ಕರ್ನಾಟಕ

karnataka

ETV Bharat / bharat

ಕೊಲ್ಲಾಪುರದಲ್ಲಿ ಸುಟ್ಟು ಕರಕಲಾದ 21 ಲಕ್ಷ ಮೌಲ್ಯದ ಬೈಕ್​​ - Kolhapur bike burnt

ಕೆಲ ದಿನಗಳ ಹಿಂದೆ ಮಹಾರಾಷ್ಟ್ರದ ಕೊಲ್ಲಾಪುರದ ಯುವಕನೊಬ್ಬ 21 ಲಕ್ಷ ರೂಪಾಯಿ ಬೈಕ್​ ಖರೀದಿಸಿದ್ದರು. ಇದೀಗ ಆ ಬೈಕ್​ ಅನುಮಾನಾಸ್ಪದ ರೀತಿಯಲ್ಲಿ ಸುಟ್ಟು ಕರಕಲಾಗಿದೆ.

two-wheeler worth 25 lakhs burnt down in Kolhapur
ಕೊಲ್ಲಾಪುರದಲ್ಲಿ ಸುಟ್ಟು ಕರಕಲಾದ 21 ಲಕ್ಷ ಮೌಲ್ಯದ ಬೈಕ್​​

By

Published : Nov 11, 2022, 3:37 PM IST

Updated : Nov 11, 2022, 6:13 PM IST

ಕೊಲ್ಲಾಪುರ (ಮಹಾರಾಷ್ಟ್ರ): ಕೆಲ ದಿನಗಳ ಹಿಂದೆ ಕೊಲ್ಲಾಪುರದ ಯುವಕನೊಬ್ಬ 21 ಲಕ್ಷ ರೂಪಾಯಿ ಬೆಲೆ ಬಾಳುವ ಬೈಕ್​ ಅನ್ನು ಮೆರವಣಿಗೆ ಮೂಲಕ ಸ್ವಾಗತಿಸಿದ್ದ. ಇದೀಗ ಗುರುವಾರ ರಾತ್ರಿ ಅದೇ ಬೈಕ್ ಸುಟ್ಟು ಕರಕಲಾಗಿರುವುದು ಘಟನೆ ಬೆಳಕಿಗೆ ಬಂದಿದೆ.

ಸುಟ್ಟು ಕರಕಲಾದ 21 ಲಕ್ಷ ಮೌಲ್ಯದ ಬೈಕ್​​

ಗುರುವಾರ ಮಧ್ಯರಾತ್ರಿ ಈ ಘಟನೆ ನಡೆದಿದ್ದು, ಅನುಮಾನಾಸ್ಪದ ರೀತಿಯಲ್ಲಿ ಬೈಕ್​ ಸುಟ್ಟು ಕರಕಲಾಗಿದೆ. 15 ದಿನಗಳ ಹಿಂದೆಯಷ್ಟೇ ಯುವಕ ಬೈಕ್​ನನ್ನು ಡೊಳ್ಳು ಬಾರಿಸುವ ಮೂಲಕ ಮೆರವಣಿಗೆ ಮಾಡಿ ಸ್ವಾಗತಿಸಿದ್ದ. ಈ ಬೈಕ್‌ಗೆ ಬೆಂಕಿ ಹೇಗೆ ಹೊತ್ತಿಕೊಂಡಿತು? ಬೆಂಕಿ ಹಚ್ಚಿದವರು ಯಾರು ಎಂಬುದು ಇನ್ನೂ ತಿಳಿದುಬಂದಿಲ್ಲ.

ದೀಪಾವಳಿ ಪಾಂಡ್ಯದಂದು ಅನೇಕ ಜನರು ವಸ್ತುಗಳನ್ನು ಖರೀದಿಸುತ್ತಾರೆ. ಆದರೆ ಕೊಲ್ಹಾಪುರದ ಕಲಂಬಾದಲ್ಲಿ ವಾಸವಾಗಿರುವ ರಾಜೇಶ್ ಚೌಗ್ಲೆ ಎಂಬ ಯುವಕ, ಕವಾಸಕಿ ನಿಂಜಾ ಝಡ್ ಎಕ್ಸ್ 10 ಆರ್ ಬೈಕ್​ ಖರೀದಿಸಿದ್ದರು. ರಾಜೇಶ್ ಚೌಗ್ಲೆ ಷೇರು ಮಾರುಕಟ್ಟೆ ವ್ಯವಹಾರ ಮಾಡುತ್ತಿದ್ದಾನೆ. ಈಗಾಗಲೇ ರಾಯಲ್‌ ಎನ್‌ಫೀಲ್ಡ್‌ ಬೈಕ್​​ ಮತ್ತು ಇತರ ಸ್ಪೋರ್ಟ್ಸ್‌ ಬೈಕ್‌ಗಳು ಹಾಗೂ ಕಾರುಗಳು ಈತನಲ್ಲಿವೆ.

ಇದನ್ನೂ ಓದಿ:21 ಲಕ್ಷ ರೂಪಾಯಿಯ ಬೈಕ್ ಖರೀದಿಸಿ ಅದ್ಧೂರಿ ಮೆರವಣಿಗೆ ಮಾಡಿದ ಯುವಕ

Last Updated : Nov 11, 2022, 6:13 PM IST

ABOUT THE AUTHOR

...view details