ಬಡಾಮೆರ್/ರಾಜಸ್ಥಾನ : ತಾಯಿಯೊಬ್ಬಳು ತನ್ನ 10 ವರ್ಷದ ಮಗಳನ್ನು ಸುಟ್ಟು ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಪ್ರಕರಣ ಬೆಳಕಿಗೆ ಬಂದಿದೆ.
ಸುದ್ದಿ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಈ ಬಗ್ಗೆ ಪರಿಶೀಲನೆ ನಡೆಸಿದ್ದು, ತನಿಖೆ ಕೈಗೊಂಡಿದ್ದಾರೆ. ರಾಜಸ್ಥಾನ ಬಡಾಮೆರ್ ಜಿಲ್ಲೆಯಲ್ಲಿ ಪಾಕಿಸ್ತಾನ ಮೂಲದ ಕುಟುಂಬವೊಂದು ಕಳೆದ 2 ವರ್ಷಗಳಿಂದ ಬಡಾಮೆರ್ ಗಡಿ ಜಿಲ್ಲೆಯ ಚೌಹಾಟನ್ ಉಪವಿಭಾಗದಲ್ಲಿರುವ ಬಖ್ಸರ್ ಪೊಲೀಸ್ ಠಾಣೆ ವ್ಯಾಪ್ತಿಯ ಪ್ರದೇಶವೊಂದರಲ್ಲಿ ವಾಸವಿದ್ರು.
ಶುಕ್ರವಾರ ಗುಂಡಿಯೊಂದರಲ್ಲಿ ತಾಯಿ ಮತ್ತು ಸುಮಾರು 10 ವರ್ಷದ ಹೆಣ್ಣು ಮಗುವಿನ ಶವಗಳು ಸುಟ್ಟ ರೀತಿ ಪತ್ತೆಯಾಗಿದ್ದವು. ಸ್ಥಳದಲ್ಲಿ ಪೆಟ್ರೋಲ್ ಬಾಟಲ್ ದೊರೆತಿದೆ. ಶುಕ್ರವಾರ ನನ್ನ ಮಗಳನ್ನು ಸುಟ್ಟು ಹಾಕಿದ ನಂತರ ಸ್ವತಃ ತಾಯಿ ತಾನೂ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಮೃತ ಬಾಲಕಿಯ ತಂದೆ ಹೇಳಿದ್ದಾರೆ.
ಕಿಸ್ತುರಾಮ್ ಭಿಲ್ ಅವರು 2014ರಲ್ಲಿ ವೀಸಾದ ಮೇಲೆ ಭಾರತಕ್ಕೆ ಬಂದರು ಎಂದು ತಿಳಿದು ಬಂದಿದೆ. ಮೃತರು ಇಲ್ಲಿ ಅಕ್ರಮವಾಗಿ ವಾಸಿಸುತ್ತಿದ್ದರು ಎನ್ನಲಾಗಿದೆ. ಈ ಕುರಿತು ಮಾಹಿತಿಯನ್ನು ಸಹ ಸಂಗ್ರಹಿಸಲಾಗುತ್ತಿದೆ. ಸಂತ್ರಸ್ತೆಯ ತಂದೆಯ ವರದಿಯ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ತನಿಖೆ ಆರಂಭಿಸಿದ್ದಾರೆ.
ಇದನ್ನೂ ಓದಿ:ಅಕ್ರಮವಾಗಿ ಗಾಂಜಾ ಸಾಗಾಟ.. ಆರೋಪಿ ಅಂದರ್