ಕರ್ನಾಟಕ

karnataka

ETV Bharat / bharat

ಚಿಕ್ಕ ಚುನಾವಣೆಯ ದೊಡ್ಡ ಸಂದೇಶ: ದೆಹಲಿ ಸ್ಥಳೀಯ ಚುನಾವಣೆ ಹೇಳೋದೇನು..?

ದೆಹಲಿಯ ಪುರಸಭೆ ಉಪಚುನಾವಣೆಯಲ್ಲಿ ಐದು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ, ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ತಮ್ಮ ಪ್ರಾಬಲ್ಯವನ್ನು ಇನ್ನೂ ಉಳಿಸಿಕೊಂಡಿದೆ ಎಂಬುದರಲ್ಲಿ ಸಂಶಯವಿಲ್ಲ. ಒಂದು ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ.

A strong message from small elections
ಚಿಕ್ಕ ಚುನಾವಣೆಯ ದೊಡ್ಡ ಸಂದೇಶ: ದೆಹಲಿ ಸ್ಥಳೀಯ ಚುನಾವಣೆ ಹೇಳೋದೇನು..?

By

Published : Mar 4, 2021, 1:40 AM IST

ನವದೆಹಲಿ:ಪ್ರಸ್ತುತ ಭಾರತದ ರಾಜಕೀಯದಲ್ಲಿ ಯಾವುದೇ ಚುನಾವಣೆಯನ್ನು ಸಣ್ಣ ಚುನಾವಣೆ ಅಥವಾ ದೊಡ್ಡ ಚುನಾವಣೆ ಎಂದು ದೃಢವಾಗಿ ಹೇಳಲು ಸಾಧ್ಯವಿಲ್ಲ. ಯಾವುದೇ ಚುನಾವಣೆಯಾದರೂ ಅತಿ ಮಹತ್ತರವಾದ ರಾಜಕೀಯ ಸಂದೇಶವನ್ನು ಮುಟ್ಟಿಸುವಲ್ಲಿ ಕೆಲವೊಮ್ಮೆ ಸಫಲವಾಗುತ್ತವೆ. ಇತ್ತೀಚೆಗೆ ನಡೆದ ತೆಲಂಗಾಣ, ಪಂಜಾಬ್ ಮತ್ತು ಗುಜರಾತ್‌ನ ಸ್ಥಳೀಯ ಸಂಸ್ಥೆಗಳ ಚುನಾವಣೆಗಳ ಫಲಿತಾಂಶಗಳೂ ಪಕ್ಷಗಳ ಭವಿಷ್ಯದ ವಿಚಾರದಲ್ಲಿ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲು ನೆರವಾಗುತ್ತವೆ.

ದೆಹಲಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯ ಕಾರಣದಿಂದ ಪಂಜಾಬ್​ನ ಸ್ಥಳೀಯ ಚುನಾವಣೆಯಲ್ಲಿ ಕಾಂಗ್ರೆಸ್​ ಕಡೆ ಮತದಾರರು ಒಲವು ತೋರಿದ್ದಾರೆ. ಗುಜರಾತ್ ಸ್ಥಳೀಯ ಚುನಾವಣೆಯಲ್ಲಿ ಬಿಜೆಪಿ ತನ್ನ ಗೆಲುವನ್ನು ಮುಂದುವರೆಸಿದೆ.

ಈಗ ರಾಜಕೀಯವಾಗಿ ಸಾಕಷ್ಟು ಮಹತ್ವ ಪಡೆದಿದ್ದ ದೆಹಲಿ ಮುನ್ಸಿಪಲ್ ಕಾರ್ಪೊರೇಶನ್ ಉಪಚುನಾವಣೆಯ ಫಲಿತಾಂಶಗಳು ರಾಜಕೀಯ ವಿಶ್ಲೇಷಕರಿಗೆ ಕೆಲವೊಂದು ನಿರ್ಣಯಗಳನ್ನು ತೆಗೆದುಕೊಳ್ಳಲು ನೆರವಾಗಿದೆ. ಐದು ಸ್ಥಾನಗಳಲ್ಲಿ ನಾಲ್ಕು ಸ್ಥಾನಗಳನ್ನು ಗೆಲ್ಲುವ ಮೂಲಕ, ಆಮ್ ಆದ್ಮಿ ಪಕ್ಷ ದೆಹಲಿಯಲ್ಲಿ ತಮ್ಮ ಪ್ರಾಬಲ್ಯವನ್ನು ಇನ್ನೂ ಉಳಿಸಿಕೊಂಡಿದೆ ಎಂಬುದರಲ್ಲಿ ಸಂಶಯವಿಲ್ಲ. ಒಂದು ಸ್ಥಾನದಲ್ಲಿ ಕಾಂಗ್ರೆಸ್ ಗೆದ್ದಿದ್ದು, ಎಲ್ಲರನ್ನೂ ಅಚ್ಚರಿಗೊಳಿಸಿದೆ. ವಿಶೇಷವೆಂದರೆ, ಐದು ಸ್ಥಾನಗಳ ಈ ಉಪಚುನಾವಣೆಯಲ್ಲಿ, ಬಿಜೆಪಿಗೆ ಒಂದು ಸ್ಥಾನವೂ ಸಿಕ್ಕಿಲ್ಲ.

ಇದನ್ನೂ ಓದಿ:ಸಕ್ರಿಯ ರಾಜಕಾರಣದಿಂದ ನಿವೃತ್ತಿ ಘೋಷಿಸಿದ ಶಶಿಕಲಾ ನಟರಾಜನ್​

ಆಮ್ ಆದ್ಮಿ ಪಕ್ಷವು ತ್ರಿಲೋಕ್‌ಪುರಿ, ಕಲ್ಯಾಣ್‌ಪುರಿ, ರೋಹಿಣಿ ಜೊತೆಗೆ ಶಾಲಿಮಾರ್ ಕ್ಷೇತ್ರಗಳನ್ನು ಗೆದ್ದಿದ್ದು, ಚೌಹಾನ್ ಬಂಗರ್ ಕ್ಷೇತ್ರದಿಂದ ಕಾಂಗ್ರೆಸ್ ಚುನಾವಣೆಯಲ್ಲಿ ಜಯಗಳಿಸಿತು. ಮಾಜಿ ಕೌನ್ಸಿಲರ್ ನಿಧನದ ನಂತರ ತೆರವಾಗಿದ್ದ ಶಾಲಿಮಾರ್​ನಲ್ಲಿ ಬಿಜೆಪಿ ತನ್ನ ಗೆಲುವನ್ನು ಮುಂದುವರೆಸಲು ಸಾಧ್ಯವಾಗಲಿಲ್ಲ.

ದೆಹಲಿಯ ಮುನ್ಸಿಪಲ್ ಕಾರ್ಪೊರೇಶನ್‌ಗೆ ಉಪಚುನಾವಣೆಯ ಫಲಿತಾಂಶದ ನಂತರ, ಬೇರೆ ಬೇರೆ ರಾಜ್ಯಗಳ ಚುನಾವಣೆಗಳಲ್ಲಿಯೂ ಸ್ಪರ್ಧಿಸುವ ಆಸಕ್ತಿಯನ್ನು ಆಮ್ ಆದ್ಮಿ ಪಕ್ಷ ತೋರುತ್ತಿದೆ. ಸದ್ಯಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಆಮ್ ಆದ್ಮಿ ಪಕ್ಷದಲ್ಲಿ ಬೇರೆ ಬ್ರಾಂಡೆಡ್ ನಾಯಕರಿಲ್ಲ ಎಂಬುದೂ ಕೂಡಾ ಸ್ವಲ್ಪ ಹಿನ್ನಡೆಯಾಗುವ ಸಾಧ್ಯತೆಯಿದೆ ಎನ್ನಲಾಗಿದೆ.

ಈಗಿನ ಚುನಾವಣಾ ಫಲಿತಾಂಶ ಆಮ್ ಆದ್ಮಿ ಪಕ್ಷಕ್ಕೆ ಟಾನಿಕ್​ನಂತೆ ಸಿಕ್ಕಿದ್ದು, 2022ರ ಚುನಾವಣೆಯ ಫಲಿತಾಂಶವನ್ನೂ ನಿರ್ಧರಿಸಲು ಸಾಮರ್ಥ್ಯ ಈ ಚುನಾವಣೆಗೆ ಇದೆ. ಕಾಂಗ್ರೆಸ್ ನಾಯಕರಲ್ಲೂ ಕೂಡಾ ಈ ಚುನಾವಣೆ ಹೊಸ ಹುಮ್ಮಸ್ಸನ್ನು ತುಂಬಿದೆ. ಬಿಜೆಪಿಗೆ ಖಂಡಿತವಾಗಿಯೂ ಎಚ್ಚರಿಕೆಯ ಗಂಟೆಯಾಗಿದೆ.

ABOUT THE AUTHOR

...view details