ಸೂರತ್: 7 ವರ್ಷದ ಪುಟ್ಟ ಬಾಲಕಿ ಮೇಲೆ ಬೀದಿ ನಾಯಿ ದಾಳಿ ಮಾಡಿರುವ ದಾರುಣ ಘಟನೆ ಗುಜರಾತ್ನ ಸೂರತ್ನ ವಾಪೂಲ್ಪಡ ಅಶ್ವನಿ ಕುಮಾರ್ ಸೊಸೈಟಿಯಲ್ಲಿ ನಡೆದಿದೆ. ಬಾಲಕಿಯನ್ನು ತಕ್ಷಣಕ್ಕೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಹುಡುಗಿಯ ಸ್ಥಿತಿ ಚಿಂತಾಜನಕವಾಗಿದೆ. ಬಾಲಕಿಯ ಮುಖಕ್ಕೆ ಅನೇಕ ಹೊಲಿಗೆಗಳನ್ನು ಹಾಕಲಾಗಿದೆ. ಘಟನೆ ಬಳಿಕ ಸ್ಥಳೀಯರು ಈ ಕುರಿತು ವರದಿ ಮಾಡಿದ ಹಿನ್ನೆಲೆ ಸಂಬಂಧ ಪಟ್ಟ ಇಲಾಖೆ ಅಧಿಕಾರಿಗಳು ಬೀದಿನಾಯಿಯನ್ನು ಹಿಡಿದು ಹೊತ್ತೊಯ್ಯಿದ್ದಾರೆ.
ಏನಿದು ಘಟನೆ:ಬಾಲಕಿ ಮನೆಯ ಮುಂದೆ ಗೇಟ್ ಹೊರಗೆ ಆಟವಾಡುವಾಗ ನಾಯಿಯೊಂದು ಓಡಿ ಹೋಗಿದೆ. ಈ ವೇಳೆ ಬಾಲಕಿ ನಾಯಿಗೆ ಅಟ್ಟಾಡಿಸಿದ್ದಾಳೆ. ಇದರಿಂದ ಬಾಲಕಿ ಮೇಲೇರಗಿದ ನಾಯಿ ಆಕೆಯನ್ನು ಕಚ್ಚಲು ಆರಂಭಿಸಿದೆ. ಈ ಸಂದರ್ಭದಲ್ಲಿ ಬೈಕ್ ಸವಾರನೊಬ್ಬ ಪಕ್ಕದಲ್ಲೇ ಹಾದು ಹೋಗುತ್ತಿರುವ ದೃಶ್ಯ ಕೂಡ ಸಿಸಿಟಿವಿಯಲ್ಲಿ ದಾಖಲಾಗಿದೆ. ಆದರೆ, ಆತ ಬಾಲಕಿ ರಕ್ಷಣೆಗೆ ಬಾರದೇ, ಹಾಗೇ ಮುಂದೆ ಸಾಗಿದ್ದಾನೆ.
ಈ ವೇಳೆ ಮಗುವಿನ ತಾಯಿ ಮನೆಯಿಂದ ಹೊರ ಬಂದಿದ್ದು, ಮಗುವಿನ ರಕ್ಷಣೆಗೆ ಧಾವಿಸಿದ್ದಾಳೆ. ನಾಯಿ ಮುಖಕ್ಕೆ ನೀರೇರುಚುವ ಮೂಲಕ ನಾಯಿಯನ್ನು ಓಡಿಸುವ ಯತ್ನ ನಡೆಸಿದ್ದಾರೆ. ತಕ್ಷಣಕ್ಕೆ ಮಗುವನ್ನು ಬಿಟ್ಟರೂ ಮತ್ತೆ ಮಗುವನ್ನು ಕಚ್ಚಲು ನಾಯಿ ಧಾವಿಸಿದೆ. ಈ ವೇಳೆ ಮಹಿಳೆಯ ಮುಂಜಾಗ್ರತೆಯಿಂದ ಮಗುವನ್ನು ಎಳೆದುಕೊಂಡಿದ್ದಾರೆ. ಗಂಭೀರವಾಗಿ ಗಾಯಗೊಂಡ ಬಾಲಕಿಯನ್ನು ರವಿ ಶರ್ಮಾ ಎಂದು ಗುರುತಿಸಲಾಗಿದ್ದು, ಈ ಬಾಲಕಿ ನರ್ಸರಿ ಓದುತ್ತಿದ್ದಾಳೆ. ತಮ್ಮ ಚಿಕ್ಕಪ್ಪನ ಮನೆಯಲ್ಲಿ ಆಕೆ ಇದ್ದಾಗ ಈ ಘಟನೆ ನಡೆದಿದೆ. ತಕ್ಷಣಕ್ಕೆ ಬಾಲಕಿಯನ್ನು ಪೋಷಕರು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಿದ್ದಾರೆ.