ಥಾಣೆ : ನಾನು ಈ ರೀತಿಯ ದಿನವನ್ನು ಹಿಂದೆಂದೂ ನೋಡಿಲ್ಲ ಮತ್ತು ಅನುಭವಿಸಿಲ್ಲ ಎಂದು ಉಕ್ರೇನಿನಲ್ಲಿರುವ ವಿದ್ಯಾರ್ಥಿ ನಿತೀಶ್ ಕುಮಾರ್ ಹೇಳಿದ್ದಾರೆ. ಈಗಾಗಲೇ ಉಕ್ರೇನಿನಲ್ಲಿ ಪರಿಸ್ಥಿತಿ ಹದಗೆಟ್ಟಿದ್ದು ಭಾರತೀಯ ವಿದ್ಯಾರ್ಥಿಗಳು ಕಷ್ಟ ಪಡುವಂತಾಗಿದೆ. ಯುದ್ಧದಲ್ಲಿ ಹಾನಿಗೊಳಗಾದ ಖಾರ್ಕಿವ್‌ನಿಂದ ಹಿಂತಿರುಗಲು ಹಲವು ಆಯ್ಕೆಗಳು ಮತ್ತು ಮಾರ್ಗಗಳಿದ್ದವು ಆದರೆ, ಈ ಎಲ್ಲ ಮಾರ್ಗಗಳನ್ನು ನಿರ್ಬಂಧಿಸಿದ್ದರಿಂದ, ನಮಗೆ ತಮ್ಮ ತಾಯ್ನಾಡಿಗೆ ಮರಳಲು ಕಷ್ಟವಾಗಿದೆ ಎಂದು ಹೇಳಿದ್ದಾರೆ.
ಖಾರ್ಕಿವ್ ಮೆಟ್ರೋ ನಿಲ್ದಾಣದಲ್ಲಿ ನೂರಾರು ವಿದ್ಯಾರ್ಥಿಗಳಿಗೆ ಸ್ಥಳೀಯರು ಥಳಿಸಿದ್ದಾರೆ. ಭಾರತೀಯ ರಾಯಭಾರ ಕಚೇರಿಯು ನಗರವನ್ನು ತೊರೆಯಲು ಆದೇಶಿಸಿದ ನಂತರ ಸುಮಾರು 400 ಭಾರತೀಯ ವಿದ್ಯಾರ್ಥಿಗಳು ಖಾಸಗಿ ವಾಹನ ಮತ್ತು ಕಾಲ್ನಡಿಗೆಯಲ್ಲಿ ನಗರದಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದ್ದಾರೆ. ಬೆಳಗ್ಗೆ ಖಾರ್ಕಿವ್ ರೈಲು ನಿಲ್ದಾಣದಲ್ಲಿ ಎಲ್ಲಾ ವಿದ್ಯಾರ್ಥಿಗಳು ರೈಲಿಗಾಗಿ ಕಾಯುತ್ತಿದ್ದರು, ರೈಲು ಬಂದ ಮೇಲೆ ರೈಲಿನಲ್ಲಿ ಉಕ್ರೇನಿಯನ್ ನಾಗರಿಕರಿಗೆ ಮಾತ್ರ ಪ್ರಯಾಣಿಸಲು ಅವಕಾಶವಿತ್ತು ಭಾರತೀಯರಿಗೆ ಅನ್ಯಾಯ ಮಾಡಿದ್ದಾರೆ . ಹೀಗಾಗಿ ಈ ವಿದ್ಯಾರ್ಥಿಗಳು ನಗರದಿಂದ ತಪ್ಪಿಸಿಕೊಳ್ಳಲು ಹರಸಾಹಸ ಪಡುತ್ತಿದ್ದಾರೆ ಎಂದು ಅವರು ಹೇಳಿದ್ದಾರೆ.