ನವದೆಹಲಿ: ಕನಿಷ್ಠ ಒಂದು ಡೋಸ್ ಲಸಿಕೆ ತೆಗೆದುಕೊಂಡ ನಂತರ ಕೊರೊನಾ ಸೋಂಕಿಗೆ ಒಳಗಾದವರಲ್ಲಿ ಶೇಕಡಾ 86.09 ರಷ್ಟು ಜನರು ಡೆಲ್ಟಾ ರೂಪಾಂತರ ಸೋಂಕಿಗೆ ಒಳಗಾಗಿದ್ದಾರೆ ಎಂದು ಐಸಿಎಂಆರ್ ಅಧ್ಯಯನ ಹೇಳಿದೆ.
ಲಸಿಕೆ ಪಡೆದ ಜನರಲ್ಲಿ ಕೋವಿಡ್ ಸೋಂಕಿನ ಬಗ್ಗೆ ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ(ಐಸಿಎಂಆರ್) ನಡೆಸಿದ ಅಧ್ಯಯನದಲ್ಲಿ ಈ ಬಗ್ಗೆ ಸ್ಪಷ್ಟಪಡಿಸಿದೆ. ರಾಷ್ಟ್ರೀಯ ಮಟ್ಟದಲ್ಲಿ ಇದೇ ಮೊದಲ ಬಾರಿಗೆ ಐಸಿಎಂಆರ್ ಅಧ್ಯಯನ ನಡೆಸಿದ್ದು, ಕನಿಷ್ಠ ಒಂದು ಡೋಸ್ ಲಸಿಕೆ ಪಡೆದಿದ್ದ 677 ಮಂದಿ ಸೋಂಕಿತರ ಮಾದರಿಗಳನ್ನು ಸಂಗ್ರಹಿಸಿ ವಿಶ್ಲೇಷಿಸಲಾಗಿದೆ. ಈ ಮಾದರಿಗಳನ್ನು ದೇಶದ 17 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಂದ ಸಂಗ್ರಹಿಸಲಾಗಿದೆ.
ಕೋವಿಡ್ ಸೋಂಕಿತ ಒಟ್ಟು 677 ಜನರಲ್ಲಿ 85 ಮಂದಿ ಲಸಿಕೆಯ ಮೊದಲ ಡೋಸ್ ಪಡೆದಿದ್ದರೆ ಪಡೆದರೆ, 592 ಜನರು ಎರಡು ಡೋಸ್‌ಗಳನ್ನು ತೆಗೆದುಕೊಂಡಿದ್ದರು. ಈ ಪೈಕಿ 604 ಜನರಿಗೆ ಕೋವಿಶೀಲ್ಡ್, 71 ಮಂದಿ ಕೋವ್ಯಾಕ್ಸಿನ್ ಹಾಗೂ ಇಬ್ಬರಿಗೆ ಚೀನಾದ ಸಿನೊಫಾರ್ಮ್ ಲಸಿಕೆ ನೀಡಲಾಗಿತ್ತು. ಇವರು ಒಟ್ಟು 71 ಪ್ರತಿಶತದಷ್ಟು ರೋಗಲಕ್ಷಣಗಳನ್ನು ಹೊಂದಿದ್ದರು. 29 ಮಂದಿ ಯಾವುದೇ ರೋಗ ಲಕ್ಷಣಗಳನ್ನು ಹೊಂದಿರಲಿಲ್ಲ. ಲಸಿಕೆ ಪೆಡಿದ್ದ ಜನರು ಆಸ್ಪತ್ರೆಗೆ ದಾಖಲಾಗುವ ಸಾಧ್ಯತೆ ಕಡಿಮೆ ಎಂದು ಅಧ್ಯಯನ ಹೇಳಿದೆ.