ಪಾಲಿ(ರಾಜಸ್ಥಾನ):ದೇಶದಲ್ಲಿ ಎರಡನೇ ಹಂತದ ಕೋವಿಡ್ ಅಲೆ ಜೋರಾಗಿರುವ ಕಾರಣ ನಿತ್ಯ ಸಾವಿರಾರು ಸೋಂಕಿತರು ಆಸ್ಪತ್ರೆಗೆ ದಾಖಲಾಗುತ್ತಿದ್ದಾರೆ. ಅವರಿಗೆ ನೀಡಲು ಆಕ್ಸಿಜನ್ ಸಮಸ್ಯೆ ಉಂಟಾಗಿ ಹತ್ತಾರು ಜನರು ಸಾವನ್ನಪ್ಪುತ್ತಿರುವ ಘಟನೆ ನಡೆಯುತ್ತಿವೆ. ಇದರ ಮಧ್ಯೆ ಆಮ್ಲಜನಕ ಪೂರೈಕೆ ಮಾಡುವ ವೇಳೆ ನಿರ್ಲಕ್ಷ್ಯ ವಹಿಸುತ್ತಿರುವ ಘಟನೆಗಳು ಸಹ ಬೆಳಕಿಗೆ ಬರುತ್ತಿವೆ.
ಆಕ್ಸಿಜನ್ ಸಿಲಿಂಡರ್ಗಳನ್ನ ಒಂದು ಪ್ರದೇಶದಿಂದ ಮತ್ತೊಂದು ಪ್ರದೇಶಕ್ಕೆ ಸಾಗಣೆ ಮಾಡುವಾಗ ಅಧಿಕಾರಿಗಳು ನಿರ್ಲಕ್ಷ್ಯ ವಹಿಸುತ್ತಿರುವ ಕಾರಣ ನೂರಾರು ಟನ್ ಆಮ್ಲಜನಕ ವ್ಯರ್ಥವಾಗುತ್ತಿದೆ. ಇದೀಗ ರಾಜಸ್ಥಾನದ ಪಾಲಿ ಜಿಲ್ಲೆಯಲ್ಲಿ ರೈಲಿನಲ್ಲಿ ಸಾಗಣೆ ಮಾಡ್ತಿದ್ದ ಆಕ್ಸಿಜನ್ ಸೋರಿಕೆಯಾಗಿರುವ ಘಟನೆ ನಡೆದಿದೆ.