವನ್ನು ತೋಡಿಕೊಂಡಿದ್ದಾರೆ.

ಸಿಎಂಗೆ ಒಳ್ಳೆಯ ಬುದ್ಧಿ ಕರುಣಿಸಪ್ಪಾ...ಗಣೇಶನ ಮುಂದೆ ನೋವು ತೋಡಿಕೊಂಡ ಸರಪಂಚ್!

ಅಲ್ಲದೇ, 'ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಯನ್ನು ಈಡೇರಿಸಲು ಸಾಧ್ಯವಾಗಿಲ್ಲ. ಒಂದೂವರೆ ವರ್ಷ ಕಳೆದರೂ ಹೊಸ ರಸ್ತೆಗಳನ್ನು ನಿರ್ಮಿಸಲು ಆಗಿಲ್ಲ. ಇರುವ ರಸ್ತೆಗಳನ್ನೂ ರಿಪೇರಿ ಮಾಡಲಾಗದ ಸ್ಥಿತಿ ನಿರ್ಮಾಣವಾಗಿದೆ' ಎಂದೂ ಸರಪಂಚ್ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

'ಜೊತೆಗೆ ಗ್ರಾಮದಲ್ಲಿ ನಮ್ಮ ಕರ್ತವ್ಯಗಳೇನು ಎಂಬುದೇ ಅರ್ಥವಾಗುತ್ತಿಲ್ಲ. ವಾರ್ಡ್ ಸದಸ್ಯರಿಗೆ ಏನು ಮಾಡಬೇಕೆಂದೂ ತಿಳಿಯುತ್ತಿಲ್ಲ. ಸಿಎಂ ಜಗನ್​ ಮೋಹನ್​ ರೆಡ್ಡಿ ಅವರಿಗೆ ಒಳ್ಳೆಯ ಬುದ್ಧಿ ಕರುಣಿಸಪ್ಪಾ' ಎಂದು ಗಣೇಶನ ಬಳಿ ಅವರು ಬೇಡಿಕೊಂಡಿದ್ದಾರೆ.

ಇದನ್ನೂ ಓದಿ:ಮುಸ್ಲಿಂ ಪೊಲೀಸ್ ಅಧಿಕಾರಿಯ ಗಣೇಶ ಪ್ರೇಮ: ಭಾವೈಕ್ಯತೆಯ ಸಂದೇಶ ಸಾರಿದ ಇನ್ಸ್​​​​​​​​​ಪೆಕ್ಟರ್​​

ABOUT THE AUTHOR

...view details