ರಾಮ್ನಗರ(ಉತ್ತರಾಖಂಡ):ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನದಲ್ಲಿ ಹುಲಿಯೊಂದು ತನ್ನ 4 ಮರಿಗಳ ಜೊತೆ ಕಂಡು ಬಂದಿದೆ. ಇದರಿಂದ ಆ ಪ್ರದೇಶದಲ್ಲಿ ಪ್ರವಾಸಿಗರ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ಜಿಮ್ ಕಾರ್ಬೆಟ್ ಉದ್ಯಾನವನದ ಧಿಕಾಲಾ ಮತ್ತು ಜಿರ್ನಾ ಪ್ರದೇಶದಲ್ಲಿ ಪ್ರವಾಸಿಗರ ಚಾರಣದ ವೇಳೆ ಹೆಣ್ಣು ಹುಲಿ ತನ್ನ 4 ಮರಿಗಳ ಜೊತೆ ಸಂಚರಿಸುತ್ತಿರುವುದನ್ನು ಪ್ರವಾಸಿಗರು ತಮ್ಮ ಮೊಬೈಲ್ನಲ್ಲಿ ಸೆರೆ ಹಿಡಿದಿದ್ದಾರೆ. ಈ ವಿಡಿಯೋ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಹುಲಿ ಕಾಣಿಸಿಕೊಂಡ ಪ್ರದೇಶದಲ್ಲಿ ಪ್ರವಾಸಿಗರ ಸಂಚಾರಕ್ಕೆ ನಿರ್ಬಂಧ ಹೇರಿರುವ ಅಲ್ಲಿನ ಅಧಿಕಾರಿಗಳು, ಹುಲಿಗಳು ಸಾಮಾನ್ಯವಾಗಿ ತನ್ನ ಮರಿಗಳ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿರುತ್ತವೆ. ಪ್ರವಾಸಿಗರಿಂದ ತನ್ನ ಮರಿಗಳಿಗೆ ತೊಂದರೆ ಉಂಟಾಗಬಹುದು ಎಂಬ ಕಾರಣಕ್ಕಾಗಿ ಅದು ದಾಳಿ ಮಾಡುವ ಸಾಧ್ಯತೆ ಇರುತ್ತದೆ. ಇದರಿಂದ ಹುಲಿ ಕಾಣಿಸಿಕೊಂಡ ಪ್ರದೇಶದಲ್ಲಿ ಪ್ರವಾಸಿಗರ ಚಾರಣಕ್ಕೆ ಅನುಮತಿ ನಿಷೇಧಿಸಲಾಗಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ತಂದೆಯ ಗನ್ ತಂದು ವಿದ್ಯಾರ್ಥಿಗಳ ಮೇಲೆ ಗುಂಡಿನ ಸುರಿಮಳೆ: ಮೂವರು ಸಾವು, ಹಲವರ ಸ್ಥಿತಿ ಗಂಭೀರ
ಉತ್ತರಾಖಂಡದ ಜಿಮ್ ಕಾರ್ಬೆಟ್ ರಾಷ್ಟ್ರೀಯ ಉದ್ಯಾನವನವು ಹುಲಿ ಸಂರಕ್ಷಿತಾರಣ್ಯವಾಗಿದೆ. ಅಲ್ಲದೇ, ಇತ್ತೀಚೆಗೆ ಹುಲಿಗಳ ಸಂತತಿ ಕ್ಷೀಣಿಸಿದ ಕಾರಣ ಕಂಡು ಬರುವ ಹುಲಿಗಳ ಮೇಲೆ ತೀವ್ರ ನಿಗಾ ವಹಿಸಲಾಗುತ್ತಿದೆ.