ಕರ್ನಾಟಕ

karnataka

ETV Bharat / bharat

ಯುವಕನ ಅಪಹರಿಸಿ ಕಣ್ಣಿಗೆ ಆ್ಯಸಿಡ್ ಹಾಕಿ.. ಭಿಕ್ಷುಕರ ಮಾಫಿಯಾ ಗ್ಯಾಂಗ್​ಗೆ 70 ಸಾವಿರಕ್ಕೆ ಮಾರಾಟ

ಉತ್ತರ ಪ್ರದೇಶದ ಯುವಕನ್ನು ಅಪಹರಿಸಿ, ಕಣ್ಣಿಗೆ ಆ್ಯಸಿಡ್ ಹಾಕಿ ಚಿತ್ರಹಿಂಸೆ ಕೊಟ್ಟು ನಂತರ ದೆಹಲಿಯಲ್ಲಿ ಭಿಕ್ಷುಕರ ಮಾಫಿಯಾ ಗ್ಯಾಂಗ್​ಗೆ ಮಾರಾಟ ಮಾಡಿದ್ದ ಆಘಾತಕಾರಿ ಪ್ರಕರಣದ ಬಯಲಿಗೆ ಬಂದಿದೆ.

a-up-man-was-abducted-and-sold-to-rs-70000-to-begging-mafia-in-delhi
ಯುವಕನ ಅಪಹರಿಸಿ ಕಣ್ಣಿಗೆ ಆ್ಯಸಿಡ್ ಹಾಕಿ... ಭಿಕ್ಷುಕರ ಮಾಫಿಯಾ ಗ್ಯಾಂಗ್​ಗೆ 70 ಸಾವಿರಕ್ಕೆ ಮಾರಾಟ

By

Published : Nov 4, 2022, 9:14 PM IST

ಕಾನ್ಪುರ (ಉತ್ತರ ಪ್ರದೇಶ): ಉತ್ತರ ಪ್ರದೇಶದ ಕಾನ್ಪುರದಲ್ಲಿ ಬೆಚ್ಚಿ ಬೀಳಿಸುವ ಘಟನೆ ಬೆಳಕಿಗೆ ಬಂದಿದೆ. ಯುವಕನೊಬ್ಬನ್ನು ಪರಿಚಯಸ್ಥರೇ ಅಪಹರಿಸಿ, ಒತ್ತೆಯಾಳಾಗಿಟ್ಟುಕೊಂಡು ಕೈಕಾಲು ಮುರಿದು, ಕಣ್ಣಿಗೆ ಆ್ಯಸಿಡ್​ ಹಾಕಿ ಕುರುಡಾಗಿಸಿದ್ದಾರೆ. ನಂತರ 70 ಸಾವಿರ ರೂಪಾಯಿಗೆ ಭಿಕ್ಷುಕರ ಮಾಫಿಯಾ ಗ್ಯಾಂಗ್‌ಗೆ ಆ ಯುವಕನನ್ನು ಮಾರಾಟ ಮಾಡಲಾಗಿದೆ. ಆದರೆ, ಆ್ಯಸಿಡ್​ ದಾಳಿಯಿಂದ ಯುವಕನ ಪರಿಸ್ಥಿತಿ ​ಹದಗೆಟ್ಟಾಗ ಮರಳಿ ಊರಿಗೆ ತಂದು ಬಿಡಲಾಗಿದೆ.

ಹೌದು, ಕಾನ್ಪುರದ 30 ವರ್ಷದ ಸುರೇಶ್ ಮಾಂಝಿ ಎಂಬ ಯುವಕನ ನೋವಿನ ಕಥೆ ಇದು. ಶುಕ್ರವಾರ ಕಾನ್ಪುರದ ರಸ್ತೆಯಲ್ಲಿ ಸುರೇಶ್ ಅಸಹಾಯಕ ಸ್ಥಿತಿಯಲ್ಲಿ ಬಿದ್ದಿದ್ದಾಗ ಸ್ಥಳೀಯ ಕೌನ್ಸಿಲರ್ ಪ್ರಶಾಂತ್ ಶುಕ್ಲಾ ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆಗ ಇಡೀ ಕರಾಳ ಘಟನೆಯನ್ನು ಸುರೇಶ್ ಪೊಲೀಸರು ಮುಂದೆ ಬಿಚ್ಚಿಟ್ಟಿದ್ದಾರೆ.

ಇಷ್ಟಕ್ಕೂ ಆಗಿದ್ದೇನು?: ಸಂತ್ರಸ್ತ ಸುರೇಶ್ ಮಾಂಝಿ ದೂರಿನ ಪ್ರಕಾರವೇ ಹೇಳಬೇಕಾದರೆ ಇಂದೊಂದು ಮಾನವ ಕಳ್ಳಸಾಗಣೆ ಪ್ರಕರಣ ಎಂದರೆ ತಪ್ಪಾಗಲಾರದು. ಆರು ತಿಂಗಳ ಹಿಂದೆ ಕೆಲಸಕ್ಕಾಗಿ ಹುಡುಕಾಟ ನಡೆಸುತ್ತಿದ್ದ ಸುರೇಶ್ ಮಾಂಝಿಯನ್ನು ಪರಿಚಿಯತಸ್ಥ ವಿಜಯ್ ಎಂಬಾತ ಒತ್ತೆಯಾಳಾಗಿಟ್ಟುಕೊಂಡು ಥಳಿಸಿ ಕೈಕಾಲುಗಳ ಉಗುರುಗಳನ್ನು ಮುರಿದಿದ್ದ. ಅಲ್ಲದೇ, ಕಣ್ಣಿಗೆ ಆ್ಯಸಿಡ್​ ಹಾಕಿ ಕಣ್ಣು ಕಳೆದಿದ್ದ. ಈ ಇದೇ ದೇಹದಲ್ಲಿ ಹಲವೆಡೆ ಸಹ ಆ್ಯಸಿಡ್​ ಸುರಿಯಲಾಗಿತ್ತು ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ:4.5 ಕೆಜಿ ನಕಲಿ ಚಿನ್ನ ಅಡವಿಟ್ಟು ಮೋಸ: ನಗರಸಭೆ ಮಾಜಿ‌ ಉಪಾಧ್ಯಕ್ಷರ ಮಗ, 18 ಮಂದಿ ವಿರುದ್ಧ ದೂರು

ನಂತರ ದೆಹಲಿಯಲ್ಲಿದ್ದ ರಾಜ್ ಎಂಬ ವ್ಯಕ್ತಿಗೆ ಸುರೇಶನನ್ನು 70 ಸಾವಿರ ರೂ.ಗೆ ಆರೋಪಿ ವಿಜಯ್ ಮಾರಾಟ ಮಾಡಿದ್ದಾನೆ. ಅಲ್ಲಿಂದ ದೆಹಲಿಯಲ್ಲಿ ಸುರೇಶನನ್ನು ಭಿಕ್ಷಾಟನೆಗೆ ಹಚ್ಚಲಾಗಿದೆ. ಬಳಿಕ ರಾಜ್ ಕೂಡ ಸುರೇಶ್​ ಮೇಲೆ ಆ್ಯಸಿಡ್ ಹಾಕಿ, ಅದೇ 70 ಸಾವಿರ ರೂ.ಗೆ ಮತ್ತೊಂದು ಭಿಕ್ಷುಕರ ಮಾಫಿಯಾ ಗ್ಯಾಂಗ್​ಗೆ ಮಾರಾಟ ಮಾಡಿದ್ದಾನೆ.

ಮತ್ತೆ ಕಾನ್ಪುರಕ್ಕೆ ಬಿಟ್ಟು ಹೋದರು: ಆಗ ಸುರೇಶ್​ನ ಸ್ಥಿತಿ ನೋಡಿ ವೈದ್ಯರ ಬಳಿ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲು ಮುಂದಾಗಿದ್ದರು. ಆದರೆ, ಚಿಕಿತ್ಸೆಗೆ 37 ಸಾವಿರ ರೂಪಾಯಿ ಖರ್ಚು ಆಗುತ್ತಿದೆ ಎಂದು ವೈದ್ಯರು ಹೇಳಿದ್ದರು. ಹೀಗಾಗಿಯೇ ಸುರೇಶನನ್ನು ರಾಜ್ ಮತ್ತೆ ಕಾನ್ಪುರಕ್ಕೆ ಕರೆತಂದು ಬಿಟ್ಟು ಹೋಗಿದ್ದಾನೆ ಎಂದು ದೂರಿನಲ್ಲಿ ವಿವರಿಸಲಾಗಿದೆ.

ಈ ದೂರಿನ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ. ಇದೇ ದೂರಿನ ಮೇಲೆ ಮುಂದಿನ ಕ್ರಮ ಕೈಗೊಳ್ಳಲಾಗುವುದು. ಜೊತೆಗೆ ಈಗಾಗಲೇ ಆರೋಪಿಗಳ ಪತ್ತೆಗಾಗಿ ಶೋಧ ಕಾರ್ಯ ನಡೆಯುತ್ತಿದೆ. ಎಂದು ಪೊಲೀಸ್ ಆಯುಕ್ತ ಬಿ.ಪಿ.ಜೋಗ್ದಂಡ್ ತಿಳಿಸಿದ್ದಾರೆ.

ಇದನ್ನೂ ಓದಿ:ಸರ್ಕಾರಿ ಶಾಲೆಯಲ್ಲಿ ಗುಂಡಿನ ದಾಳಿ: 7ನೇ ತರಗತಿ ವಿದ್ಯಾರ್ಥಿಗೆ ಗುಂಡು ಹಾರಿಸಿದ ಯುವಕ

ABOUT THE AUTHOR

...view details