ಕರ್ನಾಟಕ

karnataka

ETV Bharat / bharat

ತಮಿಳುನಾಡು ತಲುಪಲು ಸಮುದ್ರದಲ್ಲಿ 13 ಕಿಲೋ ಮೀಟರ್ ಈಜಿದ ಶ್ರೀಲಂಕಾದ ಪ್ರಜೆ

ಮನ್ನಾರ್ ಜಿಲ್ಲೆಯ ಹಸನ್ ಖಾನ್ ಅಲಿಯಾಸ್ ಅಜಯ್ ಅಲಿಯಾಸ್ ಖಾನ್ ಎಂಬ ವ್ಯಕ್ತಿ ಸಮುದ್ರದಲ್ಲಿ ಈಜುವ ಮೂಲಕ ತಮಿಳುನಾಡಿನ ಧನುಷ್ಕೋಡಿ ತಲುಪಿದ್ದಾರೆ.

ಹಸನ್ ಖಾನ್ ಅಲಿಯಾಸ್ ಅಜಯ್ ಅಲಿಯಾಸ್ ಖಾನ್
ಹಸನ್ ಖಾನ್ ಅಲಿಯಾಸ್ ಅಜಯ್ ಅಲಿಯಾಸ್ ಖಾನ್

By

Published : Oct 10, 2022, 7:02 PM IST

Updated : Oct 10, 2022, 8:46 PM IST

ತಮಿಳುನಾಡು:ಶ್ರೀಲಂಕಾದ ಪ್ರಜೆಯೊಬ್ಬ ಪಾಕ್ ಜಲಸಂಧಿಯಿಂದ ಸುಮಾರು 13 ಕಿಲೋ ಮೀಟರ್​ ಈಜುವ ಮೂಲಕ ತಮಿಳುನಾಡಿನ ಧನುಷ್ಕೋಡಿ ತಲುಪಿದ್ದಾನೆ ಎಂಬುದು ತಿಳಿದುಬಂದಿದೆ.

ಮನ್ನಾರ್ ಜಿಲ್ಲೆಯ ಹಸನ್ ಖಾನ್ ಅಲಿಯಾಸ್ ಅಜಯ್ ಅಲಿಯಾಸ್ ಖಾನ್ ಎಂದು ಗುರುತಿಸಲಾದ ವ್ಯಕ್ತಿಯನ್ನು ಶ್ರೀಲಂಕಾ ನೌಕಾಪಡೆಯು ತನ್ನ ಮತ್ತು ಐದು ಜನರ ಕುಟುಂಬವನ್ನು ಅಕ್ರಮವಾಗಿ ತಮಿಳುನಾಡಿಗೆ ಸಾಗಿಸುತ್ತಿದ್ದ ದೋಣಿಯ ಮೇಲೆ ಗುಂಡು ಹಾರಿಸಿದ ನಂತರ ಸಮುದ್ರಕ್ಕೆ ಹಾರಿದ್ದಾನೆ. ಮೀನುಗಾರರಿಂದ ಮಾಹಿತಿ ಮೇರೆಗೆ ಸಾಗರ ಪೊಲೀಸರು ಆತನನ್ನು ವಿಚಾರಣೆಗೆ ಕರೆದೊಯ್ದಿದ್ದಾರೆ. ಕೇಂದ್ರ ಏಜೆನ್ಸಿಗಳ ಹಿರಿಯ ಅಧಿಕಾರಿಗಳು ಅವರನ್ನು ಈ ಬಗ್ಗೆ ಪ್ರಶ್ನಿಸಿದ್ದಾರೆ.

ಖಾನ್​ ಮೂರು ದಿನಗಳ ಹಿಂದೆಯೇ ಮನ್ನಾರ್ ಜಿಲ್ಲೆಯ ಐವರ ಕುಟುಂಬವು ಬಾಡಿಗೆಗೆ ಪಡೆದ ಅಕ್ರಮ ಹಡಗಿನಲ್ಲಿ ಶ್ರೀಲಂಕಾವನ್ನು ತೊರೆದಿದ್ದಾರೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ತಮಿಳುನಾಡು ತಲುಪಲು ಸಮುದ್ರದಲ್ಲಿ 13 ಕಿಲೋ ಮೀಟರ್ ಈಜಿದ ಶ್ರೀಲಂಕಾದ ಪ್ರಜೆ

ಅವರು ಅರಿಚಲಮುನೈ ಬಳಿಯ ಐದನೇ ದ್ವೀಪದ ಸಮೀಪದಲ್ಲಿದ್ದಾಗ ಸಮುದ್ರದ ಮಧ್ಯದಲ್ಲಿ ಗುಂಡಿನ ದಾಳಿಗಳು ನಡೆದಿವೆ. ಈ ವೇಳೆ ತೊಂದರೆಯನ್ನು ಗ್ರಹಿಸಿದ ಖಾನ್, ಹಡಗಿನಿಂದ ಜಿಗಿದಿದ್ದಾನೆ. ಯುವಕರು ಈಜುತ್ತಿದ್ದುದನ್ನು ಗಮನಿಸಿದ ರಾಮೇಶ್ವರಂ ಮೀನುಗಾರರು ಸಮುದ್ರ ಪೊಲೀಸರಿಗೆ ಮಾಹಿತಿ ನೀಡಿ ದಡಕ್ಕೆ ಕರೆತಂದಿದ್ದಾರೆ.

ಖಾನ್ ಹೇಳಿಕೆಯ ಪ್ರಕಾರ, ಅವರ ಪೋಷಕರು ಪುದುಚೇರಿಯ ನಿರಾಶ್ರಿತರ ಶಿಬಿರವಾದ ಕುತುಪಟ್ಟುದಲ್ಲಿ ವಾಸಿಸುತ್ತಿದ್ದರು ಮತ್ತು ಕೆಲವು ಸಂಬಂಧಿಕರು ರಾಮನಾಥಪುರದಲ್ಲಿ ವಾಸಿಸುತ್ತಿದ್ದರು. ಆರ್ಥಿಕ ಬಿಕ್ಕಟ್ಟಿನಿಂದಾಗಿ ಶ್ರೀಲಂಕಾದಲ್ಲಿ ಬದುಕಲು ಸಾಧ್ಯವಾಗದ ಕಾರಣ, ಅವನು ತನ್ನ ಹೆತ್ತವರನ್ನು ಸೇರಲು ಮತ್ತು ತಮಿಳುನಾಡು ಅಥವಾ ಪುದುಚೇರಿಯಲ್ಲಿ ಜೀವನೋಪಾಯಕ್ಕಾಗಿ ದ್ವೀಪ ರಾಷ್ಟ್ರ ತೊರೆದಿದ್ದಾನೆ.

ಮಂಡಪಂ ಠಾಣೆಯಲ್ಲಿ ಆರೋಪಿ ಬಂಧನ:ಆದರೆ, ಅವರ ಹೇಳಿಕೆಯಿಂದ ಭದ್ರತಾ ಸಂಸ್ಥೆಗಳು ತಬ್ಬಿಬ್ಬಾಗಿವೆ. ಶ್ರೀಲಂಕಾ ಪೊಲೀಸರೊಂದಿಗೆ ಅವರ ಗುರುತನ್ನು ಪರಿಶೀಲಿಸಲು ಅವರು ಉತ್ಸುಕರಾಗಿದ್ದರು. ಆದ್ದರಿಂದ ಖಾನ್ ಅವರನ್ನು ಮಂಡಪಂ ಠಾಣೆಯಲ್ಲಿ ಬಂಧಿಸಲಾಯಿತು.

ಪರಿಶೀಲನೆ ಪ್ರಕ್ರಿಯೆ ಮುಗಿದ ನಂತರ ಅವರನ್ನು ಮಾರ್ಚ್‌ನಿಂದ ಸುಮಾರು 175 ನಿರಾಶ್ರಿತರು ತಂಗಿರುವ ಮಂಡಪಂ ಪುನರ್ವಸತಿ ಶಿಬಿರದ ಅಧಿಕಾರಿಗಳಿಗೆ ಹಸ್ತಾಂತರಿಸಲಾಗುವುದು ಎಂದು ಅಧಿಕಾರಿ ಹೇಳಿದರು.

ಓದಿ:ದುಬೈಗೆ ಹೋಗಬೇಕೆಂದಿದ್ದ ವ್ಯಕ್ತಿ.. ಬಸ್ಸಿನಲ್ಲಿದ್ದ ಸಹ ಪ್ರಯಾಣಿಕರಿಗೆ ಮೆಣಸಿನಪುಡಿ ಎರಚಿದ.. ಯಾಕೆ?

Last Updated : Oct 10, 2022, 8:46 PM IST

ABOUT THE AUTHOR

...view details