ಮುಂಬೈ:ಮಹಾರಾಷ್ಟ್ರದ ಮುಂಬೈನಲ್ಲಿ 26/11 ರ ಮಾದರಿಯಲ್ಲಿ ದಾಳಿ ನಡೆಸುವ ಬೆದರಿಕೆ ಸಂದೇಶ ಬಂದ ಬಳಿಕ ಪೊಲೀಸರು ನಡೆಸಿದ ಕಾರ್ಯಾಚರಣೆಯಲ್ಲಿ ಶಿರಡಿಯಲ್ಲಿ ಓರ್ವ ಶಂಕಿತ ಉಗ್ರನನ್ನು ಬಂಧಿಸಲಾಗಿದೆ.
ನವೆಂಬರ್ 11 ಮಾದರಿ ದಾಳಿ ಬೆದರಿಕೆ .. ಶಿರಡಿಯಲ್ಲಿ ಶಂಕಿತ ಉಗ್ರನ ಬಲೆ - ಈಟಿವಿ ಭಾರತ ಕನ್ನಡ ನ್ಯೂಸ್
ಮುಂಬೈಗೆ ಉಗ್ರ ದಾಳಿ ಬೆದರಿಕೆ ಸಂದೇಶ ರವಾನೆಯಾದ ಬಳಿಕ ಶಿರಡಿಯಲ್ಲಿ ಒಬ್ಬ ಶಂಕಿತ ಭಯೋತ್ಪಾದಕನನ್ನು ಮಹಾರಾಷ್ಟ್ರ ಎಟಿಎಸ್ ಮತ್ತು ಪಂಜಾನ್ ಪೊಲೀಸರು ಬಂಧಿಸಿದ್ದಾರೆ.
ಶಿರಡಿಯಲ್ಲಿ ಶಂಕಿತ ಉಗ್ರನ ಬಲೆ
ಮುಂಬೈ ಸಂಚಾರಿ ಪೊಲೀಸ್ ವಿಭಾಗಕ್ಕೆ ಉಗ್ರ ಬೆದರಿಕೆ ಸಂದೇಶ ಬರುತ್ತಿದ್ದಂತೆ ಎಚ್ಚೆತ್ತುಕೊಂಡು ತೀವ್ರ ತಲಾಶ್ ನಡೆಸುತ್ತಿರುವ ಪೊಲೀಸರು ಶಿರಡಿಯಲ್ಲಿ ಓರ್ವ ಶಂಕಿತ ಭಯೋತ್ಪಾದಕನನ್ನು ಬಂಧಿಸಿದ್ದಾರೆ. ಮಹಾರಾಷ್ಟ್ರದ ಎಟಿಎಸ್ ಮತ್ತು ಪಂಜಾಬ್ ಪೊಲೀಸರ ಜಂಟಿ ಕಾರ್ಯಾಚರಣೆ ನಡೆಸಿ ಉಗ್ರನನ್ನು ಬಂಧಿಸಲಾಗಿದೆ.