ಕಣ್ಣೂರು, ಕೇರಳ:ಬೀದಿ ನಾಯಿ ಕಚ್ಚಿ 10 ವರ್ಷದ ಬಾಲಕ ಸಾವನ್ನಪ್ಪಿರುವ ಘಟನೆ ಕಣ್ಣೂರಿನ ಮುಝಾಪಿಲಂಗಾಡ್ನಲ್ಲಿ ನಡೆದಿದೆ. (Speech Impaired Boy) ಮೂಗನಾಗಿದ್ದ ನಿಹಾಲ್ ಮೃತಪಟ್ಟಿದ್ದಾನೆ. ಭಾನುವಾರ ಸಂಜೆ 5 ಗಂಟೆ ಸುಮಾರಿಗೆ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.
ಘಟನೆಯ ವಿವರ: ನಿಹಾಲ್ ಬಹ್ರೇನ್ ಮತ್ತು ನುಸೀಫಾದಲ್ಲಿ ಕೆಲಸ ಮಾಡುವ ನೌಶಾದ್ ಅವರ ಮಗ. ನಿಹಾಲ್ಗೆ ಚಿಕ್ಕ ವಯಸ್ಸಿನಿಂದಲೂ ಮಾತನಾಡಲು ಬರುವುದಿಲ್ಲ. ಭಾನುವಾರ ಸಂಜೆ 5 ಗಂಟೆ ಸುಮಾರು ನಿಹಾಲ್ ಮನೆಯ ಗೇಟ್ನಿಂದ ಹೊರಗೆ ತೆರಳಿದ್ದಾನೆ. ಈ ವೇಳೆ ರಕ್ಕಸ ಬೀದಿ ನಾಯಿಗಳು ನಿಹಾಲ್ ಮೇಲೆ ದಾಳಿ ನಡೆಸಿವೆ.
ನಿಹಾಲ್ ಕೆಲ ಗಂಟೆಗಳ ಬಳಿಕ ಕಾಣದೇ ಇದ್ದಾಗ ಕುಟುಂಬಸ್ಥರು ಹುಡುಕಾಟ ನಡೆಸಿದ್ದಾರೆ. ಸುಮಾರು 8.30ರ ವೇಳೆ ಮನೆಯಿಂದ 300 ಮೀಟರ್ ದೂರದಲ್ಲಿರುವ ಖಾಲಿ ಮನೆಯೊಂದರ ಬಳಿ ನಿಹಾಲ್ ಗಂಭೀರವಾಗಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದನು. ರಕ್ತದ ಮಡುವಿನಲ್ಲಿ ಪತ್ತೆಯಾದ ನಿಹಾಲ್ ಸೊಂಟದ ಕೆಳಗೆ ಗಂಭೀರ ಗಾಯಗಳಾಗಿದ್ದು, ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದನು.
ನಿಹಾಲ್‌ನನ್ನು ಸ್ಥಳೀಯರು ಪತ್ತೆ ಮಾಡಿ, ಕೂಡಲೇ ಹತ್ತಿರದ ಆಸ್ಪತ್ರೆಗೆ ಕರೆದೊಯ್ದರು. ಆದರೆ, ನಿಹಾಲ್ ಜೀವ ಉಳಿಸಲು ಸಾಧ್ಯವಾಗಲಿಲ್ಲ. ಇನ್ನು ನಿಹಾಲ್ ಮೃತದೇಹವನ್ನು ತಲಶ್ಶೇರಿ ಆಸ್ಪತ್ರೆಗೆ ರವಾನಿಸಲಾಗಿತ್ತು. ಮರಣೋತ್ತರ ಪರೀಕ್ಷೆ ಬಳಿಕ ಬಾಲಕನ ಮೃತದೇಹವನ್ನು ಕುಟುಂಬಸ್ಥರಿಗೆ ಹಸ್ತಾಂತರಿಸಲಾಗುವುದು. ಬಳಿಕ ನಿಹಾಲ್ ಅಂತ್ಯಕ್ರಿಯೆ ಸೋಮವಾರ ನಡೆಯಲಿದೆ. ಬೀದಿ ನಾಯಿಗಳ ಹಿಂಡು ದಾಳಿಯಲ್ಲಿ ಅವರ ತೊಡೆಯ ಒಂದು ಭಾಗ ಕಿತ್ತು ಹೋಗಿದೆ ಎಂದು ವರದಿಯಾಗಿದೆ.